ವಾಕಿಂಗ್ ಸ್ಟಿಕ್ ಹಿಡಿದು ನಡೆಯುತ್ತಿರುವ ಆಮೀರ್ ಖಾನ್; ಕಾಲಿಗೆ ಆಗಿದ್ದೇನು?
ಒಂದು ಕಡೆ ಕಿಯಾರಾ ಸಿದ್ಧಾರ್ಥ್ ಮದುವೆ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದ್ದರೆ ಇನ್ನೊಂದು ಕಡೆ ಸಿನಿಮಾರಂಗದ ಎಲ್ಲಾ ಸೂಪರ್‌ಸ್ಟಾರ್‌ಗಳು ಒಟ್ಟಿಗೆ ರಾಜಸ್ತಾನದಲ್ಲಿ ಒಂದು ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಫೋಟೋಗಳು ಸಖತ್ ವೈರಲ್ ಆಗಿವೆ. ಅಷ್ಷಕ್ಕೂ ಈ ಮದುವೆ ಯಾರದು? ಮದುವೆಯಲ್ಲಿ ಭಾಗವಹಿಸಿದ ಸೂಪರ್‌ಸ್ಟಾರ್ಸ್ ಯಾರಾರು ನೋಡೋಣ.

ಜೈಪುರದಲ್ಲಿ ನಡೆದ ಒಂದು ಮದುವೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಇದರಲ್ಲಿ ಏನು ವಿಶೇಷ ಅಂದರೆ ಸೌತ್‌ನ ಸೂಪರ್ ಸ್ಟಾರ್ ಕಮಲ್ ಹಾಸನ್, ಪೃಥ್ವಿರಾಜ್ ಸುಕುಮಾರನ್ ಜೊತೆಗೆ ಬಾಲಿವುಡ್‌ನ ಹೀರೋಗಳಾದ ಆಮೀರ್ ಖಾನ್, ಅಕ್ಷಯ್ ಕುಮಾರ್ ಮತ್ತು ಡೈರೆಕ್ಟರ್ ಕರಣ್ ಜೋಹರ್ ಸಹ ಕಾಣಿಸಿಕೊಂಡಿದ್ದಾರೆ.
ರಾಂಬಾಗ್ ಅರಮನೆಯಲ್ಲಿ ನಡೆದ ದಿ ವಾಲ್ಟ್ ಡಿಸ್ನಿ ಕಂಪನಿ ಇಂಡಿಯಾ ಮತ್ತು ಸ್ಟಾರ್ ಇಂಡಿಯಾ ಅಧ್ಯಕ್ಷ ಕೆ ಮಾಧವನ್ ಅವರ ಪುತ್ರನ ಅದ್ಧೂರಿ ವಿವಾಹ ಸಮಾರಂಭದಲ್ಲಿ ಭಾರತೀಯ ಚಿತ್ರರಂಗದ ಎ-ಲಿಸ್ಟರ್ ನಟರು ಭಾಗವಹಿಸಿದ್ದರು.
ಆಮೀರ್, ಕಮಲ್ ಹಾಸನ್, ಮೋಹನ್‌ಲಾಲ್, ಅಕ್ಷಯ್ ಮತ್ತು ಕರಣ್ ಎಲ್ಲರೂಈ ಮದುವೆಗಾಗಿ ಬಿಳಿಯ ಶೆಡ್‌ನ ಎಥ್ನಿಕ್ ಇಂಡಿಯನ್ ಲುಕ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದು ವಿಶೇಷವಾಗಿತ್ತು.
ಮುಂದಿನ ಸಾಲಿನಲ್ಲಿ ಕಮಲ್ ಹಾಸನ್ ಪಕ್ಕದಲ್ಲಿ ಅಕ್ಷಯ್ ಕುಮಾರ್ ಕುಳಿತಿದ್ದಾರೆ. ಅವರ ಹಿಂದೆ, ಅಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಕುಳಿತಿರುವುದನ್ನು ಕಾಣಬಹುದು.
ಮದುವೆಯ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆಮೀರ್ ಖಾನ್ ವಾಕಿಂಗ್ ಸ್ಟಿಕ್ ಹಿಡಿದು ನಡೆಯುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಕ್ರೀಮ್ ಕುರ್ತಾ ಮತ್ತು ಪೈಜಾಮ ಜೊತೆಗೆ ದುಪ್ಪಟ್ಟಾ ಧರಿಸಿದ್ದ ಕರಣ್ ಜೋಹರ್ ನೋಡಿದ ನೆಟಿಜನ್ಸ್ ಮೊದಲ ಬಾರಿಗೆ ಕರಣ್ ಸಂಧರ್ಭಕ್ಕೆ ಸರಿಯಾಗಿ ಬಟ್ಟೆ ಧರಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಈ ರಾಯಲ್ ವೆಡ್ಡಿಂಗ್‌ನಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರ ಪತ್ನಿ ಸುಪ್ರಿಯಾ ಸಹ ಹಾಜರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನ ಫ್ಯಾನ್ ಪೇಜ್‌ಗಳು ಈ ಫೋಟೋಗಳನ್ನು ಹೊಂಚಿಕೊಂಡಿವೆ
ಅದೇ ಸಮಯದಲ್ಲಿ ಮದುವೆಯಲ್ಲಿ ಮೋಹನ್‌ಲಾಲ್ ಅವರೊಂದಿಗೆ ಭಾಂಗ್ರಾ ಡ್ಯಾನ್ಸ್ ಮಾಡುವ ವೀಡಿಯೊವನ್ನು ಅಕ್ಷಯ್ ಕುಮಾರ್ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.