- Home
- Automobile
- Car News
- ಹೊಸ ಅವತಾರದಲ್ಲಿ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್, ಶೀಘ್ರದಲ್ಲೇ ಹೊಸ ಎಂಜಿನ್ ಕಾರು ಮಾರುಕಟ್ಟೆಗೆ
ಹೊಸ ಅವತಾರದಲ್ಲಿ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್, ಶೀಘ್ರದಲ್ಲೇ ಹೊಸ ಎಂಜಿನ್ ಕಾರು ಮಾರುಕಟ್ಟೆಗೆ
ಮಾರುತಿ ಸುಜುಕಿ ಕಾರುಗಳ ಪೈಕಿ ದಾಖಲೆ ಬರೆದಿರುವ ಬ್ರೆಜಾ ಕಾರು ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. 1,0 ಲೀಟರ್ ಎಂಜಿನ್, ಕಡಿಮೆ ಬೆಲೆ, ಅತ್ಯಂಕ ಆಕರ್ಷಕ ಡಿಸೈನ್ ಸೇರಿದಂತೆ ಹಲವು ಹೊಸತನ ಈ ಕಾರಿನಲ್ಲಿದೆ.

ಹೊಸ ವಿನ್ಯಾಸದಲ್ಲಿ ಹೊಸ ಬ್ರೆಜಾ ಕಾರು
ಮಾರುತಿ ಸುಜುತಿ ಭಾರತದಲ್ಲಿ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಮಾರುತಿ ಸುಜುಕಿಯ ಬಹುತೇಕ ಎಲ್ಲಾ ಕಾರುಗಳು ಮುಂಚೂಣಿಯಲ್ಲಿದೆ. ಈ ಪೈಕಿ ಅತ್ಯಂತ ಯಶಸ್ವಿ ಕಾರು ಮಾರುತಿ ಸುಜುಕಿ ಬ್ರೆಜಾ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಹೊಸ ವಿನ್ಯಾಸ, ಹೊಸ ಎಂಜಿನ್, ಹೊಸ ಫೀಚರ್ಸ್ ಈ ಕಾರಿನಲ್ಲಿದೆ.
ಹೊಸ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರು
ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿದೆ. ಟೆಸ್ಟಿಂಗ್ ಪೂರ್ಣಗೊಳಿಸಿದ್ದು, ಕಾರು ಪ್ರಿಯರಿಗೆ ಹಲವು ಅಚ್ಚರಿ ನೀಡಲು ಸಜ್ಜಾಗಿದೆ. ಮುಂಭಾದದಲ್ಲಿ ಹೆಚ್ಚು ಅಗಲವಾದ ಗ್ರಿಲ್ ಬಳಸಲಾಗಿದೆ. ಇನ್ನು ಕ್ರೋಮ್ ಎಲಿಮೆಂಟ್ ಬಳಸಲಾಗಿದೆ. ಇದರಿಂದ ಕಾರಿನ ಲುಕ್ ಮತ್ತಷ್ಟು ಹೆಚ್ಚಾಗಿದೆ.
ಮೊದಲ ನೋಟದಲ್ಲೇ ಲವ್
ವರ್ಟಿಕಲ್ ಫಾಗ್ ಲ್ಯಾಂಪ್, ಸಿಲ್ವರ್ ಸ್ಕಿಡ್ ಪ್ಲೇಟ್ ಬಳಸಲಾಗಿದೆ. ಜೊತೆಗೆ ಟೇಲ್ ಲೈಟ್, ಹೆಡ್‌ಲೈಟ್ ಮತ್ತಷ್ಟು ಆಕರ್ಷಕಗೊಂಡಿದೆ. ಮೊದಲ ನೋಟದಲ್ಲಿ ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರು ಎಲ್ಲರನ್ನು ಮೋಡಿ ಮಾಡುವಂತಿದೆ. ಜೊತೆಗೆ ಎಂಜಿನ್ ಹಾಗೂ ಫೀಚರ್‌ನಲ್ಲೂ ಹೊಸತನಗಳಿವೆ.
1.0 ಲೀಟರ್ ಟರ್ಬೋ ಎಂಜಿನ್ ಸಾಧ್ಯತೆ
ಮಾರುತಿ ಸುಜುಕಿ ಬ್ರೆಜಾ ಕಾರು ಇದೇ ಮೊದಲ ಬಾರಿಗೆ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ 6 ಸ್ಪೀಡ್ ಟ್ರಾನ್ಸ್‌ಮಿಶನ್ ಮೂಲಕ ಲಭ್ಯವಾಗಲಿದೆ. ಇದರಲ್ಲಿ 1.2 ಲೀಟರ್ ಎಂಜಿನ್ ಆಯ್ಕೆಯೂ ಲಭ್ಯ ಇರಲಿದೆ.ಇದರಿಂದ ಗ್ರಾಹಕರಿಗೆ ಎಂಜಿನ್ ವಿಚಾರದಲ್ಲಿ ಹಲವು ಆಯ್ಕೆ ಲಭ್ಯವಾಗಲಿದೆ.
ಹೊಸ ಬ್ರಿಜಾ ಫೀಚರ್
10.1 ಇಂಟಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇರಲಿದೆ.ಸದ್ಯ ಬ್ರಿಜಾ ಕಾರಿನಲ್ಲಿ 9 ಇಂಜಿನ ಸಿಸ್ಟಮ್ ಬಳಸಲಾಗಿದೆ. ವೆಂಟಿಲೇಟೆಡ್ ಸೀಟ್, ಪ್ಯಾನೋ ಸನ್‌ರೂಫ್ ಫೀಚರ್ಸ್ ಇದರಲ್ಲಿದೆ. ಇನ್ನು ಪೆಟ್ರೋಲ್ ಹಾಗೂ ಸಿಎನ್‌ಜಿ ವೇರಿಯೆಂಟ್‌ನಲ್ಲಿ ಕಾರು ಲಭ್ಯವಾಗಲಿದೆ.
ಬ್ರೆಜಾ ಪ್ರತಿಸ್ಪರ್ಧಿ ಕಾರುಗಳು
ಮಾರುತಿ ಸುಜುಕಿ ಬ್ರೆಜಾ ಕಾರು ಸಬ್ ಕಾಂಪಾಕ್ಟ್ ವಿಭಾಗದಲ್ಲಿ ಹಲವು ದಾಖಲೆ ಬರೆದಿದೆ. ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರ 3ಎಕ್ಸ್ಒ, ಸ್ಕೋಡಾ ಕೈಲಾಖ್ ಸೇರಿದಂತೆ ಹಲವು ಸಬ್ ಕಾಂಪಾಕ್ಟ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.

