ಕೊರಿಯೋಗ್ರಾಫರ್ ಫರಾಹ್ ಖಾನ್ ಹಾಗೂ 9 ವರ್ಷ ಕಿರಿಯ ಶಿರೀಶ್ ಕುಂದರ್ ಲವ್ ಸ್ಟೋರಿ !
ಸಿನಿ ನಿರ್ದೇಶನ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಬಹಳ ಕಡಿಮೆ ಎನ್ನಬಹುದು. ಆದರೆ ಜನವರಿ 9, 1965ರಂದು ಮುಂಬೈನಲ್ಲಿ ಜನಿಸಿರುವ ಫರಾಹ್ ಖಾನ್ ಬಾಲಿವುಡ್‌ನಲ್ಲಿ ಮಹಿಳಾ ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಡೈರೆಕ್ಟರ್ ಮಾತ್ರವಲ್ಲ, ಜೊತೆಗೆ ಹಿಂದಿ ಸಿನಿಮಾ ರಂಗದ ಫೇಮಸ್ ನೃತ್ಯ ಸಂಯೋಜಕರು ಕೂಡ ಹೌದು. ತಮ್ಮ ಕೆಲಸದ ಜೊತೆ ವೈಯಕ್ತಿಕ ಜೀವನದಿಂದಲೂ ಫರಾಹ್ ಸಾಕಷ್ಟು ಚರ್ಚೆಯಲ್ಲಿದ್ದಾರೆ. ತನಗಿಂತ 9 ವರ್ಷದ ಕಿರಿಯ ಶಿರೀಶ್ ಕುಂದರ್ ಅವರನ್ನು ಮದುವೆಯಾಗಿರುವ ಅವರ ಲವ್ ಸ್ಟೋರಿಯ ವಿವರ ಇಲ್ಲಿದೆ.
ಫರಾಹ್ ಪತಿ ಶಿರೀಶ್ ಕುಂದರ್ ಎಡಿಟರ್ ಹಾಗೂ ಫಿಲ್ಮ್‌ಮೇಕರ್. ಅವರಿಗಿಂತ 9 ವರ್ಷ ಚಿಕ್ಕವರನ್ನು ಫರಾಹ್ ವಿವಾಹವಾದ ಸುದ್ದಿ ಬಹಿರಂಗವಾದಾಗ, ಬಹಳಷ್ಟು ಟೀಕೆಗೆ ಗುರಿಯಾದರು. ಆದರೆ ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂದು ಈ ಕಪಲ್ ಪ್ರೂವ್ ಮಾಡಿದೆ.
ಸಂದರ್ಶನವೊಂದರಲ್ಲಿ, ಫರಾಹ್ ತನ್ನ ಪತಿಯ ಪ್ರಪೋಸಲ್ ಮಾಡಿದ ಬಗ್ಗೆ ಹೇಳಿದ್ದರು. ಶಿರೀಶ್ ಮಾತಿನಲ್ಲಿಯೇ ಅವರನ್ನು ಮೋಡಿ ಮಾಡಿದ್ದಾರೆಂದು ಹೇಳಿದ್ದರು ಫರಾಹ್ ಖಾನ್.
'ಮೇನ್ ಹೂ ನಾ' ಚಿತ್ರದ ಸೆಟ್‌ನಲ್ಲಿ ಶಿರೀಶ್ ಮತ್ತು ಫರಾಹ್ ಅವರ ಪ್ರೇಮಕಥೆ ಪ್ರಾರಂಭವಾಯಿತು. ಶಿರೀಶ್ ಅವರು ಫರಾಹ್ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಅವರಿಗೆ ಸಿನಿಮಾದ ಎಡಿಟಿಂಗ್‌ಗೆ ಆಫರ್ ಮಾಡಿದಾಗ ಏನನ್ನೂ ಯೋಚಿಸದೆ ತಕ್ಷಣವೇ ಒಪ್ಪಿಕೊಂಡರು.
ಈ ಕೆಲಸಕ್ಕಾಗಿ ಶಿರೀಶ್‌ಗೆ ಜಾಸ್ತಿ ಹಣವು ಸಿಗಲಿಲ್ಲ. ಆದರೂ ಫರಾಹ್‌ಗಾಗಿ ಈ ಕೆಲಸಕ್ಕೆ ಶಿರೀಶ್ ಒಪ್ಪಿಕೊಂಡಿದ್ದರು. ಇದರ ನಂತರ 7 ತಿಂಗಳ ಕಾಲ ಇಬ್ಬರು ಪರಸ್ಪರ ಡೇಟಿಂಗ್ ಮಾಡಿದ್ದರು.
ಶಿರೀಶ್ ತನ್ನನ್ನು ಪ್ರೀತಿಸುತ್ತಿರುವ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ ಎಂದು ಫರಾಹ್ ಹೇಳಿದ್ದರು.
ಫರಾಹ್‌ರನ್ನು ಮದುವೆಯಾಗಬೇಕೆಂದು ಬಯಸಿದ್ದ ಶಿರೀಶ್ ಪ್ರಪೋಸ್ ಮಾಡಿದ್ದರು.
'ಡಾರ್ಲಿಂಗ್ ನೀನು ನನ್ನನ್ನು ಮದುವೆಯಾಗಲು ಬಯಸದಿದ್ದರೆ, ದೂರ ಹೋಗು. ನಾನು ನಿನ್ನನ್ನು ನೋಡುವ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ನೀನು ಸಿರಿಯಸ್ ಆಗಿದ್ದರೆ, ನಾವು ಮದುವೆಯಾಗುವ ಹಾಗಿದ್ದರೆ, ನಾವು ಈ ಸಂಬಂಧವನ್ನು ಮುಂದುವರಿಸೋಣ' ಎಂದು ಶಿರೀಶ್ ಅವರಿಗೆ ಪ್ರಪೋಸ್ ಮಾಡಿದಾಗ ಹೇಳಿದ್ದರು ಎಂಬುದನ್ನು ಫರಾಹ್ ಖಾನ್ ಬಹಿರಂಗ ಪಡಿಸಿದ್ದಾರೆ.
ಪ್ರಪೋಸಲ್ ನಂತರ ಫರಾಹ್ ಸಾಕಷ್ಟು ಯೋಚನೆ ಮಾಡಿದ್ದರು. ನಂತರ ಅವರು ಒಪ್ಪಿಕೊಂಡರು.ಇದರ ನಂತರ, ಮೊದಲು 2004ರಲ್ಲಿ ರಿಜಿಸ್ಟರ್ ಮದುವೆಯಾದ ನಂತರ ದಕ್ಷಿಣ ಭಾರತದ ಶೈಲಿಯಲ್ಲಿ ವಿವಾಹವಾದರು.
ಪ್ರಸ್ತುತ ಈ ಜೋಡಿ ತ್ರಿವಳಿ ಮಕ್ಕಳಾದ ಜಾರ್, ದಿವಾ ಮತ್ತು ಅನ್ಯಾರ ಪೋಷಕರಾಗಿದ್ದಾರೆ.