- Home
- Entertainment
- Cine World
- 110 ವರ್ಷದ ಹಳೆಯ ಕ್ಲಬ್‌ನಲ್ಲಿ ಮದುವೆಗೆ ಸಜ್ಜಾದ 'ಶಕೀಲಾ' ಬ್ಯೂಟಿ ರಿಚಾ ಚಡ್ಡಾ ಮತ್ತು ಅಲಿ ಜೋಡಿ
110 ವರ್ಷದ ಹಳೆಯ ಕ್ಲಬ್‌ನಲ್ಲಿ ಮದುವೆಗೆ ಸಜ್ಜಾದ 'ಶಕೀಲಾ' ಬ್ಯೂಟಿ ರಿಚಾ ಚಡ್ಡಾ ಮತ್ತು ಅಲಿ ಜೋಡಿ
ಬಾಲಿವುಡ್‌ನ ಖ್ಯಾತ ನಟಿ ರಿಚಾ ಚಡ್ಡಾ ಮದುವೆ ದಿನಾಂಕ ಸಮೀಪಿಸುತ್ತಿದೆ. ರಿಚಾ ಮತ್ತು ಅಲಿ ಫಜಲ್ ಅವರ ಮದುವೆಗೆ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ರಿಚಾ ಮತ್ತು ಅಲಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎನ್ನುವ ಸದ್ದಿ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ.

ಬಾಲಿವುಡ್‌ನ ಖ್ಯಾತ ನಟಿ ರಿಚಾ ಚಡ್ಡಾ ಮದುವೆ ದಿನಾಂಕ ಸಮೀಪಿಸುತ್ತಿದೆ. ರಿಚಾ ಮತ್ತು ಅಲಿ ಫಜಲ್ ಅವರ ಮದುವೆಗೆ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ರಿಚಾ ಮತ್ತು ಅಲಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎನ್ನುವ ಸದ್ದಿ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ.
ಮದುವೆ ದಿನಾಂಕ ಅಧಿಕೃತವಾಗಿ ರಿವೀಲ್ ಆಗಿಲ್ಲ. ಆದರೆ ಈ ತಿಂಗಳ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ವಿಶೇಷವೆಂದರೆ ಇವರ ಮದುವೆಯ ಸಂಭ್ರಮ ದೆಹಲಿ-ಮುಂಬೈ ಎರಡರಲ್ಲೂ ನಡೆಯಲಿದೆ.
110 ವರ್ಷಗಳ ಹಳೆಯ ಕಟ್ಟದಲ್ಲಿ ಇಬ್ಬರ ಮದುವೆ ಸಮಾರಂಭ ನಡೆಯಲಿದೆ ಎನ್ನಲಾಗಿದೆ. ಆಂಗ್ಲ ಮಾಧ್ಯಮ ವರದಿ ಮಾಡಿದ ಪ್ರಕಾರ, ವಿವಾಹ ಕಾರ್ಯಕ್ರಮಗಳು ದೆಹಲಿ ಬಳಿಯ ತುಂಬಾ ಹಳೆಯ ಕ್ಲಬ್ ನಲ್ಲಿ ಪ್ರಾರಂಭವಾಗಲಿದೆ, ಮೂರು ದಿನಗಳ ಕಾಲ ನಡೆಯಲಿದೆ ಎನ್ನಲಾಗಿದೆ. ಇದು ಭಾರತದ ಅತ್ಯಂತ ಹಳೆಯ ಕ್ಲಬ್ ಆಗಿದ್ದು ದೆಹಲಿಯ ತುಂಬಾ ಬೇಡಿಕೆಯ ಕ್ಲಬ್ ಆಗಿದೆಯಂತೆ.
ರಿಚಾ ಮತ್ತು ಅಲಿ ಮದುವೆ ಕಾರ್ಯಕ್ರಮ ಸೆಪ್ಟೆಂಬರ್ 30 ರಂದು ದೆಹಲಿಯಲ್ಲಿ ಪ್ರಾರಂಭವಾಗಿ ಮುಂಬೈನಲ್ಲಿ ಅಕ್ಟೋಬರ್ 7 ರಂದು ಮದುವೆ ಶಾಶ್ತ್ರಗಳು ಮುಗಿಯಲಿವೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ರಿಚಾ ಚಡ್ಡಾ ಮತ್ತು ಅಲಿ ಫಜಲ್ ಅವರ ವಿವಾಹಕ್ಕೆ ಕೆಲವೇ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಇಬ್ಬರ ಮದುವೆ ಆಪ್ತರು ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಹಾಜರಾಗಲಿದ್ದಾರೆ ಎನ್ನಲಾಗಿದೆ. ತೀರ ಖಾಸಗಿ ನಡೆಯುವ ಸಮಾಂರಂಭದಲ್ಲಿ ಕೆಲವೇ ಮಂದಿಗೆ ಆಹ್ವಾನ ನೀಡಲಾಗಿದೆ.
ಮದುವ ಬಳಿಕ ರಿಚಾ ಮತ್ತು ಅಲಿ ಜೋಡಿ ಸ್ನೇಹಿತರಿಗೆ, ಚಿತ್ರರಂಗದ ಗಣ್ಯರಿಗಾಗಿ ಹಾಗೂ ಆಪ್ತರಿಗೆ ಮುಂಬೈನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದಾರಂತೆ. ಈ ಬಗ್ಗೆ ರಿಚಾ ಕಡೆಯಿಂದ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ರಿಚಾ ಚಡ್ಡಾ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಸಿನಿಮಾದ ಬಯೋಪಿಕ್ ನಲ್ಲಿ ರಿಚಾ ನಟಿಸಿದ್ದರು. ಈ ಮೂಲಕ ಮೊದಲ ಬಾರಿಗೆ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ಸದ್ಯ ಎರಡು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.