- Home
- Automobile
- Car News
- ಟಾಟಾದಿಂದ ಐಷಾರಾಮಿ ಅವಿನ್ಯ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಿದ್ಧತೆ, ಬೆಲೆ, ವಿಶೇಷತೆಗಳೇನು?
ಟಾಟಾದಿಂದ ಐಷಾರಾಮಿ ಅವಿನ್ಯ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಿದ್ಧತೆ, ಬೆಲೆ, ವಿಶೇಷತೆಗಳೇನು?
ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳ ಪೈಕಿ ಇದೀಗ ಐಷಾರಾಮಿ ಅವಿನ್ಯ ಕಾರು ಬಿಡುಗಡೆ ಸಿದ್ಧತೆ ಮಾಡಿದೆ. ಈಗಾಗಲೇ ಡ್ಯಾಶ್‌ಬೋರ್ಡ್ ಸೇರಿದತೆ ಇಂಟಿರಿಯರ್ ಮಾಹಿತಿ ಬಹಿರಂಗವಾಗಿದೆ. ಅತ್ಯಂತ ಆಕರ್ಷಕ ಕಾರಿನಲ್ಲಿದೆ ಹಲವು ವಿಶೇಷತೆ.

ಟಾಟಾ ಅವಿನ್ಯ ಇವಿ ಕಾರು
ಟಾಟಾ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಪೈಕಿ ಗರಿಷ್ಠ ಮಾರಾಟದ ಕಂಪನಿಯಾಗಿ ಹೊರಹೊಮ್ಮಿದೆ. ಗ್ರಾಹಕರಿಗೆ ಹಲವು ಆಯ್ಕೆ ನೀಡಿರುವ ಟಾಟಾ ಮೋಟಾರ್ಸ್ ಇದೀಗ ಹೊಚ್ಚ ಹೊಸ ಹಾಗೂ ಅತ್ಯಂತ ಆಕರ್ಷಕ ಅವಿನ್ಯ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಕಾರಿನ ಡ್ಯಾಶ್‌ಬೋರ್ಡ್ ಹಾಗೂ ಇಂಟಿರಿಯರ್ ಡಿಸೈನ್ ಬಹಿರಂಗವಾಗಿದೆ. ಇದು ಅತ್ಯಂತ ಆಕರ್ಷಕ ಹಾಗೂ ಐಷಾರಾಮಿ ಎಲೆಕ್ಟ್ರಿಕ್ ಕಾರು.
ಅವಿನ್ಯ ಕಾರಿನ ಬೆಲೆ
ಟಾಟಾ ಅವಿನ್ಯ ಕಾರು ಐಷಾರಾಮಿ ಎಲೆಕ್ಟ್ರಿಕ್ ಕಾರು. ಹಲವು ಐಷಾರಾಮಿ ಬ್ರಾಂಡ್ ಕಾರುಗಳಿಗೆ ಟಾಟಾ ಅವಿನ್ಯ ಪ್ರತಿಸ್ಪರ್ಧೆ ನೀಡಲಿದೆ. ಆಡಿ, ಬೆಂಜ್ ಸೇರಿದಂತೆ ಹಲವು ಪ್ರತಿಷ್ಠಿತ ಬ್ರ್ಯಾಂಡ್ ಕಾರುಗಳ ಇವಿ ಕಾರಿಗೆ ಹೋಲಿಸಿದರೆ ಟಾಟಾ ಅವಿನ್ಯ ಕಾರಿನ ಬೆಲೆ ಅತೀ ಕಡಿಮೆ. ಟಾಟಾ ಅವಿನ್ಯ ಇವಿ ಕಾರಿನ ಬೆಲೆ 40 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುವ ಸಾಧ್ಯತೆ ಎಂದು ಅಂದಾಜಿಸಲಾಗಿದೆ.
ಯಾವಾಗ ಟಾಟಾ ಅವಿನ್ಯ ಕಾರು ಬಿಡುಗಡೆ
ಟಾಟಾ ನೆಕ್ಸಾನ್, ಟಾಟಾ ಕರ್ವ್ ಇವಿ ಕಾರುಗಳಿಗಿಂತ ಅವಿನ್ಯ ಇವಿ ಕಾರಿನ ಡಿಸೈನ್ ಅತ್ಯಂತ ವಿಶೇಷ ಹಾಗೂ ಆಕರ್ಷಕವಾಗಿದೆ. ಟಿ ಶೇಪ್ ಅವಿನ್ಯ ಲೋಗೋ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಕ್ಯಾಬಿನ್ ಇರಲಿದೆ. ಟಾಟಾ ಅವಿನ್ಯ ಇವಿ ಕಾರು 2026ರ ಅಂತ್ಯದ ವೇಳೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ.
ಮೊದಲ ನೋಟದಲ್ಲೇ ಲವ್
ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಬ್ರ್ಯಾಂಡ್‌ನಿಂದ ಸ್ಪೂರ್ತಿ ಪಡೆದು ಟಾಟಾ ಅವಿನ್ಯ ಡಿಸೈನ್ ಮಾಡಲಾಗಿದೆ. ಐಷಾರಾಮಿ ತನಕ್ಕೆ ಯಾವುದೇ ಕೊರತೆ ಇಲ್ಲದಂತೆ ಈ ಹೊಸ ಕಾರನ್ನು ಉತ್ಪಾದಿಸಲಾಗುತ್ತಿದೆ. ಅವಿನ್ಯ ಮೊದಲ ನೋಟದಲ್ಲೇ ಮನಸೋಲುವ ಲುಕ್ ನೀಡಲಿದೆ. ಅವಿನ್ಯ ಕಾರಿನ ಡಿಸೈನ್ ಈಗಾಗಲೇ ಭಾರಿ ಚರ್ಚೆಯಾಗುತ್ತಿದೆ.
ಐಷಾರಾಮಿ ಕಾರುಗಳಿಗೆ ತೀವ್ರ ಸ್ಪರ್ಧೆ
ವೈಡ್ ಸ್ಲೀಕ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ದೊಡ್ಡ ಇನ್ಫೊಟೈನ್ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಇತರ ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ. ಹೊಸ ಅವಿನ್ಯ ಕಾರಿನ ಕುರಿತು ಕುತೂಹಲ ತೀವ್ರಗೊಳ್ಳುತ್ತಿದೆ. ಈಗಾಗಲೇ ಭಾರತದಲ್ಲಿ ಹಲವು ಬ್ರ್ಯಾಂಡ್ ಇವಿ ಕಾರುಗಳು ಲಭ್ಯವಿದೆ. ಆದರೆ ಅವಿನ್ಯ ಐಷಾರಾಮಿ ಕಾರುಗಲಿಗೆ ತೀವ್ರ ಪ್ರತಿಸ್ಪರ್ಧೆ ನೀಡಲಿದೆ.

