ಮದುವೆಗೆ ಜೊತೆಯಾಗಿ ಹಾಜರಾದ ಆಮೀರ್ ಖಾನ್, ಕರಣ್ ರಾವ್
ಕೆಲವು ತಿಂಗಳ ಹಿಂದೆ, ವಿಚ್ಛೇದನ ಘೋಷಿಸಿದ ಬಾಲಿವುಡ್ ನಟ ಆಮೀರ್ ಖಾನ್ ಅವರು ತಮ್ಮ ಪತ್ನಿ ಕಿರಣ್ ರಾವ್ ದಂಪತಿ ಜೊತೆಯಾಗಿ ವಿವಾಹ ಸಮಾರಂಭವೊಂದರಲ್ಲಿ ಕಾಣಿಸಿಕೊಂಡು ಹೋಸ್ಟ್ ಹಾಗೂ ಅತಿಥಿಗಳನ್ನು ಅಚ್ಚರಿಗೊಳಿಸಿದರು. ಮಾಜಿ ದಂಪತಿಯ ಫೋಟೋಗಳು ಸಖತ್ ವೈರಲ್ ಆಗಿವೆ.

ಕೆಲವು ತಿಂಗಳ ಹಿಂದೆ, ಬಾಲಿವುಡ್ ನಟ ಆಮೀರ್ ಖಾನ್ ಅವರು ತಮ್ಮ ಪತ್ನಿ ಕಿರಣ್ ರಾವ್ ಅವರಿಂದ ವಿಚ್ಛೇದನ ಘೋಷಿಸುವ ಮೂಲಕ ಅವರ ಅಭಿಮಾನಿಗಳು ಮತ್ತು ದೇಶವನ್ನು ಬೆಚ್ಚಿಬೀಳಿಸಿದರು. ಜುಲೈ 2021 ರ ಬೆಳಗ್ಗೆ, ಈ ಸುದ್ದಿ ಹೊರಬಂದಿತು ಮತ್ತು ಕಾಳ್ಗಿಚ್ಚಿನಂತೆ ಹರಡಿತು.
ಮದುವೆಯಾದ 15 ವರ್ಷಗಳ ನಂತರ ಈ ಜೋಡಿ ಬೇರೆಯಾಗಲು ನಿರ್ಧರಿಸಿತು. ಇನ್ನು ಮುಂದೆ ಗಂಡ ಹೆಂಡತಿಯಾಗಿ ಇರುವುದಿಲ್ಲ. ಆದರೆ ಇಬ್ಬರೂ ಜೊತೆಯಾಗಿ, ಮಗನ ಆರೈಕೆ ಮಾಡುವುದಾಗಿ ಮತ್ತು ಕೆಲಸಗಳನ್ನು ಸಹ ಒಟ್ಟಿಗೆ ಮಾಡುವುದಾಗಿ ಹೇಳಿಕೆ ನೀಡಿದ್ದರು ಆಮೀರ್ ಮತ್ತು ಕಿರಣ್ ರಾವ್.
ಈ ದಂಪತಿಗೆ ಆಜಾದ್ ರಾವ್ ಖಾನ್ ಎಂಬ ಮಗನಿದ್ದಾನೆ. ಲಗಾನ್ ಸೆಟ್‌ನಲ್ಲಿ ಕಿರಣ್ ಮತ್ತು ಆಮೀರ್ ಮೊದಲ ಬಾರಿಗೆ ಭೇಟಿಯಾದರು ಮತ್ತು ಪ್ರೀತಿಸಲು ಶುರು ಮಾಡಿದ್ದರು. ಸ್ವಲ್ಪ ದಿನಗಳಳ್ಲಿಯೇ ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಆಮೀರ್‌ಗೆ ಇದು ಎರಡನೇ ಮದುವೆಯಾಗಿತ್ತು.
ಆಮೀರ್ ಮತ್ತು ಕಿರಣ್ ಸದ್ಯ ತಮ್ಮ ಮುಂದಿನ ದೊಡ್ಡ ಯೋಜನೆಯಾದ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣದಲ್ಲಿದ್ದಾರೆ.
ವರದಿಗಳ ಪ್ರಕಾರ, ಆಮೀರ್ ಮತ್ತು ಕಿರಣ್ ತಮ್ಮ ವಿಚ್ಛೇದನ ಘೋಷಣೆಯ ನಂತರ ಸ್ನೇಹಿತರ ಕುಟುಂಬ ವಿವಾಹ ಸಮಾರಂಭದಲ್ಲಿ ಜೊತೆಯಾಗಿ ಪಾಲ್ಗೊಂಡರು. ಮತ್ತು ಎಲ್ಲರಿಗೂ ಶಾಕ್ ನೀಡಿದ್ದರು.
ಮದುವೆಗೆ ಆಗಮಿಸಿದ ಜನರು ಆಮೀರ್ ಏಕಾಂಗಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ಅವರು ತಮ್ಮ ಮಾಜಿ ಪತ್ನಿ ಕಿರಣ್‌ನೊಂದಿಗೆ ಬಂದರು. ಅದು ಸಂಪೂರ್ಣವಾಗಿ ಅನಿರೀಕ್ಷಿತವಾಗಿತ್ತು. ಮಾಜಿ ದಂಪತಿ ಮದುವೆಯ ಹೋಸ್ಟ್ ಜೊತೆ ಏನು ನೆಡದೇ ಇಲ್ಲ ಅನ್ನುವ ರೀತಿಯಲ್ಲಿ ಬೆರೆತರು ಎಂದು TOI ವರದಿ ಮಾಡಿದೆ.
ಆಮೀರ್ ಮತ್ತು ಕಿರಣ್ ಜೊತೆಯಾಗಿ ಕಾಣಿಸಿಕೊಂಡ ಸುದ್ದಿ ವೈರಲ್ ಆಗಿದೆ. ಡಿವೋರ್ಸ್ ನಂತರ ಇಬ್ಬರೂ ಹೀಗೆ ಜೊತೆಯಾಗಿ ಕಾಣಿಸಿಕೊಳ್ಳುವುತ್ತಿರುವುದು ಇದೇ ಮೊದಲಲ್ಲ. ಆಮೀರ್ ಕಿರಣ್ ರಾವ್ ಅವರ ಈ ನಡೆಗಳು ಈ ಜೋಡಿ ಡಿವೋರ್ಸ್ ನಂತರ ಇನ್ನೂ ಕ್ಲೋಸ್ ಆಗಿದ್ದಾರಾ ಎಂದು ಫ್ಯಾನ್ಸ್‌ನಲ್ಲಿ ಆಚ್ಚರಿ ಮೂಡಿಸಿದೆ.
ಕೆಲವು ತಿಂಗಳ ಹಿಂದೆ, ಅಮೀರ್ ಖಾನ್ ಕಿರಣ್ ರಾವ್ ಮತ್ತು ಅವರ ಮಗನೊಂದಿಗೆ ಲಡಾಖ್ ಈಶಾನ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಸ್ಥಳೀಯರೊಂದಿಗೆ ಮಾಜಿ ಜೋಡಿ ನೃತ್ಯ ಮಾಡುತ್ತಿರುವ ಹಲವು ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.