Asianet Suvarna News Asianet Suvarna News

Career Astrology: ವೃತ್ತಿಯಲ್ಲಿ ಎದುರಾಗೋ ಸಮಸ್ಯೆಗಳನ್ನ ಜ್ಯೋತಿಷ್ಯದ ಪರಿಹಾರ!

ಉದ್ಯೋಗ ಅಥವಾ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳುವುದು ಸಂಕಷ್ಟದ ಕೆಲಸ. ಒಂದೇ ವೃತ್ತಿಯಲ್ಲಿ ದೃಢವಾಗಿ ನೆಲೆ ನಿಲ್ಲುವುದೂ ಸಹ ಅಷ್ಟೇ ಸವಾಲಿನ ಕಾರ್ಯ. ಹೊಸ ವೃತ್ತಿಯ ಅನ್ವೇಷಣೆ, ಉದ್ಯೋಗ ಬದಲಾವಣೆಯ ಸಮಯದಲ್ಲಿ ಜ್ಯೋತಿಷ್ಯದ ನೆರವು ಪಡೆದುಕೊಳ್ಳುವುದರಿಂದ ಯಶಸ್ಸು ಗಳಿಸಬಹುದು.

Solve career problems by the help of astrology
Author
First Published Oct 8, 2023, 5:18 PM IST | Last Updated Oct 8, 2023, 5:18 PM IST

ಉದ್ಯೋಗ ಆಯ್ಕೆ ಮಾಡಿಕೊಳ್ಳುವುದು ಜೀವನದ ಪ್ರಮುಖ ಸವಾಲು. ಅದು ಜೀವನವನ್ನೇ ಬದಲಿಸುವಂತಹ ನಿರ್ಧಾರ ಕೈಗೊಳ್ಳುವ ಸಮಯ. ಯಾವ ಶಿಕ್ಷಣ ಹಾಗೂ ಅದಕ್ಕೆ ತಕ್ಕಂತೆ ಯಾವ ಉದ್ಯೋಗ ನಮಗೆ ಸೂಕ್ತ ಎನ್ನುವುದನ್ನು ಅರಿತುಕೊಳ್ಳುವುದು ದೊಡ್ಡ ಸವಾಲಾಗುತ್ತದೆ. ಆಯ್ಕೆ ಮಾಡಿಕೊಂಡು ಮುಂದುವರಿದ ಬಳಿಕವೂ ವೃತ್ತಿ ಬದುಕು ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ಹಾಗೂ ಸವಾಲುಗಳಿಂದ ಕೂಡಿರುತ್ತದೆ. ಕೆಲವರ ವೃತ್ತಿ ಜೀವನ ಹೆಚ್ಚಿನ ಅಡೆತಡೆಗಳಿಲ್ಲದೇ, ಏರಿಳಿತಗಳಿಲ್ಲದೇ ನಡೆಯುತ್ತದೆ. ಆದರೆ, ಕೆಲವರ ವೃತ್ತಿ ಜೀವನದಲ್ಲಿ ಭಾರೀ ಸವಾಲುಗಳು, ತೊಂದರೆಗಳು, ಅತೃಪ್ತಿ ತಲೆದೋರುತ್ತವೆ. ಅಥವಾ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವೇ ಆಗದೆ ಪರದಾಡುವಂತಾಗಬಹುದು. ಇಂತಹ ಎಲ್ಲ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರ ಪರಿಹಾರ ತಿಳಿಸಬಲ್ಲದು, ಮಾರ್ಗದರ್ಶಕನಾಗಬಲ್ಲದು. ಗ್ರಹಗತಿಗಳು, ನಕ್ಷತ್ರ, ತಾರೆಗಳ ಪ್ರಭಾವಗಳನ್ನು ನಿರ್ದಿಷ್ಟವಾಗಿ ತಿಳಿಸುವ ಜ್ಯೋತಿಷ್ಯ ಶಾಸ್ತ್ರವು ಮಾನವನ ವರ್ತನೆ, ವ್ಯಕ್ತಿತ್ವ ಹಾಗೂ ಜೀವನದ ಪ್ರಮುಖ ಹಂತಗಳಲ್ಲಿ ಗೊಂದಲಕ್ಕೆ ಸ್ಪಷ್ಟತೆ ನೀಡಬಲ್ಲದು. ಸ್ವಯಂ ಅರಿವು ಹೊಂದಲು ಜ್ಯೋತಿಷ್ಯ ಶಾಸ್ತ್ರದ ನೆರವು ಪಡೆದುಕೊಳ್ಳುವುದು ಉಚಿತ. ವ್ಯಕ್ತಿ ಜನಿಸಿರುವ ರಾಶಿಯ ಮೇಲೆ ಗ್ರಹಗತಿಗಳ ಪ್ರಭಾವವನ್ನಾಧರಿಸಿ ಯಾವ ವೃತ್ತಿ ಸೂಕ್ತ ಎನ್ನುವುದನ್ನು ತಿಳಿದುಕೊಳ್ಳಬಹುದು. 

ಕುಂಡಲಿಯನ್ನು ಆಧರಿಸಿ ಜ್ಯೋತಿಷ್ಯ (Astrology) ತಜ್ಞರು ಕೆಲವು ಮಾಹಿತಿಗಳನ್ನು ಸ್ಪಷ್ಟವಾಗಿ ನೀಡಬಲ್ಲರು. ಜ್ಯೋತಿಷ್ಯ ಶಾಸ್ತ್ರವು ವ್ಯಕ್ತಿಗೆ ಹೊಂದಾಣಿಕೆಯಾಗುವ ಶಿಕ್ಷಣ (Education) ಹಾಗೂ ವೃತ್ತಿಯ (Career) ಬಗ್ಗೆ ಹೊಳಹು ನೀಡುತ್ತದೆ. ಇದನ್ನಾಧರಿಸಿ ನಿರ್ಧಾರ (Decision) ಕೈಗೊಳ್ಳುವುದರಿಂದ ವೃತ್ತಿ ಜೀವನ ಸುಗಮವಾಗಿ ಸಾಗುವಂತೆ ನೋಡಿಕೊಳ್ಳಬಹುದು. ಅಲ್ಲದೆ, ಹೀಗೆ ಮಾಡುವುದರಿಂದ ವೃತ್ತಿ ಜೀವನದಲ್ಲಿ ಅನಪೇಕ್ಷಿತ ಸಮಸ್ಯೆಗಳು ಇರುವುದಿಲ್ಲ. ಜನ್ಮರಾಶಿ (Zodiac Sign), ನಕ್ಷತ್ರಕ್ಕೆ ಅನುಗುಣವಾದ ಕಾರ್ಯವನ್ನೇ ಮಾಡುತ್ತಿದ್ದಲ್ಲಿ ಏಳ್ಗೆಯೂ ಬಹುಬೇಗ ಸಾಧ್ಯವಾಗುವುದು.

ನಿಮಗೆ ಹಣ ಬೇಕಾದರೆ ಈ ಕೆಲಸಗಳನ್ನು ತಪ್ಪದೇ ಮಾಡಿ

ನಿಮ್ಮ ನೈಸರ್ಗಿಕ ಪ್ರತಿಭೆ ಯಾವುದು?: ನಿಮಗೆ ಜನ್ಮಜಾತವಾಗಿ ಬಂದಿರುವ ಪ್ರತಿಭೆ (Talent) ಯಾವುದು, ಯಾವ ಮಾರ್ಗ (Path) ನಿಮಗೆ ಹೆಚ್ಚು ಸೂಕ್ತವಾಗಬಲ್ಲದು ಎನ್ನುವುದನ್ನು ಪತ್ತೆ ಮಾಡಬಹುದು. ಸಾಮರ್ಥ್ಯ, ದೌರ್ಬಲ್ಯಗಳನ್ನು ಅರಿಯುವ ಮೂಲಕ ವೃತ್ತಿ (Profession) ಜೀವನದ ಆಯ್ಕೆ ಸುಲಭವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರವು ವ್ಯಕ್ತಿತ್ವದ ಅಂಶಗಳು ಸಂಬಂಧಗಳು (Relationship) ಮತ್ತು ವೃತ್ತಿಯ ಮೇಲೆ ಬೀರುವ ಪರಿಣಾಮಗಳನ್ನು ತಿಳಿಸುತ್ತದೆ. ನಿರ್ಧಾರ ಕೈಗೊಳ್ಳುವುದು ಸೇರಿದಂತೆ ಒಟ್ಟಾರೆ ವೃತ್ತಿ ಜೀವನ ಹೇಗೆ ತೃಪ್ತಿದಾಯಕವಾಗಿರಬಲ್ಲದು ಎಂದು ಹೇಳುತ್ತದೆ. 

ವೃತ್ತಿಯ ಮೇಲೆ ಗ್ರಹದ ಚಲನೆಯ (Movement) ಪ್ರಭಾವ: ಜ್ಯೋತಿಷ್ಯ ಶಾಸ್ತ್ರ, ವ್ಯಕ್ತಿಯ ಕುಂಡಲಿಯನ್ನು ಆಧರಿಸಿ ಆತನ ವೃತ್ತಿ ಜೀವನದ ಬಗ್ಗೆ ಹೊಳಹು ನೀಡುವುದಷ್ಟೇ ಅಲ್ಲದೆ, ಕೆಲವು ಗ್ರಹಗಳ (Planet) ಚಲನೆಯಿಂದ ಆಗುವ ಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ನೀಡುತ್ತದೆ.

•    ಶನಿ (Saturn) ಗ್ರಹ ಸ್ವಸ್ಥಾನಕ್ಕೆ ಹಿಂತಿರುಗುವ ಪ್ರಕ್ರಿಯೆ ಪ್ರತಿ 29.5 ವರ್ಷಗಳಿಗೆ ಜರುಗುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ಬದಲಾವಣೆಯ ಸಮಯವಾಗಿರುತ್ತದೆ. ವೃತ್ತಿ ಜೀವನದಲ್ಲಿ ಈ ಹಂತ ಮೈಲಿಗಲ್ಲಿನಂತೆ. ಇದು ವ್ಯಕ್ತಿಯ ವೃತ್ತಿ ಜೀವನವನ್ನು ಮರುಮೌಲ್ಯಮಾಪನ ಮಾಡುವ ಮತ್ತು ಮರುನಿರ್ಧರಿಸುವ ಸಮಯವಾಗಿದೆ. 

ಎಷ್ಟು ತಿಂದ್ರೂ ಹಸಿವು ಕಡಿಮೆಯಾಗ್ತಿಲ್ವಾ? ಯಾವುದೋ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದಿರಬಹುದು!

•    ಬುಧ (Mercury) ಗ್ರಹದ ಹಿಮ್ಮೆಟ್ಟುವಿಕೆಯಿಂದ ಸಂವಹನ ಮತ್ತು ತಂತ್ರಜ್ಞಾನಗಳು ಅನಿಯಮಿತಗೊಳ್ಳುತ್ತವೆ. ಇದು ವೃತ್ತಿ ಸಂಬಂಧಿತ ಸಂವಹನ ಮತ್ತು ನಿರ್ಧಾರ ಕೈಗೊಳ್ಳಲು ಎಚ್ಚರಿಕೆ ನೀಡುವ ಸಮಯವಾಗಿದೆ. 
•    ಗುರು (Jupiter) ಗ್ರಹದ ಚಲನೆಯು ವೃತ್ತಿಯ ಬೆಳವಣಿಗೆ, ವಿಸ್ತರಣೆ ಮತ್ತು ಅವಕಾಶಗಳಿಗೆ ಕಾರಣವಾಗುತ್ತದೆ. ವೃತ್ತಿ ಜೀವನದಲ್ಲಿ ಈ ಸಮಯ ಅತ್ಯಂತ ಅನುಕೂಲಕರವಾಗಿರುತ್ತದೆ. 
•    ಗ್ರಹಣಗಳ (Eclipse) ಸಮಯವು ಸಹ ವೃತ್ತಿಯಲ್ಲಿ ಅನಿರೀಕ್ಷಿತ ಪರಿಣಾಮಗಳನ್ನು ತರಬಹುದು. ವೃತ್ತಿ ಬದಲಾವಣೆ ಮತ್ತು ಹೊಸ ಅವಕಾಶಕ್ಕೆ ಕಾರಣವಾಗಬಹುದು. 
ಹೊಸ ಉದ್ಯೋಗ ಹುಡುಕಲು ಸಿದ್ಧರಾಗುತ್ತಿದ್ದರೆ ಜ್ಯೋತಿಷ್ಯ ಶಾಸ್ತ್ರದ ನೆರವು ಪಡೆದುಕೊಳ್ಳುವುದು ಉತ್ತಮ. ಹಾಗೆಯೇ, ವೃತ್ತಿ ಸಂಬಂಧಿತ ಅವಕಾಶಗಳ ಮಾತುಕತೆ, ಸಂಬಳ ಹೆಚ್ಚಳ ಮುಂತಾದ ಮಾತುಕತೆಗಳ ಸಮಯದಲ್ಲಿ ಜ್ಯೋತಿಷ್ಯ ಶಾಸ್ತ್ರದ ನೆರವು ಪಡೆದುಕೊಳ್ಳುವುದರಿಂದ ಯಶಸ್ಸು (Success) ಗಳಿಸಬಹುದು. ಹೊಸ ವ್ಯವಹಾರ ಆರಂಭಿಸುವಾಗಲೂ, ವೃತ್ತಿ ಬದಲಾವಣೆಯ ಸಮಯದಲ್ಲೂ ಜ್ಯೋತಿಷ್ಯ ಶಾಸ್ತ್ರವು ಉತ್ತಮ ಮಾರ್ಗದರ್ಶನ ನೀಡಬಲ್ಲದು.

Latest Videos
Follow Us:
Download App:
  • android
  • ios