ಆ ಒಂದು ಘಟನೆ ಆಶಿಕಿ ನಟ ಅನು ಅಗರ್ವಾಲ್ ಕೆರಿಯರ್‌ ಹಾಳು ಮಾಡಿತು!

First Published Jan 12, 2021, 2:34 PM IST

90ರ ದಶಕದ ಸೂಪರ್‌ಹಿಟ್ ಚಿತ್ರ ಆಶಿಕಿ ನಟಿ ಅನು ಅಗರ್ವಾಲ್ ಅವರ 52ನೇ ಹುಟ್ಟುಹಬ್ಬವಿತ್ತು ನಿನ್ನೆ. 11 ಜನವರಿ 1969ರಂದು ದೆಹಲಿಯಲ್ಲಿ ಜನಿಸಿದ ಅನುಸ, ಆಶಿಕಿ ಸಿನಿಮಾದಿಂದ ನೇಮ್‌ ಅಂಡ್‌ ಫೇಮ್‌ ಪಡೆದರು. ರಾಹುಲ್ ರಾಯ್ ಮುಖ್ಯ  ಪ್ರಮುಖ ಪಾತ್ರ ವಹಿಸಿದ್ದಾರೆ. ಆಶಿಕಿ ನಂತರ, ಅನು ಅಗರ್ವಾಲ್ ಕಿಂಗ್ ಅಂಕಲ್ ಮತ್ತು ಖಳ್‌ನಾಯಿಕ ಮುಂತಾದ ಸಿನಿಮಾಗಳಲ್ಲಿ ನಟಿಸಿದರೂ ಅವರ ಕೆರಿಯರ್‌ ಗ್ರಾಫ್‌ ಮೇಲೆರಲಿಲ್ಲ.  ಅನು ಅಗರ್ವಾಲ್ ಕೊನೆಯ ಬಾರಿಗೆ 1996 ರಲ್ಲಿ ಬಿಡುಗಡೆಯಾದ ದೇವ್ ಆನಂದ್ ಮತ್ತು ಧರ್ಮೇಂದ್ರ ನಟಿಸಿದ ರಿಟರ್ನ್ ಆಫ್ ಜ್ಯುವೆಲ್ ಥೀಫ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

1999ರಲ್ಲಿ ಭೀಕರ ಅಪಘಾತದ ನಂತರ ಅನು ಕೋಮಾಕ್ಕೆ ಹೋದರು.  ಸುಮಾರು 29 ದಿನಗಳ ಕಾಲ ಕೋಮಾದಲ್ಲಿದ್ದ ಅನು ಪ್ರಜ್ಞೆ ಬಂದಾಗ, ತನ್ನನ್ನು ಸಂಪೂರ್ಣವಾಗಿ ಮರೆತಿದ್ದರು.

ಈ ಅಪಘಾತದಿಂದ ಚೇತರಿಸಿಕೊಳ್ಳಲು ಅವರಿಗೆ ಹಲವು ವರ್ಷಗಳು ಬೇಕಾದವು ಮತ್ತು ಆ ಹೊತ್ತಿಗೆ ಅವರ  ಸಿನಿಮಾ ಕೆರಿಯರ್‌ ಸಂಪೂರ್ಣವಾಗಿ ಹಾಳಾಯಿತು.

ನೆನಪನ್ನು ಕಳೆದುಕೊಂಡ ಅನು ಅಗರ್ವಾಲ್ 3 ವರ್ಷಗಳ ಕಾಲ ಚಿಕಿತ್ಸೆಗೆ ಒಳಗಾಗಿದ್ದು, ನಂತರ ಆಕೆ ತನ್ನ ನೆನಪಿನಶಕ್ತಿ ಮರಳಿ ಪಡೆಯಲು ಸಾಧ್ಯವಾಯಿತು.

'ನಾನು ಮೊದಲಿನಿಂದಲೂ ಯೋಗ ಮಾಡುತ್ತಿದ್ದೆ ಮತ್ತು 1997ರಲ್ಲಿ ಉತ್ತರಾಖಂಡದ ಆಶ್ರಮದಲ್ಲಿ ಯೋಗ ಕಲಿತಿದ್ದೇನೆ. ಆದರೆ ಈ ಮಧ್ಯೆ, ನನಗೆ 1999ರಲ್ಲಿ ಅಪಘಾತ ಸಂಭವಿಸಿತು ಮತ್ತು ನಾನು ಕೋಮಾದಲ್ಲಿದ್ದೆ.  ಕೋಮಾದಲ್ಲಿ ನಾನು ಸಾಯುತ್ತೇನೆ ಎಂದು ವೈದ್ಯರು ನನ್ನ ಪೋಷಕರಿಗೆ ತಿಳಿಸಿದರು. ಆದರೆ ಯೋಗ ಯೋಗದ ಸಹಾಯದಿಂದ ನಾನು ಸಾವನ್ನು ಸಹ ಸೋಲಿಸಿದೆ' ಎಂದು  ಅನು ಸಂದರ್ಶನವೊಂದರಲ್ಲಿ ಹೇಳಿದ್ದರು.

'1996ರವರೆಗೆ ಚಲನಚಿತ್ರಗಳನ್ನು ಮಾಡಿದ ನಂತರ ನನಗೆ ವರ್ಲ್ಡ್‌ ಟೂರ್‌ ಮಾಡುವ ಮನಸ್ಸು ಇತ್ತು ಮತ್ತು ಇದನ್ನು ಕೇಳಿದರೆ, ನನ್ನ ಸಹಾಯಕ ನನಗೆ ಮನೋವೈದ್ಯರ ಅಗತ್ಯವಿದೆ ಎಂದು ಭಾವಿಸಿದರು. ವಾಸ್ತವವಾಗಿ ನಾನು ಬಾಲಿವುಡ್ ಟೈಪ್‌ ಅವಳಲ್ಲ ಎಂದು ಭಾವಿಸಲು ಪ್ರಾರಂಭಿಸಿದೆ, ಹಾಗಾಗಿ ನನ್ನ ಬಾಂದ್ರಾ ಮನೆ ಮತ್ತು ಕಾರನ್ನು ಮಾರಿದೆ. ಇದರ ನಂತರ, ನಾನು ವಿಶ್ವ ಪ್ರವಾಸಕ್ಕೆ ಹೋಗಿದ್ದೆ,' ಎಂದು ಇಂಟರ್‌ವ್ಯೂವ್‌ನಲ್ಲಿ ಹೇಳಿಕೊಂಡಿದ್ದಾರೆ ಅನು.

ಅನು ಅಗರ್ವಾಲ್ ಕೊನೆಯ ಬಾರಿಗೆ 1996ರಲ್ಲಿ ಬಿಡುಗಡೆಯಾದ 'ರಿಟರ್ನ್ ಆಫ್ ಜ್ಯುವೆಲ್ ಥೀಫ್' ಚಿತ್ರದಲ್ಲಿ ಕಾಣಿಸಿಕೊಂಡರು, ಇದರಲ್ಲಿ  ದೇವ್ ಆನಂದ್ ಮತ್ತು ಧರ್ಮೇಂದ್ರ ಅವರೊಂದಿಗೆ ನಟಿಸಿದ್ದಾರೆ ಈ ನಟಿ.

ಬಹಳ ಸಮಯದಿಂದ ಚಿತ್ರಗಳಿಂದ ದೂರವಿರುವ  ಅನು ಅಗರ್ವಾಲ್  ಸಾಕಷ್ಟು ಬದಲಾಗಿದ್ದು,  ಈಗ ಅವರನ್ನು ಗುರುತಿಸುವುದು ಕಷ್ಟ.

1996 ರ ನಂತರ ಯಾವುದೇ ಸಿನಿಮಾದಲ್ಲಿ ಕೆಲಸ ಮಾಡದ ಅನು  ಯೋಗ ಮತ್ತು ಆಧ್ಯಾತ್ಮಿಕತೆಯತ್ತ ಹೊರಳಿದರು.

ಭೀಕರ ಅಪಘಾತದ ನಂತರ, ಅನು ಅಗರ್ವಾಲ್ ಈಗ ಗ್ಲಾಮರ್ ವರ್ಲ್ಡ್ ನಿಂದ ದೂರದಲ್ಲಿರುವ ಕೊಳೆಗೇರಿಯಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಯೋಗ ಕಲಿಸುತ್ತಾರೆ.

ಸುಮಾರು 3 ವರ್ಷಗಳ ಹಿಂದೆ, 2018ರ ಏಪ್ರಿಲ್‌ನಲ್ಲಿ ಮಹೇಶ್ ಭಟ್ ಅವರ ಪ್ರೊಡಕ್ಷನ್ ಹೌಸ್ ಸ್ಪೆಷಲ್ ಫಿಲ್ಮ್ಸ್‌ನ 30ನೇ ವಾರ್ಷಿಕೋತ್ಸವದ ಪಾರ್ಟಿಯಲ್ಲಿ ಅನು ಅಗರ್ವಾಲ್ ಕೊನೆಯ ಬಾರಿಗೆ ಕಾಣಿಸಿಕೊಂಡರು.

'ಅನ್‌ಯುಸ್‌ಫುಲ್: ಮೆಮೋಯಿರ್ ಆಫ್ ಎ ಗರ್ಲ್ ಹೂ ಕೇಮ್ ಬ್ಯಾಕ್ ಫ್ರಮ್ ಡೆಡ್' ಜೀವನಚರಿತ್ರೆಯಲ್ಲಿ ಅನು ತನ್ನ ಕಥೆಯನ್ನು ಬರೆದಿದ್ದಾರೆ. ಪ್ರಸ್ತುತ, ಅನು ಅಗರ್ವಾಲ್ ಫೌಂಡೇಶನ್ ಎಂಬ ಪ್ರತಿಷ್ಠಾನವನ್ನು ನಡೆಸುತ್ತಿದ್ದು, ಇದರ ಅಡಿಯಲ್ಲಿ ಮುಂಬೈನ ಕೊಳೆಗೇರಿಗಳಲ್ಲಿ ವಾಸಿಸುವ ಬಡ ಮಕ್ಕಳಿಗೆ ಉಚಿತವಾಗಿ ಯೋಗವನ್ನು ಕಲಿಸುತ್ತಾರೆ.

ಅನು ಅಗರ್ವಾಲ್ ದೆಹಲಿ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. ಓದುತ್ತಿರುವಾಗ ಅನು ಅವರಿಗೆ ಮಹೇಶ್ ಭಟ್ ಅವರ 'ಆಶಿಕಿ ಚಿತ್ರದಲ್ಲಿ ಮೊದಲ ಕೆಲಸ ನೀಡಲಾಯಿತು. ಕೇವಲ 21ನೇ ವಯಸ್ಸಿನಲ್ಲಿ ನಟನಾ ಜಗತ್ತಿನಲ್ಲಿ ಪ್ರವೇಶಿಸಿದ ಅನು, ಈ ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್‌ ಆದರು.

'ಗಜಾಬ್ ತಮಾಶಾ', 'ಖಲ್ನಾಯಿಕಾ', 'ಕಿಂಗ್ ಅಂಕಲ್', 'ಕನ್ಯಾದಾನ್', ಜನ್ಮ ಕುಂಡಲಿ ಮತ್ತು 'ರಿಟರ್ನ್ ಟು ಜ್ಯುವೆಲ್ ಥೀಫ್ 'ಚಿತ್ರಗಳಲ್ಲಿ ನಟಿಸಿರುವ ಅನು ಅಗರ್ವಾಲ್  ತಮಿಳು ಚಿತ್ರ ತಿರುಡಾ-ತಿರುಡಾ ಮತ್ತು ದಿ ಕ್ಲೌಡ್ ಡೋರ್ ಎಂಬ ಕಿರುಚಿತ್ರದಲ್ಲೂ ಕೆಲಸ ಮಾಡಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?