- Home
- Entertainment
- Cine World
- ಶಿವಣ್ಣನ ಸ್ಥಾನಕ್ಕೆ ತೆಲುಗು ಬಾಲಕೃಷ್ಣ ಆಯ್ಕೆ; ಜೈಲರ್-2 ಸಿನಿಮಾದಲ್ಲಿ ರಜನಿಕಾಂತ್‌ಗೆ ಸಾಥ್ ಕೊಡೋರಾರು?
ಶಿವಣ್ಣನ ಸ್ಥಾನಕ್ಕೆ ತೆಲುಗು ಬಾಲಕೃಷ್ಣ ಆಯ್ಕೆ; ಜೈಲರ್-2 ಸಿನಿಮಾದಲ್ಲಿ ರಜನಿಕಾಂತ್‌ಗೆ ಸಾಥ್ ಕೊಡೋರಾರು?
ರಜನಿಕಾಂತ್ ಅವರೇ ಸ್ವತಃ ಬಾಲಕೃಷ್ಣ ಅವರಿಗೆ ಜೈಲರ್ ಸಿನಿಮಾದಲ್ಲಿ ನಟಿಸಲು ಬರುವಂತೆ ಕೇಳಿದರೂ ಬರಲಿಲ್ಲ. ಆದರೆ, ಇದೀಗ ಮಲ್ಟಿಸ್ಟಾರ್ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಅದೂ ಕೂಡ ನಮ್ಮ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಥಾನ ತುಂಬಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ...

ಬಾಲಕೃಷ್ಣ ತಮ್ಮ ಕೆರಿಯರ್ ಆರಂಭದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳನ್ನು ಮಾಡಿದ್ದರು. ಆದರೆ, ಒಬ್ಬಂಟಿಯಾಗಿ ಸೋಲೋ ಹೀರೋ ಆಗಿ ಸೆಟ್ ಆದ ನಂತರ ಆ ಕಡೆ ಗಮನ ಕೊಟ್ಟಿರಲಿಲ್ಲ. ಈಗ ಮತ್ತೆ ಮಲ್ಟಿಸ್ಟಾರ್ ಸಿನಿಮಾ ಮಾಡ್ತಾರಂತೆ. ಸೌತ್‌ನಲ್ಲಿ ಬರ್ತಿರೋ ಒಂದು ದೊಡ್ಡ ಮಲ್ಟಿಸ್ಟಾರ್ ಸಿನಿಮಾದಲ್ಲಿ ನಟಿಸುತ್ತಾರಂತೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೂ ಕೂಡ ಕನ್ನಡದ ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಚಿಕಿತ್ಸೆಗೆ ಹೋಗಿರುವ ಕಾರಣ ಅವರ ಸ್ಥಾನಕ್ಕೆ ಬಾಲಕೃಷ್ಣ ಬರಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. 74 ವರ್ಷದಲ್ಲೂ ತಮ್ಮದೇ ಶೈಲಿ ಮತ್ತು ಉತ್ಸಾಹದಿಂದ ಅಭಿಮಾನಿಗಳನ್ನು ರಂಜಿಸುತ್ತಿರುವ ರಜನಿಕಾಂತ್, ಈಗ ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಚಿನ್ನದ ಕಳ್ಳಸಾಗಣೆ ಕಥೆಯನ್ನು ಹೊಂದಿದೆ.
ಜೈಲರ್ ಸಿನಿಮಾದ ನಂತರ, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್ 2' ಚಿತ್ರದಲ್ಲಿ ರಜನಿಕಾಂತ್ ನಟಿಸಲಿದ್ದಾರೆ. ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ನೆಲ್ಸನ್ ದಿಲೀಪ್ ಕುಮಾರ್ ತೊಡಗಿಸಿಕೊಂಡಿದ್ದಾರೆ. 2023 ರಲ್ಲಿ ಬಿಡುಗಡೆಯಾದ 'ಜೈಲರ್' ಮೊದಲ ಭಾಗವು ವಿಶ್ವಾದ್ಯಂತ 650 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ವಿಮರ್ಶಕರಿಂದಲೂ ಮೆಚ್ಚುಗೆ ಪಡೆದಿದೆ, ಇದರಿಂದ ಎರಡನೇ ಭಾಗದ ಮೇಲಿನ ನಿರೀಕ್ಷೆ ಹೆಚ್ಚಿದೆ.
'ಜೈಲರ್' ಮೊದಲ ಭಾಗದಲ್ಲಿ ರಜನಿಕಾಂತ್ ಜೊತೆ ರಮ್ಯಕೃಷ್ಣ ನಟಿಸಿದ್ದಾರೆ. ಇವರ ಮಗನಾಗಿ ವಸಂತ್ ರವಿ ಮತ್ತು ಅವರ ಜೋಡಿಯಾಗಿ ಮೀರ್ನಾ ನಟಿಸಿದ್ದಾರೆ. ಮಲಯಾಳಂ ನಟ ವಿನಾಯಕನ್ ಖಳನಾಯಕನ ಪಾತ್ರದಲ್ಲಿದ್ದಾರೆ. ತಮನ್ನಾ, ಯೋಗಿ ಬಾಬು, ಸುನಿಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೋಹನ್ ಲಾಲ್, ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್, ಜಾಕಿ ಷ್ರಾಫ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮೊದಲ ಭಾಗದ ನಟರೇ ಜೈಲರ್-2 ಭಾಗದಲ್ಲೂ ನಟಿಸುವ ಸಾಧ್ಯತೆ ಇದೆ. ಆದರೆ ಕಥೆಗೆ ತಕ್ಕಂತೆ ಕೆಲವು ಬದಲಾವಣೆಗಳೂ ಆಗಬಹುದು. ಮೋಹನ್ ಲಾಲ್, ಶಿವ ರಾಜ್ ಕುಮಾರ್ ಪಾತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಒಂದು ಮುಖ್ಯ ಅಪ್ಡೇಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ನಟ ಶಿವರಾಜ್ ಕುಮಾರ್ ಕಳೆದ ಎರಡು ತಿಂಗಳಿನಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಅವರ ಜಾಗದಲ್ಲಿ 'ಜೈಲರ್ 2' ಚಿತ್ರದಲ್ಲಿ ತೆಲುಗು ಸ್ಟಾರ್ ಬಾಲಕೃಷ್ಣ ಅವರನ್ನು ನಟಿಸುವಂತೆ ನೆಲ್ಸನ್ ದಿಲೀಪ್ ಕುಮಾರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಇದು ನಿಜವಾದರೆ, ಸಿನಿಪ್ರಿಯರಿಗೆ ಹಬ್ಬ. ಈ ಸಿನಿಮಾ ಎಲ್ಲಿಗೆ ಹೋಗುತ್ತದೆ ಎಂದು ಊಹಿಸುವುದೂ ಕಷ್ಟ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.