ಹೇ ರಾಮ್ ಸಿನಿಮಾಗೆ ಸಂಭಾವನೆಯೇ ಪಡೆಯಲಿಲ್ಲ ಕಿಂಗ್ ಖಾನ್: ಪೇಮೆಂಟ್ ಇಲ್ಲದೆ ಸಿನಿಮಾ ಮಾಡಿಕೊಟ್ಟ ಬಾಲಿವುಡ್ ಸ್ಟಾರ್‌ಗಳಿವರು

First Published 13, Oct 2020, 12:27 PM

ಕಷ್ಟಪಟ್ಟು ಸಿನಿಮಾದಲ್ಲಿ ನಟಿಸಿದ್ದರೂ ಸಂಭಾವನೆ ಬೇಡ ಎಂದ ನಟರು | ಬಾಲಿವುಡ್ ಸ್ಟಾರ್‌ಗಳು ಸಂಭಾವನೆ ನಿರಾಕರಿಸಿದ ಸಿನಿಮಾ.. ಕಾಣವೇನು..? ಇಲ್ಲಿ ನೋಡಿ

ಬಾಲಿವುಡ್ ಸ್ಟಾರ್ ನಟರ ಸಂಭಾವನೆ ಇರೋದು ಕೋಟಿಗಳಲ್ಲಿ. ಆದರೆ ಸಂಭಾವನೆಯೇ ಇಲ್ಲದೆ ಸಿನಿಮಾ ಮಾಡಿಕೊಟ್ಟ ಬಹಳಷ್ಟು ಸ್ಟಾರ್‌ಗಳಿ ಬಾಲಿವುಡ್‌ನಲ್ಲಿದ್ದಾರೆ.

ಈ ಸ್ಟಾರ್ ನಟರು ಪೇಮೆಂಟ್ ನಿರಾಕರಿಸಿದ್ದೇಕೆ..? ಕಷ್ಟಪಟ್ಟು ನಟಿಸಿ ಸಂಭಾವನೆಯೇ ಬೇಡ ಅನ್ನೋ ಉದರಾತೆಗೆ ಕಾರಣವೇನು..? ಇಲ್ಲಿ ನೋಡಿ.

ಕೆಲವೊಂದು ಸ್ಕ್ರಿಪ್ಟ್‌ಗಳನ್ನು ಓದಿದಾಗ ಅದು ನಗಿಸುತ್ತದೆ, ಅಳಿಸುತ್ತದೆ, ಭಾವನಾತ್ಮಕವಾಗಿ ಮನಸಿಗೆ ಹತ್ತಿರವಾಗಿಬಿಡುತ್ತದೆ. ಈ ರೀತಿಯಾದಾಗ ಬಹಳಷ್ಟು ನಟರು ಸಿನಿಮಾಗಳಿಗೆ ಒಪ್ಪಿಕೊಳ್ತಾರೆ ಮತ್ತು ಉಚಿತವಾಗಿ ಸಿನಿಮಾ ಮಾಡಿಕೊಡಲು ಒಪ್ಪುತ್ತಾರೆ.

ಸಿನಿಮಾದ ಕಥೆ ಅಷ್ಟು ಇಷ್ಟವಾಗುವುದು ಮತ್ತು ಅದನ್ನು ಬಲವಾಗಿ ನಂಬುವ ಕಾರಣ ನಟರು ಹೀಗೆನ್ನುತ್ತಾರಂತೆ

ಕಳೆದ ಕೆಲವು ವರ್ಷಗಳಲ್ಲಿ ಬಹಳಷ್ಟು ನಟರು ಈ ರೀತಿಯಾಗಿ ಉಚಿತವಾಗಿ ಸಿನಿಮಾ ಮಾಡಿಕೊಟ್ಟಿದ್ದಾರೆ. ಇನ್ನೂ ಕೆಲವರು ಭಾರೀ ಸಣ್ಣ ಮೊತ್ತ ಸಂಭಾವನೆ ಪಡೆದಿದ್ದಾರೆ.

ನವಾಝುದ್ದೀನ್ ಸಿದ್ಧಿಕಿ(ಮಾಂಟೋ): ಬಾಲಿವುಡ್ ನಟ ನವಾಝುದ್ದೀನ್ ಸಿದ್ದಿಕಿ ಮಾಜಿ ಉರ್ದು ಬರಹಗಾರ ಮಾಂಟೋ ಬಯೋಪಿಕ್‌ನಲ್ಲಿ ನಟಿಸಿದ್ದರು. 2018ರ ಈ ಸಿನಮಾಗೆ ಸಿದ್ದಿಕಿ ಯಾವುದೇ ಸಂಭಾವನೆ ಪಡೆಯಲಿಲ್ಲ. ಈ ಬಗ್ಗೆ ಹೇಳಿದ ನಂದಿತಾ ದಾಸ್, ಇದು ಅತ್ಯಂತ ಶ್ರಮ ಬೇಡು ಪಾತ್ರವಾಗಿತ್ತು. ಆದರೆ ನವಾಝ್ ಯಾವುದೇ ಶುಲ್ಕ ಪಡೆಯಲಿಲ್ಲ ಎಂದಿದ್ದಾರೆ.

ಮೀನಾ ಕುಮಾರಿ(ಪಕೀಝಾ): 1972ರ ಬ್ಲಾಕ್‌ಬಸ್ಟರ್ ಸಿನಿಮಾ ಪಕೀಝಾದಲ್ಲಿ ಮೀನಾ ಕುಮಾರಿ ನಟಿಸಿದ್ದರು.  ಇದಕ್ಕೆ ಅವರು ಸಂಭಾವನೆ ಪಡೆಯಲಿಲ್ಲ. ಗೌರವಧನವಾಗಿ 1 ಲಕ್ಷ ರೂಪಾಯಿ ಮಾತ್ರ ಸ್ವೀಕರಿಸಿದ್ದರು. ಇದು ಭಾರತೀಯ ಸಿನಿಮಾಗಳಲ್ಲಿ ಒಂದು ಉತ್ತಮ ಸಿನಿಮಾ ಎಂದೇ ಗುರುತಿಸಲ್ಪಟ್ಟಿದೆ.

ಇರ್ಫಾನ್ ಖಾನ್(ರೋಡ್ ಟು ಲಡಾಖ್): 2004ರಲ್ಲಿ ಇರ್ಫಾನ್ ಅಶ್ವಿನ್ ಕುಮಾರ್ ನಿರ್ದೇಶನದ ರೋಡ್ ಟು ಲಡಾಖ್ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಸಿನಿಮಾಗೆ ಒಂದು ರುಪಾಯಿಯನ್ನೂ ಚಾರ್ಜ್ ಮಾಡಲಿಲ್ಲ. ನಾವು ಲಡಾಖ್‌ಗೆ ಹೊರಟು ದಿಲ್ಲಿಯಲ್ಲಿದ್ದಾಗ  ನಟನಿಗೆ ಆಕ್ಸಿಡೆಂಟ್ ಆಯಿತು. ಆಗ ಸಿನಿಮಾದಿಂದ ಹಿಂದೆ ಸರಿಯುವ ಎಲ್ಲ ಅವಕಾಶವಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ ಎಂದಿದ್ದಾರೆ ಅಶ್ವಿನ್.

ಅಮಿತಾಭ್ ಬಚ್ಚನ್(ಬ್ಲಾಕ್): ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಬ್ಲಾಕ್ ಸಿನಿಮಾಗೆ ಬಿಗ್‌ಬಿ ಸಂಭಾವನೆಯನ್ನೇ ಪಡೆಯಲಿಲ್ಲ. ಸಂಜಯ್‌ಯ ಎಲ್ಲ ಕೆಲಸ ನೋಡಿ ನನಗೆ ಅವರ ಜೊತೆ ಕೆಲಸ ಮಾಡಬೇಕಿತ್ತು ಅಷ್ಟೇ. ಅವಕಾಶ ಸಿಕ್ಕಿದಾಗ ನಟಿಸಿದೆ. ಸಂಭಾವನೆ ಪಡೆಯಲಿಲ್ಲ. ಅವರ ಜೊತೆ ಕೆಲಸ ಮಾಡಿದ ಎಕ್ಸೈಟ್‌ಮೆಂಡ್ ಒಂದು ಉತ್ತಮ ಸಂಭಾವನೆ ಎಂದಿದ್ರು ಅಮಿತಾಭ್.

ಶಾರೂಖ್ ಖಾನ್(ಹೇ ರಾಮ್): ಹೇರಾಮ್ ಸಿನಿಮಾದಲ್ಲಿ ನಟಿಸಿದ ಕಿಂಗ್ ಖಾನ್ ಬಿಡಿಗಾಸೂ ಪಡೆಯದೆ ಸಿನಿಮಾದಲ್ಲಿ ನಟಿಸಿದ್ದರು. ಕಮಲ್ ಹಾಸನ್ ಜೊತೆ ನಟಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ಸಂಭಾವನೆ ನಿರಾಕರಿದ್ದರಂತೆ ಶಾರೂಖ್ ಖಾನ್.

ದೀಪಿಕಾ ಪಡುಕೋಣೆ(ಓಂ ಶಾಂತಿ ಓಂ): ದೀಪಿಕಾ ಪಡುಕೋಣೆಗೆ ಅತ್ಯಧಿಕ ಖ್ಯಾತಿ ತಂದುಕೊಟ್ಟ ಸಿನಿಮಾ ಓಂ ಶಾಂತಿ ಓಂ. ನಟಿ ಫರಾ ಖಾನ್ ಸಿನಿಮಾವನ್ನು ಸಂಭಾವನೆ ಇಲ್ಲದೆ ಮಾಡಿದ್ದಾರೆ. ಈ ಸಿನಿಮಾಗಾಗಿ ದೀಪಿಕಾಳನ್ನು ವಿನ್ಯಾಸಕ ವೆಂಡೆಲ್ ರೋಡ್ರಿಕ್ಸ್ ರೆಫರ್ ಮಾಡಿದ್ದರು.

ಶಾಹೀದ್ ಕಪೂರ್(ಹೈದರ್): ವಿಶಾಲ್ ಭಾರಧ್ವಾಜ್ ನಿರ್ದೇಶನದ ಹೈದರ್ ಸಿನಿಮಾ ಮಾಡಲು ಶಾಹೀದ್ ಕಪೂರ್ ಸಂಭಾವನೆಯನ್ನೇ ಪಡೆಯಲಿಲ್ಲ. ಸಿನಿಮಾಗೆ ಓವರ್ ಬಜೆಟ್ ಆಗೋದನ್ನು ತಪ್ಪಿಸಲು ನಟ ಹೀಗೆ ಮಾಡಿದ್ದರಂತೆ. ಈ ಸಿನಿಮಾ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದ ನಟ ಸಂಭಾವನೆ ಬೇಡ ಎಂದರು.

ಫರಾನ್ ಅಖ್ತರ್(ಭಾಗ್ ಮಿಲ್ಕ ಭಾಗ್): ಸಿಖ್ ಮಿಲ್ಕಾ ಸಿಂಗ್ ಬಯೋಪಿಕ್‌ನಲ್ಲಿ ನಟಿಸಿದ ಫರಾನ್ ಅಖ್ತರ್ 11 ರುಪಾಯಿ ಚಾರ್ಜ್ ಮಾಡಿದ್ದರು. ಈ ಸಿನಿಮಾಗೆ ಸರಿಯಾದ ಶೇಪ್ ಸಿಗಲು ಅವರು ಒಂದು ವರ್ಷ ವರ್ಕೌಟ್ ಮಾಡಿದ್ದರು. ನಟನ ಅಭಿನಯಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಸೋನಮ್ ಕಪೂರ್(ಭಾಗ್ ಮಿಲ್ಕ ಭಾಗ್): ಸೋನಂ ಕಪೂರ್ ಈ ಸಿನಿಮಾಗೆ ಪಡೆದಿದ್ದು 11 ರೂಪಾಯಿ. ಸಿನಿಮಾದಲ್ಲಿ ಶಾರ್ಟ್ ರೋಲ್ ಮಾಡಿದ್ದರೂ ಅಭಿಮಾನಿಗಳನ್ನು ಇಂಪ್ರೆಸ್ ಮಾಡಿತ್ತು ಈ ಪಾತ್ರ.

ಸಲ್ಮಾನ್ ಖಾನ್(ಸನ್ ಆಫ್ ಸರ್ದಾರ್): ಬಹಳಷ್ಟು ಸಿನಿಮಾಗಳಲ್ಲಿ ಸಲ್ಮಾನ್ ಸ್ನೇಹಿತರಿಗಾಗಿ ಉಚಿತವಾಗಿ ಸಿನಿಮಾ ಮಾಡಿಕೊಟ್ಟಿದ್ದರು. ಅಜಯ್ ದೇವಗನ್ ಅಭಿನಯದ ಸನ್ ಆಫ್ ಸರ್ದಾರ್‌ ಸಿನಿಮಾ ಸಾಂಗ್ ಪೊಪೊಗೆ ಸಲ್ಮಾನ್ ಯಾವುದೇ ಸಂಭಾವನೆ ಪಡೆಯಲಿಲ್ಲ.

loader