ಸರ್ಕಾರಿ ಕೆಲ್ಸ ಮಾಡ್ಬೇಕು ಎನ್ನುವ ಮಹಿಳಾ ಅಭ್ಯರ್ಥಿಗಳಿಗೆ ಖುಷಿ ಸುದ್ದಿ ಇದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸ್ಬಹುದು.

ಅಂಗನವಾಡಿ (Anganwadi)ಯಲ್ಲಿ ಕೆಲ್ಸ ಮಾಡ್ಬೇಕೆಂಬ ಆಸೆಯುಳ್ಳ ಮಹಿಳೆಯರಿಗೆ ಭರ್ಜರಿ ಅವಕಾಶ ಸಿಗ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (WCD) ಇಲಾಖೆಗಳು ರಾಜ್ಯವಾರು ನೇಮಕಾತಿಗಳನ್ನು ಘೋಷಿಸಿವೆ. ಅರ್ಹತೆ, ದಾಖಲೆ ಪರಿಶೀಲನೆ ಅಥವಾ ಸ್ಥಳೀಯ ಪರೀಕ್ಷೆಗಳ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಕರ್ನಾಟಕ (Karnataka), ಉತ್ತರ ಪ್ರದೇಶ, ಒಡಿಶಾ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳು ಪ್ರತಿ ವರ್ಷ ಸಾವಿರಾರು ಖಾಲಿ ಹುದ್ದೆಗಳನ್ನು ಆಗಾಗ್ಗೆ ಭರ್ತಿ ಮಾಡ್ತಿರುತ್ತವೆ.ಈಗ ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕ ಹುದ್ದೆ (Anganwadi Worker and Helper Posts)ಗಳಿಗೆ ಭರ್ತಿ ನಡೆಯುತ್ತಿದೆ. ಮೈಸೂರು, ಹುಬ್ಬಳ್ಳಿ – ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಅರ್ಜಿ ಕರೆದಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡ್ಬೇಕು. ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) 2,500 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಅಂಗನವಾಡಿ ಕಾರ್ಯಕರ್ತೆಯರ 1000 ಹುದ್ದೆ ಹಾಗೂ ಸಹಾಯಕರ 1500 ಹುದ್ದೆಗೆ ಅರ್ಜಿ ಕರೆಯಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕ ಕಾರ್ಯಕರ್ತೆಯರ ಅರ್ಹತೆ :

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಪಾಸ್ ಆಗಿರಬೇಕು. ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಮಹಿಳೆಯರು 10ನೇ ತರಗತಿ ಉತ್ತೀರ್ಣವಾಗಿರಬೇಕು. ಇದಲ್ಲದೆ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಹೆಚ್ಚುವರಿ ಕೋರ್ಸ್ ಮಾಡಿದ ಅಭ್ಯರ್ಥಿಗಳಿಗೂ ಇಲ್ಲಿ ಅವಕಾಶವಿದೆ.

ವಯಸ್ಸಿನ ಮಿತಿ : ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ರಿಯಾಯತಿ ಇದೆ. ಇನ್ನು ಎಸ್ ಸಿಎಸ್ ಟಿ ಅಭ್ಯರ್ಥಿಗಳುಗೆ 5 ವರ್ಷ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ರಿಯಾಯಿತಿ ನೀಡಲಾಗಿದೆ.

ಸಂಬಳ : ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ರಿಂದ 15 ಸಾವಿರ ರೂಪಾಯಿ ಸಂಬಳ. ಅಂಗನವಾಡಿ ಸಹಾಯಕಿಯರಿಗೆ ಸರ್ಕಾರ ತಿಂಗಳಿಗೆ 7 ಸಾವಿರದಿಂದ 10 ಸಾವಿರದೊಳಗೆ ಸಂಬಳ ನೀಡುತ್ತದೆ.

ನೇಮಕಾತಿ : ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ. ಅವಶ್ಯಕತೆಯಿದ್ದಲ್ಲಿ ಪರೀಕ್ಷೆ ನಡೆಯುತ್ತದೆ, ಸಂದರ್ಶನ ಹಾಗೂ ದಾಖಲೆ ಪರಿಶೀಲಿಸಿ ಅಭ್ಯರ್ಥಿಗಳ ನೇಮಕಾತಿ ಮಾಡಲಾಗುದು. ಆಯ್ಕೆ ಪ್ರಕ್ರಿಯೆ ಆಯಾ ಜಿಲ್ಲೆ ನಿಯಮಕ್ಕೆ ತಕ್ಕಂತೆ ನಡೆಯುತ್ತದೆ.

ಮೈಸೂರು ಜಿಲ್ಲೆಯಲ್ಲಿ 319 ಹುದ್ದೆಗೆ ನೇಮಕಾತಿ : ಮೈಸೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರ 315 ಹುದ್ದೆಗೆ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಆನ್ಲೈನ್ ಮೂಲಕ ನೀವು ಅರ್ಜಿ ಭರ್ತಿ ಮಾಡ್ಬೇಕು. https://karnemakaone.kar.nic.in/abcd/ApplicationForm_JA_org.aspx ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮೇ 16ರಿಂದ ಅರ್ಜಿ ಭರ್ತಿ ಶುರುವಾಗಿದ್ದು ಅಭ್ಯರ್ಥಿಗಳು ಜೂನ್ 15ರವರೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಧಾರವಾಡ ಹುಬ್ಬಳಿಯಲ್ಲಿ 192 ಅಭ್ಯರ್ಥಿಗಳ ನೇಮಕ : ಇನ್ನು ಧಾರವಾಡ ಹುಬ್ಬಳ್ಳಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ 192 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. www.karnemakaone.kar.nic.in Recruitment 2025 ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

ಬಾಗಲಕೋಟೆಯಲ್ಲಿ 577 ಹುದ್ದೆಗಳ ನೇಮಕಾತಿ : ಬಾಗಲಕೋಟೆಯಲ್ಲಿ 577 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಜೂನ್ ಐದರವರೆಗೆ ಅರ್ಜಿ ಸಲ್ಲಿಸಬಹುದು.