ಒಂದು ಫೋನ್ ಕಾಲ್‌ನಿಂದ ಶುರುವಾಗಿತ್ತು ಆಮೀರ್ - ಕಿರಣ್ ರಾವ್ ಲವ್‌ಸ್ಟೋರಿ!
ಪ್ರಸ್ತುತ ಬಾಲಿವುಡ್ ನಟ ಆಮೀರ್ ಖಾನ್ ಪರ್ಸನಲ್ ಲೈಫ್ ಹೆಡ್‌ಲೈನ್ ನ್ಯೂಸ್ ಆಗಿದೆ. ಆಮೀರ್ ಹಾಗೂ ಅವರ ಎರಡನೇ ಪತ್ನಿ ಕಿರಣ್ ರಾವ್ ತಮ್ಮ 15 ವರ್ಷಗಳ ಮ್ಯಾರೀಡ್ ಲೈಫ್‌ಗೆ ಮುಕ್ತಾಯ ಹೇಳಿದ್ದಾರೆ. ನ್ನ ಮೊದಲ ಪತ್ನಿ ರೀನಾಗೆ ವಿಚ್ಛೇದನ ನೀಡಿದ ನಂತರ ಆಮೀರ್ ಖಾನ್ ಕಿರಣ್ ರಾವ್ ನಡುವೆ ಪ್ರೀತಿ ಹೇಗೆ ಶುರುವಾಯಿತು ಗೊತ್ತಾ? ಇವರ ಇಂಟರೆಸ್ಟಿಂಗ್ ಲವ್ ಸ್ಟೋರಿ ವಿವರ ಇಲ್ಲಿದೆ.
ಕೆಲವು ದಿನಗಳ ಹಿಂದೆ,ಆಮೀರ್ ಖಾನ್ ಮತ್ತು ಕಿರಣ್ ರಾವ್ ತಾವು ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದು ಇದು ಬಿ ಟೌನ್ ಮತ್ತು ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.
ಮದುವೆಯಾಗಿ 15 ವರ್ಷಗಳ ನಂತರ, ಈ ದಂಪತಿಗಳು ಬೇರೆಯಾಗುತ್ತಾರೆಂದು ಯಾರೂ ಊಹಿಸಿರಲಿಲ್ಲ.
'ಈ 15 ಸುಂದರ ವರ್ಷಗಳಲ್ಲಿ, ನಾವು ಜೀವನದ ಅನುಭವಗಳು, ಸಂತೋಷ ಮತ್ತು ನಗೆಯನ್ನು ಹಂಚಿಕೊಂಡಿದ್ದೇವೆ ಮತ್ತು ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಬೆಳೆದಿದೆ. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ. ಇನ್ನು ಮುಂದೆ ನಾವು ಗಂಡ ಮತ್ತು ಹೆಂಡತಿಯಾಗಿ ಇರುವುದಿಲ್ಲ, ಆದರೆ ಪರಸ್ಪರ ಪೋಷಕರು ಮತ್ತು ಕುಟುಂಬವಾಗಿ ಇರುತ್ತೇವೆ' ಎಂದು ಅಮೀರ್ ಖಾನ್ ಮತ್ತು ಕಿರಣ್ ರಾವ್ ಆನೌನ್ಸ್ ಮಾಡಿದ್ದಾರೆ.
ಕಿರಣ್ ಆಮೀರ್ ಅವರ ಎರಡನೇ ಪತ್ನಿ. ಅವರು ಮೊದಲು ರೀನಾ ದತ್ತಾ ಅವರನ್ನು ಮದುವೆಯಾಗಿದ್ದು. 16 ವರ್ಷಗಳ ನಂತರ 2002 ರಲ್ಲಿ ದಂಪತಿಗಳು ಡಿವೋರ್ಸ್ ಪಡೆದರು.
2002 ರ ಸೂಪರ್ ಹಿಟ್ ಚಿತ್ರ ಲಗಾನ್ ಚಿತ್ರದ ಶೂಟಿಂಗ್ ಸಮಯದಲ್ಲಿ ಆಮೀರ್ ಖಾನ್ ಜೀವನದಲ್ಲಿ ಕಿರಣ್ ರಾವ್ ಬಂದರು.
ಲಗಾನ್ ಸಿನಿಮಾದ ಸಹಾಯಕ ನಿರ್ದೇಶಕರಾಗಿ ಅಮೀರ್‌ಗೆ ಕಿರಣ್ ಸಹಾಯ ಮಾಡಿದ್ದ ಕಿರಣ್ ಮತ್ತು ಅವರ ಪ್ರೇಮಕಥೆ ಹೇಗೆ ಪ್ರಾರಂಭವಾಯಿತು ಎಂದು ಅಮೀರ್ ಒಮ್ಮೆ ಹೇಳಿದ್ದರು.
ಒಂದು ಫೋನ್ ಕರೆ ತನ್ನ ಮತ್ತು ಕಿರಣ್ ನಡುವಿನ ಎಲ್ಲವನ್ನೂ ಬದಲಾಯಿಸಿತ್ತು ಎಂದು ಅವರು ಹೇಳಿದರು.
ರೀನಾರಿಂದ ವಿಚ್ಛೇದನದ ನಂತರ, ಎಮೋಷನಲಿ ವೀಕ್ ಆಗಿದ್ದ ಆಮೀರ್ ಅವರನ್ನು ವಿಚಾರಿಸಲು ಒಂದು ರಾತ್ರಿ ಕಿರಣ್ ಫೋನ್ ಮಾಡಿದ್ದರು. ಸುಮಾರು ಅರ್ಧ ಗಂಟೆ ಮಾತಾಡಿದ ನಂತರ ಆಮೀರ್ ಖುಷಿ ಮತ್ತು ರಿಲ್ಯಾಕ್ಸ್ ಆದರು. ಹೀಗೆ ಅವರ ನಡುವೆ ಪ್ರೀತಿ ಶುರುವಾಯಿತು.
ಡಿಸೆಂಬರ್ 28, 2005 ರಂದು ವಿವಾಹವಾದ ಈ ದಂಪತಿಗಳು ಸರೋಗೆಸಿ ಮೂಲಕ ಆಜಾದ್ ರಾವ್ ಖಾನ್ ಎಂಬ ಮಗನನ್ನು ಹೊಂದಿದ್ದಾರೆ.