ಆಗಸ್ಟ್ ತಿಂಗಳಲ್ಲಿ ಹಲವು ಕಾರುಗಳು ಬಿಡುಗಡೆಯಾಗುತ್ತಿದೆ. ಈ ಪೈಕಿ ಮಹೀಂದ್ರ ಭಾರಿ ಸಂಚಲನ ಸೃಷ್ಟಿಸಲಿದೆ. ವಿಶನ್ ಎಸ್ ಸೇರಿದಂತೆ ಪ್ರಮುಖ ಕಾರು ಬಿಡುಗಡೆಯಾಗುತ್ತಿದೆ. ಈ ತಿಂಗಳಲ್ಲಿ ಕಾರು ಖರೀದಿಸಲು ಪ್ಲಾನ್ ಮಾಡಿರುವ ಜನ 15 ದಿನದಲ್ಲೇ ಹೊಸ ಕಾರು ಬುಕ್ ಮಾಡಬಹುದು.

ನವದೆಹಲಿ (ಆ.01) ಭಾರತದಲ್ಲಿ ಪ್ರತಿ ತಿಂಗಳು ಹೊಸ ಹೊಸ ಕಾರು ಮಾರುಕಟ್ಟೆ ಪ್ರವೇಶಿಸುತ್ತಿದೆ. ಶೀಘ್ರದಲ್ಲೇ ಅಮೆರಿಕ, ಚೀನಾ ಸೇರಿದಂತೆ ಇತರ ದೇಶದ ಕಾರುಗಳು ಭಾರತಕ್ಕೆ ಎಂಟ್ರಿಕೊಡುತ್ತಿದೆ. ಇದೀಗ ಆಗಸ್ಟ್ ತಿಂಗಳಲ್ಲಿ ಹಲವು ಕಾರುಗಳು ಬಿಡುಗಡೆಯಾಗುತ್ತಿದೆ. ಈ ಬಾರಿ ಮಹೀಂದ್ರ ಪ್ರಮುಖ ಮೂರು ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಭಾರತದಲ್ಲಿ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದೆ. ಇನ್ನು ಫೇಸ್‌ಲಿಫ್ಟ್ ವರ್ಶನ್ ಕಾರುಗಳು, ಅಪ್‌ಡೇಟ್ ಫೀಚರ್ ಕಾರುಗಳು ಬಿಡುಗಡೆಯಾಗುತ್ತಿದೆ.

JSW ಸ್ಟೀಲ್ ಕಂಪನಿಯಿಂದ ಹೊಸ ಕಾರು

JSW ಸ್ಟೀಲ್ ಕಂಪನಿ ಹಾಗೂ ಎಂಜಿ ಮೋಟಾರ್ಸ್ ಸಹಯೋಗದಲ್ಲಿ ಭಾರತದಲ್ಲಿ ಮೊದಲ ಕಾರು ಬಿಡುಗಡೆಯಾಗುತ್ತಿದೆ. ಇದು ಪ್ಲಗ್ ಇನ್ ಹೈಬ್ರಿಡ್ ಕಾರಾಗಿದೆ. ಹೊಸ ಕಾರು ಚೀನಾದ ವುಲಿಂಗ್ ಎಕ್ಸಿಯಾನ್ ಕಾರಿನ ಶೈಲಿ ಹೊಂದಿದೆ. JSW ಈ ತಿಂಗಳಲ್ಲಿ ಬಿಡುಗಡೆ ಮಾಡಲಿರುವ ಈ ಕಾರು ಮಹೀಂದ್ರಾ XEV 9S, ಟಾಟಾ ಸಫಾರಿ, ಮಹೀಂದ್ರಾ XUV 7XO ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಮಹೀಂದ್ರ ವಿಶನ್ ಎಸ್ ಕಾನ್ಸೆಪ್ಟ್

ಮಹೀಂದ್ರ ವಿಶನ್ ಎಸ್ ಕಾನ್ಸೆಪ್ಟ್ ಕಾರು ಬಹುನಿರೀಕ್ಷಿತ ಕಾರಾಗಿದೆ. ಆಗಸ್ಟ್ 15ರಂದು ಈ ಕಾರು ಅನಾವರಣಗೊಳ್ಳಲಿದೆ. ಈ ಕಾರು ಮಹೀಂದ್ರ 3ಎಕ್ಸ್ ಒ ಕಾರಿಗಿಂತ ಗೊಡ್ಡ ಗಾತ್ರ ಹೊಂದಿದೆ. Nu_IQ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಈ ಕಾರು ನಿರ್ಮಾಣಗೊಂಡಿದೆ. ಭಾರತದಲ್ಲಿ ವಿಶನ್ ಎಸ್ ಕಾರಿನ ಕುತೂಹಲ ಹೆಚ್ಚಾಗಿದೆ. ಕಾರಣ ಇದು ಮಹೀಂದ್ರದ ಹೊಸ ಕಾರಾಗಿದ್ದು, ಬೆಲೆ, ಮೈಲೇಜ್, ಪರ್ಪಾಮೆನ್ಸ್

ಮಹೀಂದ್ರ ಸ್ಕಾರ್ಪಿಯೋ ಎನ್ ಫೇಸ್‌ಲಿಫ್ಟ್

ಮಹೀಂದ್ರ ಸ್ಕಾರ್ಪಿಯೋ ಹಲವು ಅಪ್‌ಡೇಟ್ ಮೂಲಕ ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ದಿನ ಬಿಡುಗಡೆಯಾಗುವ ಸ್ಕಾರ್ಪಿಯೋ ಎನ್ ಫೇಸ್‌ಲಿಫ್ಟ್ ಕಾರು ಭರ್ಜರಿ ಆಫರ್ ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಕಾರಿನ ಅಂದಾದು ಬೆಲೆ 13.50 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಮಹೀಂದ್ರ ಬಿಇ6 ಅಪ್‌ಡೇಟೆಡ್

ಮಹೀಂದ್ರ ಜನಪ್ರಿಯ ಹಾಗೂ ಅತ್ಯಂತ ಆಕರ್ಷಕ ಎಲೆಕ್ಟ್ರಿಕ್ ಕಾರು ಬಿಇ6 ಹೊಸ ಅಪ್‌ಡೇಟ್, ಹೊಸ ಫೀಚರ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ಆಗಸ್ಟ್ 15ಕ್ಕೆ ಮಹೀಂದ್ರ ಈ ಕಾರು ಬಿಡುಗಡೆ ಮಾಡುತ್ತಿದೆ. ಫ್ರಂಟ್ ಗ್ರಿಲ್, ಬಂಪರ್ ಸೇರಿದಂತೆ ಹಲವು ಹೊಸತನಗಳು ಈ ಕಾರಿನಲ್ಲಿದೆ.

ಸ್ಕೋಡಾ ಸ್ಲಾವಿಯಾ ಫೇಸ್‌ಲಿಫ್ಟ್

ಸೆಡಾನ್ ಕಾರುಗಳ ಪೈಕಿ ಆರಾಮದಾಯಕ, ಪರ್ಫಾಮೆನ್ಸ್ ಹಾಗೂ ಅತ್ಯಂತ ಸ್ಟೈಲೀಶ್ ಕಾರಾಗಿ ಗುರುತಿಸಿಕೊಂಡಿರುವ ಸ್ಕೋಡಾ ಸ್ಲಾವಿಯಾ ಫೇಸ್‌ಲಿಫ್ಟ್ ಕಾರು ಆಗಸ್ಟ್ 18ಕ್ಕೆ ಬಿಡುಗಡೆಯಾಗುತ್ತಿದೆ. ಈ ಕಾರಿನ ಅಂದಾಜು ಬೆಲೆ 10.99 ಲಕ್ಷ ರೂಪಾಯಿಯಿಂದ 18.50 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ).