Coronavirus: ಅರ್ಜುನ್ ಕಪೂರ್‌ಗೆ ಮತ್ತೆ ಪಾಸಿಟಿವ್.. ಪರೀಕ್ಷೆಗೆ ಒಳಗಾದ ಮಲೈಕಾ
ಮುಂಬೈ(ಡಿ. 29) ಕೊರೋನಾ ರೂಪಾಂತರಿ (Coronavirus) ಬಾಲಿವುಡ್ (Bollywood) ಅಂಗಳವನ್ನು ಕಾಡುತ್ತಿದೆ. ಇತ್ತೀಚೆಗೆ ತಾನೇ ಕರೀನಾ ಕಪೂರ್ ಖಾನ್, ಅಮೃತಾ ಅರೋರಾ, ಸೀಮಾ ಖಾನ್, ಮಹೀಪ್ ಕಪೂರ್ ಹಾಗೂ ಅವರ ಪುತ್ರಿ ಶನಾಯಾ ಕಪೂರ್ ಕೊರೋನಾ ಸೋಂಕಿಗೆ (Omicron) ಗುರಿಯಾಗಿದ್ದರು. ಇದೀಗ ಬಾಲಿವುಡ್ ನಟ ಅರ್ಜುನ್ ಕಪೂರ್ ಗೆ (Arjun Kapoor) ಕೊರೋನಾ ಸೋಂಕು ದೃಢಪಟ್ಟಿದೆ.

ಇದೀಗ ಅರ್ಜುನ್ ಕಪೂರ್, ಸಹೋದರಿ ಅನುಶಾಲಾ ಕಪೂರ್, ರಿಯಾ ಕಪೂರ್ ಹಾಗೂ ಅವರ ಪತಿ ಚಿತ್ರ ನಿರ್ಮಾಪಕ ಕರಣ್ ಬೂಲಾನಿಗೂ ಕೋವಿಡ್-19 ದೃಢಪಟ್ಟಿದೆ. ಕೊರೋನಾ ಸೋಂಕಿಗೆ ಒಳಗಾದವರು ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ಮೂಡ್ ನಲ್ಲಿದ್ದವರು ಮನೆ ಸೇರಿಕೊಳ್ಳುವಂತೆ ಆಗಿದೆ.
2020 ರ ಸೆಪ್ಟೆಂಬರ್‌ನಲ್ಲಿ ಅರ್ಜುನ್ ಕಪೂರ್ ಮೊದಲ ಸಾರಿ ಸೋಂಕಿಗೆ ಗುರಿಯಾಗಿದ್ದರು. ಇದೀಗ ಅರ್ಜುನ್ ಜತೆ ರಿಯಾ ಕಪೂರ್, ಕರಣ್ ಬೂಲಾನಿ, ಅಂಶುಲಾ ಕಪೂರ್ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ.
ಅರ್ಜುನ್ ಕಪೂರ್ ಸೋಂಕಿಗೆ ಒಳಗಾಗಿರುವುದು ಗೊತ್ತಾಗುತ್ತಿದ್ದಂತೆ ಗರ್ಲ್ ಫ್ರೆಂಡ್ ಮಲೈಕಾ ಅರೋರಾ ಸಹ ಪರೀಕ್ಷೆಗೆ ಒಳಗಾಗಿದ್ದಾರೆ. ವರ್ಷಾಂತ್ದಯದ ಸಂಭ್ರಮದಲ್ಲಿದ್ದ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಸೋಶಿಯಲ್ ಮೀಡಿಯಾ ಮೂಲಲ ಕೊರೋನಾ ಸೋಂಕಿಗೆ ಒಳಗಾಗಿರುವ ವಿಚಾರ ಹಂಚಿಕೊಂಡಿರುವ ಅರ್ಜುನ್ ಕಪೂರ್ ನನ್ನ ಜತೆ ಸಂಪರ್ಕಕ್ಕೆ ಬಂದವರು ಪರೀಕ್ಷೆಗೆ ಒಳಗಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕೊರೋನಾ ಸೋಂಕು ರೂಪಾಂತರಿ ತಡೆಗೆ ಕರ್ನಾಟಕ ಸರ್ಕಾರ ಸಹ ದಿಟ್ಟ ಕ್ರಮ ತೆಗೆದುಕೊಂಡಿದ್ದು ವರ್ಷಾಂತ್ಯದ ವಿಚಾರಣೆಗೆ ಬ್ರೇಕ್ ಹಾಕಿದೆ. ನೈಟ್ ಕರ್ಫ್ಯೂ ಜಾರಿ ಮಾಡಿದ್ದು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಡೆಲ್ಟಾ ಸೇರಿದಂತೆ ರೂಪಾಂತರಿಗಳಿಗೆ ಹೋಲಿಕೆ ಮಾಡಿದರೆ ಒಮೀಕ್ರೋನ್ ಹರಡುವ ವೇಗ ಹೆಚ್ಚಿದೆ. ಇದೇ ಕಾರಣಕ್ಕೆ ಹಲವು ದೇಶಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು ಮತ್ತೆ ಲಾಕ್ ಡೌನ್ ಮೊರೆ ಹೋಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.