ಈ ಜೋಡಿನಾ ಆನ್‌ಸ್ಕ್ರೀನ್ ಮೇಲೆ ನೋಡಲು ಫ್ಯಾನ್ಸ್‌ಗೆ ಕಾತುರ!
ಬಾಲಿವುಡ್‌ನ ಹಲವು ಸ್ಟಾರ್‌ಗಳು ಇನ್ನೂ ಒಟ್ಟಿಗೆ ನಟಿಸಿಲ್ಲ. ಅವರನ್ನು ಅನ್‌ಸ್ಕ್ರೀನ್‌ನಲ್ಲಿ ಜೋಡಿಗಳಾಗಿ ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ. ದಿವಾ ದೀಪಿಕಾ ಪಡುಕೋಣೆ ಇನ್ನೂ ಈ ಸೂಪರ್‌ಸ್ಟಾರ್ ಜೊತೆ ಕೆಲಸ ಮಾಡಿಲ್ಲ. ಹಾಗೇ ಆಮೀರ್‌ಖಾನ್- ವಿದ್ಯಾ ಬಾಲನ್ ಅಥವಾ ಕಂಗನಾ ರಣಾವತ್-ಅಕ್ಷಯ್ ಕುಮಾರ್ ಇರಬಹುದು. ಇವರ ತೆರೆ ಮೇಲಿನ ಕೆಮಿಸ್ಟ್ರಿ ನೋಡಲು ಜನ ಕಾಯುತ್ತಿದ್ದಾರೆ. ಇಲ್ಲಿವೆ ನೋಡಿ ಅಂಥ ಜೋಡಿಗಳ ವಿವರ.
ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಅನೇಕ ಬಾರಿ ಒಟ್ಟಿಗೆ ಜೋಡಿಯಾಗಿ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ, ಆದರೆ ಕೆಲವು ನಟ ನಟಿಯರು ಪರಸ್ಪರ ಜೊತೆಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲ. ಸಿನಿಮಾದಲ್ಲಿ ಒಟ್ಟಿಗೆ ನಟಿಸದ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.
ದೀಪಿಕಾ ಪಡುಕೋಣೆ-ಸಲ್ಮಾನ್ ಖಾನ್:
ನಟ ಸಲ್ಮಾನ್ ಖಾನ್ ಎದುರು ನಟಿಸಲು ದೀಪಿಕಾ ಪಡುಕೋಣೆಗೆ ಹಲವು ಆಫರ್ಸ್ ಬಂದಿವೆ. ಆತರೂ ತೆರೆ ಕಾಣಿಸಿಕೊಳ್ಳಲು ಮುಹೂರ್ತ ಬಂದಿಲ್ಲ. ದೀಪಿಕಾ ಶಾರುಖ್ ಖಾನ್, ರಣವೀರ್ ಸಿಂಗ್, ಅರ್ಜುನ್ ಕಪೂರ್, ಮತ್ತು ಶಾಹಿದ್ ಕಪೂರ್ ಮುಂತಾದ ನಟರೊಂದಿಗೆ ಕೆಲಸ ಮಾಡಿದ್ದಾರೆ.
ವಿದ್ಯಾ ಬಾಲನ್-ಆಮೀರ್ ಖಾನ್ :
ಆಮೀರ್ ಖಾನ್ ಮತ್ತು ವಿದ್ಯಾ ಬಾಲನ್ ಬಾಲಿವುಡ್‌ನ ಇಬ್ಬರು ಪ್ರಮುಖ ನಟರು, ಅವರ ಪಾತ್ರಗಳ ಆಯ್ಕೆ ಮತ್ತು ಅಭಿನಯಗಳಿಗೆ ಹೆಸರುವಾಸಿಯಾಗಿದ್ದಾರೆ. ಆದರೆ ಚಲನಚಿತ್ರಕ್ಕಾಗಿ ಎಂದಿಗೂ ಒಟ್ಟಿಗೆ ಸೇರಿಲ್ಲ.
ರಣವೀರ್ ಸಿಂಗ್ - ಶ್ರದ್ಧಾ ಕಪೂರ್ :
ಶ್ರದ್ಧಾ ಕಪೂರ್ ಮತ್ತು ರಣವೀರ್ ಸಿಂಗ್ ಒಂದು ಚಿತ್ರದಲ್ಲೂ ಒಟ್ಟಿಗೆ ಕೆಲಸ ಮಾಡಿಲ್ಲ.ಅವರ ಹಿಂದಿನ ಚಿತ್ರಗಳನ್ನು ನೋಡಿದರೆ, ರಣವೀರ್ ಮತ್ತು ಶ್ರದ್ಧಾ ಜೋಡಿ ಅನ್‌ಸ್ಕ್ರೀನ್‌ನಲ್ಲಿ ಉತ್ತಮವಾಗಿರುತ್ತದೆ ಎಂದು ಊಹಿಸಬಹುದು.
ಆಲಿಯಾ ಭಟ್ - ಟೈಗರ್ ಶ್ರಾಫ್ :
ಸ್ಟುಡೆಂಟ್ ಆಫ್ ದಿ ಇಯರ್ 2 ಚಿತ್ರದ ಹಾಡಿಗೆ ಆಲಿಯಾ ಭಟ್ ಮತ್ತು ಟೈಗರ್ ಶ್ರಾಫ್ ಒಟ್ಟಿಗೆ ನೃತ್ಯ ಮಾಡಿದರು. ಮ್ಯೂಸಿಕ್ ವಿಡಿಯೋದಲ್ಲಿ ಅವರ ಕೆಮಿಸ್ಟ್ರಿ ವೀಕ್ಷಕರ ಗಮನ ಸೆಳೆಯಿತು. ಪ್ರಮುಖ ಜೋಡಿಯಾಗಿ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿದ್ದಾರೆ.
ಸೋನಮ್ ಕಪೂರ್-ಆದಿತ್ಯ ರಾಯ್ ಕಪೂರ್:
ಬಾಲಿವುಡ್‌ನ ಮತ್ತೊಂದು ಯುವ ಜೋಡಿ ಆದಿತ್ಯ ರಾಯ್ ಕಪೂರ್ ಮತ್ತು ಸೋನಮ್ ಕಪೂರ್. ಪ್ರೇಕ್ಷಕರು ಅವರನ್ನು ಒಟ್ಟಿಗೆ ಚಿತ್ರವೊಂದರಲ್ಲಿ ನೋಡಲು ಕಾಯುತ್ತಿದ್ದಾರೆ.
ರಣಬೀರ್ ಕಪೂರ್-ಕೃತಿ ಸನೋನ್:
ಯುವ ಪ್ರತಿಭೆಗಳಲ್ಲಿ, ರಣಬೀರ್ ಕಪೂರ್ ರೊಮ್ಯಾಂಟಿಕ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಮತ್ತು ಸೋನಮ್ ಕಪೂರ್ ಅವರಂತಹ ಹಲವಾರು ನಟಿರೊಂದಿಗೆ ತೆರೆ ಮೇಲೆ ಜೋಡಿಯಾಗಿದ್ದಾರೆ. ಆದರೆ ರಣಬೀರ್ ಕಪೂರ್ ಕೃತಿ ಸನೋನ್ ಇನ್ನೂ ಒಟ್ಟಿಗೆ ನಟಿಸಿಲ್ಲ.
ಕಂಗನಾ ರಣಾವತ್-ಅಕ್ಷಯ್ ಕುಮಾರ್:
ಖಿಲಾಡಿ ಅಕ್ಷಯ್ ಕುಮಾರ್ ಕಂಗನಾ ರಣಾವತ್ ಜೊತೆಗೆ ಕೆಲಸ ಮಾಡಿಲ್ಲ. ಈ ಇಬ್ಬರು ನಟರು ತಮ್ಮ ಕಾಮಿಕ್ ಟೈಮಿಂಗ್‌ಗಾಗಿ ಫೇಮಸ್. ತೆರೆಯ ಮೇಲೆ ಈ ಕಪಲ್‌ನ್ನು ಒಟ್ಟಿಗೆ ನೋಡುವುದು ಅವರ ಅಭಿಮಾನಿಗಳಿಗೆ ಸಂತೋಷ ವಿಷಯ.