MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • ಟೊಯೋಟಾ ಎಬೆಲ್ಲಾ ಇವಿ ಕಾರು ಡೆಲಿವರಿ ಆರಂಭ, 543 ಕಿಮಿ ಮೈಲೇಜ್ ನೀಡೋ ಈ ಕಾರಿನ ಬೆಲೆ ಎಷ್ಟು?

ಟೊಯೋಟಾ ಎಬೆಲ್ಲಾ ಇವಿ ಕಾರು ಡೆಲಿವರಿ ಆರಂಭ, 543 ಕಿಮಿ ಮೈಲೇಜ್ ನೀಡೋ ಈ ಕಾರಿನ ಬೆಲೆ ಎಷ್ಟು?

ಭಾರತದಲ್ಲಿ ಟೋಯೋಟಾದ ಎಲೆಕ್ಟ್ರಿಕ್ ಕಾರು ಎಬೆಲ್ಲಾ ಡೆಲಿವರಿ ಆರಂಭಗೊಂಡಿದೆ. ಅತ್ಯಂತ ಆಕರ್ಷಕ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 543 ಕಿಲೋಮೀಟರ ಮೈಲೇಜ್ ನೀಡಲಿದೆ. ಇದರ ಬೆಲೆ ಎಷ್ಟು? ಫೀಚರ್ಸ್ ಏನು?

2 Min read
Author : Chethan Kumar
Published : Jun 19 2026, 07:21 PM IST
Share this Photo Gallery
  • FB
  • TW
  • Linkdin
  • Whatsapp
16
ಎಬೆಲ್ಲಾ ಎಲೆಕ್ಟ್ರಿಕ್ ಕಾರು ಡೆಲಿವರಿ ಆರಂಭ
Image Credit : Toyota

ಎಬೆಲ್ಲಾ ಎಲೆಕ್ಟ್ರಿಕ್ ಕಾರು ಡೆಲಿವರಿ ಆರಂಭ

ಟೋಯೋಟಾ ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಬಹು ಬೇಡಿಕೆ ಕಾರಾಗಿದೆ. ಇದೀಗ ಸಂಪೂರ್ಣ ಎಲೆಕ್ಟ್ರಿಕ್ ಕಾರು ರಸ್ತೆಗಳಿಸಿದೆ. ಟೋಯೋಟಾದ ಬಹುನಿರೀಕ್ಷಿತ ಎಬೆಲ್ಲಾ ಇವೆ ಕಾರು ಭಾರತದಲ್ಲಿ ಡೆಲಿವರಿ ಆರಂಭಗೊಂಡಿದೆ.ಮಾರುತಿ ಸುಜುಕಿ ಇ ವಿಟಾರ ಫೀಚರ್ಸ್ ಹೊಂದಿರುವ ಈ ಟೊಯೋಟಾ ಎಬೆಲ್ಲಾ ಕಾರಿನ ಬುಕಿಂಗ್ ಹಾಗೂ ಬೇಡಿಕೆ ಎರಡೂ ಹೆಚ್ಚಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಭಾರತದಲ್ಲಿ ಎಬೆಲ್ಲಾ ಇವೆ ಬೆಲೆ ಎಷ್ಟು?
Image Credit : Google

ಭಾರತದಲ್ಲಿ ಎಬೆಲ್ಲಾ ಇವೆ ಬೆಲೆ ಎಷ್ಟು?

ಟೊಯೋಟಾ ಎಬೆಲ್ಲಾ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ 23.60 ಲಕ್ಷ ರೂಪಾಯಿ. ಡ್ಯುಯೆಲ್ ಟೋನ್ ವೇರಿಯೆಂಟ್ ಕಾರಿನ ಬೆಲೆ 23.80 ಲಕ್ಷ ರೂಪಾಯಿ. ಎರಡೂ ಬೆಲೆಗಳು ಎಕ್ಸ್ ಶೋ ರೂಂ. ಆನ್ ರೋಡ್ ಬೆಲೆ ನಗರದಿಂದ ನಗರಕ್ಕೆ ವ್ಯತ್ಯಾಸವಾಗಲಿದೆ. ಬೆಂಗಳೂರಿನಲ್ಲಿ ಇದರ ಆನ್‌ರೋಡ್ ಬೆಲೆ ಸರಿಸುಮಾರು 26.85 ಲಕ್ಷ ರೂಪಾಯಿ.

Related Articles

Related image1
ಟಾಟಾ ನ್ಯಾನೋಗಿಂತಲೂ ಅಗ್ಗದ ಎಲೆಕ್ಟ್ರಿಕ್ ಕಾರ್ ಲಾಂಚ್‌ಗೆ ರೆಡಿ!: ಚಾರ್ಜಿಂಗ್ ಟೆನ್ಷನ್ ಇಲ್ಲ, ಕೇವಲ 2 ನಿಮಿಷದಲ್ಲಿ ಬ್ಯಾಟರಿ ಸ್ವಾಪ್ ಮಾಡಿ!
Related image2
Ampere ಎಲೆಕ್ಟ್ರಿಕ್ ಸ್ಕೂಟರ್ Reo VYB ಲಾಂಚ್, ನಿರೀಕ್ಷೆಯೇ ಮಾಡದಂಥ ಬೆಲೆಯಲ್ಲಿ ಸಿಗ್ತಿದೆ ಹೊಸ ಇವಿ
36
ಎಬೆಲ್ಲಾ ಬ್ಯಾಟರಿ ಹಾಗೂ ಮೈಲೇಜ್ ರೇಂಜ್
Image Credit : Google

ಎಬೆಲ್ಲಾ ಬ್ಯಾಟರಿ ಹಾಗೂ ಮೈಲೇಜ್ ರೇಂಜ್

ಎಬೆಲ್ಲಾ ಕಾರಿನಲ್ಲಿ ಎರಡು ಬ್ಯಾಟರಿ ಪ್ಯಾಕ್ ಬಳಸಲಾಗಿದೆ. 61kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 543 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು 49kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 440 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದು ಕಂಪನಿ ಟೆಸ್ಟಿಂಗ್ ಮೂಲಕ ನೀಡಿದ ಮೈಲೇಜ್ ರೇಂಜ್. ರಿಯಲ್ ಮೈಲೇಜ್ ರೇಂಜ್ ಇನ್ನಷ್ಟೆ ಬಹಿರಂಗವಾಗಬೇಕಿದೆ.

46
ಎಬೆಲ್ಲಾ ಪವರ್ ಹಾಗೂ ಪರ್ಫಾಮೆನ್ಸ್
Image Credit : Google

ಎಬೆಲ್ಲಾ ಪವರ್ ಹಾಗೂ ಪರ್ಫಾಮೆನ್ಸ್

ಎಬೆಲ್ಲಾ ಮೊದಲೇ ಹೇಳಿದಂತೆ ಎರಡು ಬ್ಯಾಟರಿ ಪ್ಯಾಕ್‌ನಲ್ಲಿ ಲಭ್ಯವಿದೆ. 61kWh ಬ್ಯಾಟರಿ ಕಾರು 172 hp ಪವರ್ ಹಾಗೂ 193 Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 49kWh ಬ್ಯಾಟರಿ ಕಾರು 142 hp ಪವರ್ ಹಾಗೂ 193 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಈ ಮೂಲಕ ಉತ್ತಮ ಪರ್ಫಾಮೆನ್ಸ್ ನೀಡಲಿದೆ ಅನ್ನೋದು ಪವರ್ ಹಾಗೂ ಟಾರ್ಕ್ ಸ್ಪಷ್ಟಪಡಿಸುತ್ತಿದೆ.

56
ಎಬೆಲ್ಲಾ ಕಾರಿನ ಫೀಚರ್ಸ್
Image Credit : Google

ಎಬೆಲ್ಲಾ ಕಾರಿನ ಫೀಚರ್ಸ್

10.1 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈಯರ್‌ಲೆಸ್ ಆ್ಯಪಲ್ ಹಾಗೂ ಆ್ಯಂಡ್ರಾಯ್ಡ್ ಆಟೋ ಕಾರ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್, ಜೆಬಿಎಲ್ ಸೌಂಡ್ ಸಿಸ್ಟಮ್, 12 ವಿವಿದ ಬಣ್ಣಗಳ ಆ್ಯಂಬಿಯೆಂಟ್ ಲೈಟ್,ಪನೋರಮಿಕ್ ಸನ್‌ರೂಫ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.

66
ಸುರಕ್ಷತೆಗೆ ಆದ್ಯತೆ ನೀಡಿದ ಟೋಯೋಟಾ
Image Credit : Google

ಸುರಕ್ಷತೆಗೆ ಆದ್ಯತೆ ನೀಡಿದ ಟೋಯೋಟಾ

ಎಬೆಲ್ಲಾ ಕಾರು 7 ಏರ್‌ಬ್ಯಾಗ್ಸ್ ಹೊಂದಿದೆ. ನಾಲ್ಕು ಚಕ್ರಗಳಿಗೆ ಡಿಸ್ಕ್ ಬ್ರೇಕ್ ನೀಡಲಾಗಿದೆ. 360 ಡಿಗ್ರಿ ಕ್ಯಾಮೆರಾ, ಲೆವೆಲ್ 2 ಅಡಾಸ್ ತಂತ್ರಜ್ಞಾನ ಹೊಂದಿದೆ. ಎಬೆಲ್ಲಾ ಕಾರು ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಟಾಟಾ ಕರ್ವ್ ಇವಿ, ಟಾಟಾ ಹ್ಾರಿಯರ್ ಇವಿಗೆ ಪ್ರತಿಸ್ಪರ್ಧಿಯಾಗಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆಟೋಮೊಬೈಲ್
ಕಾರುಗಳು
ವಿದ್ಯುತ್ ಚಾಲಿತ ವಾಹನ
ಭಾರತ

Latest Videos
Recommended Stories
Recommended image1
ಎಂಜಿ ಎಂ9 ಪ್ರೆಸಿಡೆನ್ಶಿಯಲ್ ಲಿಮೋಸಿನ್ ಖರೀದಿಸಿದ ಪ್ರಭು ದೇವಾ, ಈ ಕಾರಿನ ಬೆಲೆ, ವಿಶೇಷತೆ ಏನು?
Recommended image2
ಸೊನೆಟ್, ಸೆಲ್ಟೋಸ್ ಸೇರಿ ಎಲ್ಲಾ ಕಿಯಾ ಕಾರುಗಳ ಬೆಲೆ ಜುಲೈ 1 ರಿಂದ ಹೆಚ್ಚಳ, ಎಷ್ಟಾಗಲಿದೆ ದರ?
Recommended image3
ಹೊಸ ಅವತಾರದಲ್ಲಿ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್, ಶೀಘ್ರದಲ್ಲೇ ಹೊಸ ಎಂಜಿನ್ ಕಾರು ಮಾರುಕಟ್ಟೆಗೆ
Related Stories
Recommended image1
ಟಾಟಾ ನ್ಯಾನೋಗಿಂತಲೂ ಅಗ್ಗದ ಎಲೆಕ್ಟ್ರಿಕ್ ಕಾರ್ ಲಾಂಚ್‌ಗೆ ರೆಡಿ!: ಚಾರ್ಜಿಂಗ್ ಟೆನ್ಷನ್ ಇಲ್ಲ, ಕೇವಲ 2 ನಿಮಿಷದಲ್ಲಿ ಬ್ಯಾಟರಿ ಸ್ವಾಪ್ ಮಾಡಿ!
Recommended image2
Ampere ಎಲೆಕ್ಟ್ರಿಕ್ ಸ್ಕೂಟರ್ Reo VYB ಲಾಂಚ್, ನಿರೀಕ್ಷೆಯೇ ಮಾಡದಂಥ ಬೆಲೆಯಲ್ಲಿ ಸಿಗ್ತಿದೆ ಹೊಸ ಇವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved