ಕೈಗೆ ಗಾಯ ಮಾಡಿದವನ ಮೇಲೆ ಲವ್ ಆಗಿತ್ತು..! ಅಜಿತ್-ಶಾಲಿನಿ ಜೊತೆಯಾಗಿ 20 ವರ್ಷ
ಕಾಲಿವುಡ್‌ನ ಸೂಪರ್ ಜೋಡಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ | ತಲ ಅಜಿತ್-ಶಾಲಿನಿಯ ಲವ್ ಸ್ಟೋರಿ ಸೂಪರ್

ದಕ್ಷಿಣ ಚಲನಚಿತ್ರೋದ್ಯಮದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ಅಜಿತ್ ಕುಮಾರ್ ಅವರನ್ನು ತಲ ಅಜಿತ್ ಎಂದೇ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ.

ಏಪ್ರಿಲ್ 24, 2000 ರಂದು ತಲ ಅಜಿತ್ ಮತ್ತು ನಟಿ ಶಾಲಿನಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇಂದು, ಅವರ 20 ನೇ ವಿವಾಹ ವಾರ್ಷಿಕೋತ್ಸವ.

ಇಂದು, ಅವರ 20 ನೇ ವಿವಾಹ ವಾರ್ಷಿಕೋತ್ಸವ.

ಜಗತ್ತಿನಾದ್ಯಂತದ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸೌತ್ ಜೋಡಿಗೆ ಶುಭ ಹಾರೈಸಿದ್ದಾರೆ.

ಅವರ ವಿವಾಹದ ಹಲವಾರು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇವರ ವಿವಾಹದಲ್ಲಿ ತಲೈವಾ ರಜನಿಕಾಂತ್, ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಭಾಗವಹಿಸಿದ್ದರು.

ನಟಿ ಶಾಲಿನಿ 3 ನೇ ವಯಸ್ಸಿನಲ್ಲಿ ಮಲಯಾಳಂ ಚಿತ್ರ ಎಂಟೆ ಮಾಮಟ್ಟಿಕುಟ್ಟಿಯಮ್ಮಕ್ಕು ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಸಿನಿಮಾಗೆ ಪಾದಾರ್ಪಣೆ ಮಾಡಿದರು.

ಅವರು ಕನ್ನಡ ಚಿತ್ರದಲ್ಲಿಯೂ ನಟಿಸಿದ್ದರು.

ಅವರು ಕನ್ನಡ ಚಿತ್ರದಲ್ಲಿಯೂ ನಟಿಸಿದ್ದರು.

ಬಾಲ ಕಲಾವಿದೆಯಾಗಿ ನಟ ಡಾ.ವಿಷ್ಣುವರ್ಧನ್ ಅವರೊಂದಿಗೆ ಈ ಜೀವ ನಿನಾಗಾಗಿ ಸಿನಿಮಾದಲ್ಲಿ ನಟಿಸಿದ್ದಾರೆ.

ಬಾಲ ನಟಿನಾಗಿ ಆಕೆಗೆ ಬೇಬಿ ಶಾಲಿನಿ ಎಂದೇ ಹೆಸರಿಸಲಾಯಿತು.

ಟಾಲಿವುಡ್‌ನಲ್ಲಿ 1990 ರಲ್ಲಿ ಬಿಡುಗಡೆಯಾದ ಜಗದೇಕಾ ವೀರುಡು ಅಟಿಲೋಕದಲ್ಲಿ ಶಾಲಿನಿ ಮತ್ತು ಅವರ ಸಹೋದರಿ ಶಾಮಿಲಿ ಒಟ್ಟಿಗೆ ನಟಿಸಿದ್ದಾರೆ.

ಅವರು 1997 ರ ಸೂಪರ್ಹಿಟ್ ಮಲಯಾಳಂ ಸಿನಿಮಾ ಅನಿತ್ತಿ ಪ್ರಾವು ಸಿನಿಮಾದಲ್ಲಿ ನಟಿಸಿದ್ದಾರೆ.

ಕಲಿಯುಂಜಲ್, ಕಡಲುಕ್ಕು ಮರಿಯಾಧೈ, ಅಮರ್ಕಲಂ, ನಿರಮ್, ಕಣ್ಣುಕ್ಕುಲಾವ್, ಅಲೈಪಾಯುಥೆ ಮತ್ತು ಪಿರಿಯಾಧ ವರಾಮ್ ವೆಂಡಮ್ ಮುಂತಾದ ಹಲವಾರು ಹಿಟ್ ಚಲನಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಶಾಲಿನಿ ಮತ್ತು ಅಜಿತ್ 1999 ರ ತಮಿಳು ಆಕ್ಷನ್ ಅಮರ್ಕಲಂನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಆಕ್ಷನ್ ಸನ್ನಿವೇಶದ ಚಿತ್ರೀಕರಣದ ಸಮಯದಲ್ಲಿ ಅಜಿತ್ ಆಕಸ್ಮಿಕವಾಗಿ ಶಾಲಿನಿಯ ಕೈಗೆ ಗಾಯ ಮಾಡಿದ್ದರು.

ಉಳಿದ ಚಿತ್ರೀಕರಣದ ಸಮಯದಲ್ಲಿ ಅಜಿತ್ ಸ್ವತಃ ಶಾಲಿನಿಯವರನ್ನು ಕಾಳಜಿಯಿಂದ ನೋಡಿಕೊಂಡರು. ಅಲ್ಲಿಂದ ಅವರ ಪ್ರೇಮ ಸಂಬಂಧ ಪ್ರಾರಂಭವಾಯಿತು.

ಚಿತ್ರೀಕರಣದ ಸಮಯದಲ್ಲಿ ಜೋಡಿ ಡೇಟಿಂಗ್ ಪ್ರಾರಂಭಿಸಿದರು. ನಂತರ ಒಂದು ವರ್ಷದ ನಂತರ ವಿವಾಹವಾದರು.

ಇವರಿಬ್ಬರಿಗೆ ಮಗಳು ಒಬ್ಬ ಮಗ ಇದ್ದಾನೆ. ಅಜಿತ್ ಮತ್ತು ಶಾಲಿನಿ ಅವರಿಗೆ ವಿವಾಹದ ವಾರ್ಷಿಕೋತ್ಸವದ ಶುಭಾಶಯಗಳು.