- Home
- Entertainment
- Cine World
- Tourist Family: ಸಣ್ಣ ಮೊತ್ತದಲ್ಲಿ ನಿರ್ಮಾಣವಾಗಿ ಕೋಟಿ, ಕೋಟಿ ಹಣ ಬಾಚಿದ ಈ ಸಿನಿಮಾ; ಕಿಚ್ಚ ಸುದೀಪ್, ರಾಜಮೌಳಿ ಮೆಚ್ಚುಗೆ!
Tourist Family: ಸಣ್ಣ ಮೊತ್ತದಲ್ಲಿ ನಿರ್ಮಾಣವಾಗಿ ಕೋಟಿ, ಕೋಟಿ ಹಣ ಬಾಚಿದ ಈ ಸಿನಿಮಾ; ಕಿಚ್ಚ ಸುದೀಪ್, ರಾಜಮೌಳಿ ಮೆಚ್ಚುಗೆ!
ಸಾಕಷ್ಟು ಜನರು ಇಷ್ಟಪಟ್ಟ ʼಟೂರಿಸ್ಟ್ ಫ್ಯಾಮಿಲಿʼ ಸಿನಿಮಾ ಈಗ ಒಟಿಟಿಯಲ್ಲಿ ಬಿಡುಗಡೆಯಾಗಿ, ಇನ್ನಷ್ಟು ಜನರಿಗೆ ಹತ್ತಿರವಾಗಿದೆ. ಈ ಸಿನಿಮಾವನ್ನು ಪ್ರೇಕ್ಷಕರು ಒಪ್ಪಿಕೊಂಡು, ತಬ್ಬಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಎಂ ಶಶಿಕುಮಾರ್, ಸಿಮ್ರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಟೈಮ್‌ನಲ್ಲಿ ನಡೆಯುವ ಕಥೆ ʼಟೂರಿಸ್ಟ್ ಫ್ಯಾಮಿಲಿʼ ಸಿನಿಮಾದಲ್ಲಿದೆ. ತಮಿಳು ಕುಟುಂಬವೊಂದು ಬದುಕಲು ಹೋರಾಡುವುದರ ಜೊತೆಗೆ, ಉತ್ತಮ ಭವಿಷ್ಯದ ಕನಸು ಕಾಣುವ ಪ್ರಯತ್ನವು ಈ ಸಿನಿಮಾದಲ್ಲಿದೆ. ಅಭಿಷನ್ ಜೀವಿಂತ್ ನಿರ್ದೇಶನದ ಈ ಸಿನಿಮಾವನ್ನು ನಜರತ್ ಪಾಸಿಲಿಯನ್, ಮಾಗೇಶ್ ರಾಜ್ ಪಾಸಿಲಿಯನ್, ಮತ್ತು ಯುವರಾಜ್ ಗಣೇಶನ್ ಅವರು ನಿರ್ಮಿಸಿದ್ದಾರೆ.
ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ 5ನೇ ತಮಿಳು ಸಿನಿಮಾ ಎಂಬ ಹೆಗ್ಗಳಿಕೆಯೂ ಇದೆ. ವಿದಾಮುಯರ್ಚಿ, ಡ್ರಾಗನ್, ಗುಡ್ ಬ್ಯಾಡ್ ಅಗ್ಲಿ, ರೆಟ್ರೋ ಸಿನಿಮಾ ಉಳಿದ ಸ್ಥಾನದಲ್ಲಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್‌ನಿಲ್ಕ್ ಪ್ರಕಾರ, "ಟೂರಿಸ್ಟ್ ಫ್ಯಾಮಿಲಿ" 16 ಕೋಟಿ ರೂಪಾಯಿ ಬಂಡವಾಳದಲ್ಲಿ ನಿರ್ಮಾಣವಾಗಿ ಈಗ ವಿಶ್ವಾದ್ಯಂತ 84 ಕೋಟಿ ರೂಪಾಯಿ ಮತ್ತು ಭಾರತದಲ್ಲಿ 53 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಚಿತ್ರಮಂದಿರಗಳಲ್ಲಿ ತೆರೆ ಕಂಡ ಬಳಿಕ ಈಗ ಒಟಿಟಿಯಲ್ಲಿ, "ಟೂರಿಸ್ಟ್ ಫ್ಯಾಮಿಲಿ" ನಂ 1 ಸ್ಥಾನದಲ್ಲಿದೆ. ಇದರ ಜೊತೆಗೆ ಈ ಸಿನಿಮಾದ IMDb ರೇಟಿಂಗ್ 8.5/10 ಆಗಿದೆ.
ಮಿಥುನ್ ಜೈ ಶಂಕರ್, ಕಮಲೇಶ್, ಯೋಗಿ ಬಾಬು, ರಮೇಶ್ ತಿಲಕ್, ಎಂ.ಎಸ್. ಭಾಸ್ಕರ್ ಇತರರು ನಟಿಸಿದ್ದಾರೆ.
ಅಂದಹಾಗೆ ನಟ ಕಿಚ್ಚ ಸುದೀಪ್, ನಿರ್ದೇಶಕ ಎಸ್ ರಾಜಮೌಳಿ ಕೂಡ ಈ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.