Discipline Habits: ಬ್ಯುಸಿಯಾಗಿರುವ ಆಧುನಿಕ ಜೀವನದಲ್ಲಿ ಯಶಸ್ಸು ಗಳಿಸಲು 10 ನಿಯಮಗಳು
ಇಂದಿನ ಈ ಕಾರ್ಯನಿರತ ಜೀವನದಲ್ಲಿ, ಈ ಆಧುನಿಕ ಜೀವನದಲ್ಲಿ ಜೀವನದಲ್ಲಿ ಪ್ರಗತಿ, ಯಶಸ್ಸು ಬೇಕು ಎಂದಾದರೆ ನೀವು ಶಿಸ್ತಿನ ಜೀವನವನ್ನು ನಡೆಸಬೇಕು ಅದಕ್ಕಾಗಿ ಕೆಲವೊಂದು ನಿಯಮಗಳನ್ನು ನೀವು ಪಾಲಿಸಬೇಕು.

ಶೆಡ್ಯೂಲ್ ಮಾಡಿ
ನೀವು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಅಥವಾ ಮುಂದಿನ ದಿನ ಮಲಗುವ ಮುನ್ನ ನಿಮ್ಮ ದಿನವನ್ನು ಶೆಡ್ಯೂಲ್ (Schedule) ಮಾಡಿ. ಇದರಿಂದ ನಿಮ್ಮ ಕೆಲಸವು ಅದರಂತೆ ಸರಿಯಾದ ರೀತಿಯಲ್ಲಿ ನಡೆಯಲು ಸಾಧ್ಯವಾಗುತ್ತೆ.
ದಿನನಿತ್ಯದ ಕೆಲಸಗಳನ್ನು ಮಾಡಲು ಟೈಮ್ ಟೇಬಲ್
ಹೌದು, ನೀವು ದಿನನಿತ್ಯ ಏನೆಲ್ಲಾ ಕೆಲಸ ಮಾಡುತ್ತಿರೋ ಅವುಗಳನ್ನು ಪೂರೈಸಲು ನೀವು ಆ ಕೆಲಸಗಳನ್ನು ಎರಡು ಅಥವಾ ಮೂರು ಭಾಗಗಳನ್ನಾಗಿ ಮಾಡಬೇಕು. ಇದರಿಂದ ಕೆಲಸ ಮಾಡಲು ಸುಲಭವಾಗುತ್ತೆ.
ಡಿಜಿಟಲ್ ಬಳಕೆ ಕಡಿಮೆ ಮಾಡಿ
ನಿರಂತರವಾಗಿ ನೋಟಿಫಿಕೇಶನ್ (notification) ಬರ್ತಾ ಇದ್ರೆ, ಪದೇ ಪದೇ ಅದೇ ಮೆಸೇಜ್, ಯೂಟ್ಯೂಬ್, ರೀಲ್ಸ್ ಗಳನ್ನು ನೋಡುತ್ತಿದ್ದರೆ, ಇದರಿಂದ ನೀವು ಹೆಚ್ಚು ಒತ್ತಡಕ್ಕೆ ಒಳಗಾಗುತ್ತೀರಿ. ಇದರಿಂದ ಸಮಯವೂ ವ್ಯರ್ಥ. ಹಾಗಾಗಿ, ಸಾಧ್ಯವಾದಷ್ಟು ಮೊಬೈಲ್ ಗಳಿಂದ, ಇತರ ಡಿಜಿಟಲ್ ವಸ್ತುಗಳಿಂದ ದೂರ ಇರಿ.
ಪ್ರತಿಯೊಂದು ಕೆಲಸಕ್ಕೂ ಸಮಯ ನಿಗಧಿ ಮಾಡಿ
ಹೌದು, ನೀವೇ ಏನೇ ಕೆಲಸ ಮಾಡಿದ್ರೂ ಅದಕ್ಕೆ ಸರಿಯಾದ ಸಮಯವನ್ನು ನಿಗಧಿ ಮಾಡೋದನ್ನು (fix the time) ಮರಿಬೇಡಿ. ಪ್ರತಿಯೊಂದು ಕೆಲಸಕ್ಕೂ ಟೈಮ್ ಫಿಕ್ಸ್ ಮಾಡಿ, ಅದೇ ಸಮಯದಲ್ಲಿ ಕೆಲಸ ಮುಗಿಯುವಂತೆ ನೋಡ್ಕೊಳಿ. ಇದರಿಂದ ಪ್ರಾಡಕ್ಟಿವಿಟಿ ಹೆಚ್ಚುತ್ತೆ, ಬೇಗನೆ ಕೆಲಸ ಮುಗಿಯುತ್ತೆ.
ಪ್ರತಿದಿನ ನಿಮ್ಮ ಗುರಿಗಳ ಬಗ್ಗೆ ಗಮನ ಹರಿಸಿ
ಪ್ರತಿದಿನ ನಿಮ್ಮ ಆ ದಿನದ ಗುರಿ (aim of life) ಏನು ಅನ್ನೋದನ್ನು ಬರೆದುಕೊಳ್ಳಿ, ಜೊತೆಗೆ ಆ ದಿನದ ಆದ್ಯತೆಯ ಕೆಲಸ ಏನು ಅನ್ನೋದನ್ನು ಸಹ ಆಯ್ಕೆ ಮಾಡಿ. ಆ ಕೆಲಸ ಆದಷ್ಟು ಬೇಗನೆ ಆಗುವಂತೆ ನೋಡಿಕೊಳ್ಳೋದು ಮುಖ್ಯ. ಇದರಿಂದ ನಿಮ್ಮ ದಿನ ಸುಲಭವಾಗುತ್ತೆ.
ಜರ್ನಲ್ ಮಾಡ್ಕೊಳಿ
ನಿಮ್ಮ ಕಾರ್ಯಗಳು, ಆಲೋಚನೆಗಳು ಮತ್ತು ಪ್ರಗತಿಯನ್ನು ಬರೆಯುವುದು ನಿಮ್ಮ ಮನಸ್ಸನ್ನು ಮತ್ತಷ್ಟು ಸ್ಟ್ರಾಂಗ್ ಆಗಿಸುತ್ತೆ ಮತ್ತು ನಿಮ್ಮನ್ನು ಜವಾಬ್ದಾರಿಯುತವಾಗಿರಿಸುತ್ತದೆ. ದಿನಚರಿ ಚಿಂತನೆಯನ್ನು ಬೆಳೆಸುತ್ತದೆ, ಅಭ್ಯಾಸಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ ಮತ್ತು ಬದ್ಧತೆಯನ್ನು ಬಲಪಡಿಸುತ್ತದೆ. ಇದರಿಂದ ನೀವು ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತೆ.
ಬ್ರೇಕ್ ತೆಗೆದುಕೊಳ್ಳೋದನ್ನು ಮರಿಬೇಡಿ
ನಿಮ್ಮ ಬ್ಯುಸಿ ಶೆಡ್ಯೂಲ್ (busy schedule) ನಡುವೆ, ಆಗೋಂದು ಈಗೊಂದು ಸಣ್ಣದಾದ ಬ್ರೇಕ್ ತೆಗೆದುಕೊಳ್ಳೋದನ್ನು ಮರಿಬೇಡಿ. ಇದರಿಂದ ಉಸಿರಾಟದ ಎಕ್ಸರ್ ಸೈಜ್, ಸಣ್ಣ ವಾಕಿಂಗ್, ಎಲ್ಲವನ್ನೂ ಸೇರಿಸಿ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗಿರುತ್ತೆ.
ರಾತ್ರಿಯ ನಿದ್ದೆ ಅತ್ಯಗತ್ಯ
ನೀವು ಶಿಸ್ತಿನ ಜೀವನವನ್ನು ನಡೆಸಬೇಕು ಎಂದಾದ್ರೆ, ರಾತ್ರಿ ಚೆನ್ನಾಗಿ ನಿದ್ರೆ (healthy sleep) ಮಾಡೋದು ಮುಖ್ಯ. ಅದಕ್ಕಾಗಿ ನಿದ್ರೆಗೂ ಮುನ್ನ ಓದುವುದು, ಧ್ಯಾನ ಮಾಡುವುದು, ಎಕ್ಸರ್ಸೈಜ್ ಮಾಡೋದು ಎಲ್ಲವನ್ನೂ ಮಾಡಿ. ಇದೆಲ್ಲದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತೆ. ಗುಣಮಟ್ಟದ ನಿದ್ರೆ ನಿಮ್ಮದಾಗುತ್ತೆ.
ಸಣ್ಣ ಗೆಲುವನ್ನು ಸಂಭ್ರಮಿಸಿ
ನಿಮ್ಮ ಪ್ರಗತಿಯನ್ನು ಗುರುತಿಸುವುದು ಮತ್ತು ಪುರಸ್ಕರಿಸುವುದು ತುಂಬಾನೆ ಮುಖ್ಯ. ನಿಮ್ಮ ಗೆಲುವು ಸಣ್ಣದಾಗಿದ್ದರೂ ಸಹ ಪರವಾಗಿಲ್ಲ, ಅದನ್ನು ಸಂಭ್ರಮಿಸೋದು ಮುಖ್ಯ. ಈ ಸೆಲೆಬ್ರೇಶನ್ ಹೆಚ್ಚಿನದನ್ನು ಸಾಧಿಸಲು ಪ್ರೇರಣೆ ನೀಡುತ್ತೆ. ಸಕಾರಾತ್ಮಕ ಫೀಲಿಂಗ್ ನಿಡುತ್ತೆ.
ನಿಮ್ಮ ಬಗ್ಗೆ ದಯೆ ಇರಲಿ
ಶಿಸ್ತು ಎಂದರೆ ಪರ್ಫೆಕ್ಷನ್ ಎಂದಲ್ಲ. ಜೀವನದಲ್ಲಿ ಅದೆಷ್ಟೋ ಅಡೆತಡೆ ಜೀವನದಲ್ಲಿ ಬರುತ್ತೆ. ಆದರೆ ನೀವು ಅದೆಲ್ಲವನ್ನೂ ಎದುರಿಸಿ ಧೈರ್ಯದಿಂದ ಜೀವನದಲ್ಲಿ ಹೆಜ್ಜೆಯನ್ನಿಡಬೇಕು. ಆವಾಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗೋದಕ್ಕೆ ಸಾಧ್ಯ.