- Home
- Automobile
- Car News
- ಒಂದೇ ಚಾರ್ಜ್‌ಗೆ 450 ಕಿ.ಮಿ ಮೈಲೇಜ್, ಅತೀ ಕಡಿಮೆ ಬೆಲೆ ಕಾರು ಭಾರತದಲ್ಲಿ ಶೀಘ್ರದಲ್ಲೇ ಲಾಂಚ್
ಒಂದೇ ಚಾರ್ಜ್‌ಗೆ 450 ಕಿ.ಮಿ ಮೈಲೇಜ್, ಅತೀ ಕಡಿಮೆ ಬೆಲೆ ಕಾರು ಭಾರತದಲ್ಲಿ ಶೀಘ್ರದಲ್ಲೇ ಲಾಂಚ್
ಒಂದೇ ಚಾರ್ಜ್‌ಗೆ 450 ಕಿ.ಮಿ ಮೈಲೇಜ್, ಅತೀ ಕಡಿಮೆ ಬೆಲೆ ಕಾರು ಭಾರತದಲ್ಲಿ ಶೀಘ್ರದಲ್ಲೇ ಲಾಂಚ್, ಪ್ರಮುಖ ಎರಡು ಕಾರುಗಳು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಕಾರುಗಳು ಅತೀ ಕಡಿಮೆ ಬೆಲೆ ಮಾತ್ರವಲ್ಲ, ಅತ್ಯುತ್ತಮ ಮೈಲೇಜ್ ಕೂಡ ನೀಡಲಿದೆ.

ಫ್ಯಾಮಿಲಿ ಕಾರುಗಳಿಗೆ ಬೇಡಿಕೆ ಹೆಚ್ಚು
ಒಂದೇ ಚಾರ್ಜ್‌ನಲ್ಲಿ 450 ಕಿ.ಮೀ ಪ್ರಯಾಣ
ವಿನ್‌ಫಾಸ್ಟ್ ಕಾರು ಫ್ರಂಟ್-ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಇದು 201bhp ಪವರ್ ಮತ್ತು 280Nm ಟಾರ್ಕ್ ಉತ್ಪಾದಿಸುತ್ತದೆ. 80kW DC ಫಾಸ್ಟ್ ಚಾರ್ಜರ್ ಬಳಸಿ, ಕೇವಲ 30 ನಿಮಿಷಗಳಲ್ಲಿ ಬ್ಯಾಟರಿಯನ್ನು 10% ರಿಂದ 70% ವರೆಗೆ ಚಾರ್ಜ್ ಮಾಡಬಹುದು. ಒಂದು ಪೂರ್ಣ ಚಾರ್ಜ್‌ನಲ್ಲಿ ಸುಮಾರು 450 ಕಿ.ಮೀ ಪ್ರಯಾಣಿಸಬಹುದು. ಇದರ ಬೆಲೆ 18 ಲಕ್ಷ ರೂ.ಗಳಿಂದ ಆರಂಭವಾಗುವ ನಿರೀಕ್ಷೆಯಿದೆ.
ನಿಸ್ಸಾನ್ ಗ್ರಾವಿಟೇಟ್ ಮಾಡೆಲ್ (Nissan Gravite)
ಎರಡನೆಯದಾಗಿ, ನಿಸ್ಸಾನ್ ಗ್ರಾವಿಟೇಟ್ ಕಾರು ಕೂಡ ಬಿಡುಗಡೆಯಾಗಲಿದೆ. ಈ ಹೊಸ ಮಾಡೆಲ್ V-ಮೋಷನ್ ಫ್ರಂಟ್ ಗ್ರಿಲ್, ಸ್ಪೋರ್ಟಿ ಬಂಪರ್, ಬಾನೆಟ್ ಮೇಲೆ 'ಗ್ರಾವಿಟ್' ಬ್ಯಾಡ್ಜ್, ಡ್ಯುಯಲ್-ಸ್ಟ್ರಿಪ್ LED DRL ಹೆಡ್‌ಲ್ಯಾಂಪ್‌ಗಳು ಮತ್ತು ಹೊಸ ಅಲಾಯ್ ವೀಲ್‌ಗಳನ್ನು ಹೊಂದಿದೆ. ಇದರ ಒಳಭಾಗ ಸಂಪೂರ್ಣ ಕಪ್ಪು ಬಣ್ಣದಲ್ಲಿದ್ದು, ಡ್ಯಾಶ್‌ಬೋರ್ಡ್‌ನಲ್ಲಿ ಕ್ರೋಮ್ ಆಕ್ಸೆಂಟ್‌ಗಳಿವೆ. ಈ ಹೊಸ ನಿಸ್ಸಾನ್ ಫ್ಯಾಮಿಲಿ ಕಾರ್ 1.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72 bhp ಪವರ್ ಮತ್ತು 96 Nm ಟಾರ್ಕ್ ನೀಡುತ್ತದೆ. ಇದರ ಬೆಲೆ 7 ಲಕ್ಷ ರೂ.ಗಳಿಂದ ಆರಂಭವಾಗಬಹುದು.
ಜನವರಿಯಲ್ಲಿ ಕಾರು ಮಾರಾಟ ಹೆಚ್ಚಳ
2026ರ ಜನವರಿಯಲ್ಲಿ ಭಾರತದಲ್ಲಿ ಕಾರು ಮಾರಾಟ ಏರಿಕೆಯಾಗಿದೆ. 2025ರ ಜನವರಿಗೆ ಹೋಲಿಸಿದರ ಶೇಕಡಾ 7ರಷ್ಟು ಕಾರು ಮಾರಾಟದಲ್ಲಿ ಏರಿಕೆ ಕಂಡಿದೆ. ಫೆಬ್ರವರಿಯಲ್ಲೂ ಕಾರು ಮಾರಾಟದಲ್ಲಿ ಏರಿಕೆ ನಿರೀಕ್ಷಿಸಲಾಗಿದೆ.

