ಬಹುನಿರೀಕ್ಷಿತ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಬಿಡುಗಡೆ ಯಾವಾಗ? ಇಲ್ಲಿದೆ ಫೀಚರ್ಸ್
ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಕಾಂಪ್ಯಾಕ್ಟ್ ಕಾರ್ ನ್ಯಾನೋವನ್ನು ಎಲೆಕ್ಟ್ರಿಕ್ ರೂಪದಲ್ಲಿ ಮರು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಹೊಸ ಆವೃತ್ತಿಯು ಪರಿಸರ ಸ್ನೇಹಿಯಾಗಿರಲಿದ್ದು, ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. 200 ಕಿಮೀ ಓಡುವ ಸಾಮರ್ಥ್ಯ ಇದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ತನ್ನ ಒಂದು ಕಾಲದ ಪ್ರಸಿದ್ಧ ಕಾಂಪ್ಯಾಕ್ಟ್ ಕಾರ್ ಟಾಟಾ ನ್ಯಾನೋನ ಮತ್ತೆ ಗ್ರಾಂಡ್ ಆಗಿ ಲಾಂಚ್ ಮಾಡೋಕೆ ಟಾಟಾ ಮೋಟಾರ್ಸ್ ಭರ್ಜರಿ ತಯಾರಿ ನಡೆಸುತ್ತಿದೆ. ಈ ಸಲ ಈ ಕಾರ್ ಹೊಸ ಅವತಾರದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಆಗಿ ಗ್ರಾಹಕರ ಮುಂದೆ ಬರಲಿದೆ. ಒಂದು ಕಾಲದಲ್ಲಿ ಭಾರತದ್ಲಿ ತುಂಬಾ ಕಡಿಮೆ ರೇಟ್ಗೆ ಸಿಗೋ ಕಾರ್ ಅಂತ ಹೆಸರು ಮಾಡಿದ್ದ ಟಾಟಾ ನ್ಯಾನೋ, ಲಾಂಚ್ ಆದಾಗ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದ್ರೆ, ಕಡಿಮೆ ಡಿಮ್ಯಾಂಡ್ ಮತ್ತು ಬಿಡಿಭಾಗಗಳ ಸಮಸ್ಯೆ ಇದ್ದ ಕಾರಣ ಅದರ ಉತ್ಪಾದನೆಯನ್ನು ನಿಲ್ಲಿಸಲಾಯ್ತು. ಈಗ, ಟಾಟಾ ಮೋಟಾರ್ಸ್ ನ್ಯಾನೋ ಬ್ರಾಂಡ್ಗೆ ಹೊಸ ಲುಕ್ ಮೂಲಕ ಎಂಟ್ರಿ ಕೊಡೋಕೆ ರೆಡಿಯಾಗಿದೆ, ಮತ್ತೆ ಎಲೆಕ್ಟ್ರಿಕ್ ಪವರ್ಟ್ರೇನ್ ಜೊತೆ ಕಾರಿಗೆ ಹೊಸ ಲೈಫ್ ಕೊಡೋಕೆ ತಯಾರಿ ನಡೆಯುತ್ತಿದೆ ಎಂಬ ವರದಿ ಇದೆ.
₹3,800 ಕೋಟಿ ಆಸ್ತಿಯ ರತನ್ ಟಾಟಾ ಬಳಿ ಇದಿದ್ದು ಒಂದು ಮೊಬೈಲ್ 34 ವಾಚ್ ಜೊತೆ ಸೀಕ್ರೆಟ್ ವೆಪನ್
ಸಾಮಾನ್ಯ ಫ್ಯೂಯಲ್ ಇರಲ್ಲ
ಮುಂದೆ ಬರಲಿರೋ ಟಾಟಾ ನ್ಯಾನೋ ಕಾರಿನಲ್ಲಿ ಹಳೆಯ ಇಂಟರ್ನಲ್ ಕಂಬಶ್ಚನ್ ಇಂಜಿನ್ಗಳನ್ನು ಬಳಕೆ ಮಾಡುವುದಿಲ್ಲವಂತೆ. ಪೆಟ್ರೋಲ್ನಲ್ಲಿ ಓಡಾಡೋ ಹಳೆ ಮಾಡೆಲ್ ತರ ಅಲ್ಲ. ಹೊಸ ನ್ಯಾನೋ ಫುಲ್ ಇವಿ ಆಗಿರುತ್ತೆ. ಇದು ದೇಶದಲ್ಲಿ ಪರಿಸರಕ್ಕೆ ಹೊಂದಿಕೊಳ್ಳೋ ಮೂವ್ಮೆಂಟ್ ಸೊಲ್ಯೂಷನ್ಗಳ ಟ್ರೆಂಡ್ ಜೊತೆ ಹೊಂದಾಣಿ ಆಗಲಿದೆ. ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ವೆಹಿಕಲ್ ಪೋರ್ಟ್ಫೋಲಿಯೋನ ಜಾಸ್ತಿ ಮಾಡಿದಂತೆ, ನ್ಯಾನೋ ಇವಿ ಲಾಂಚ್ ಮಾಡೋದು ಸ್ಟಾರ್ಟಿಂಗ್ ಲೆವೆಲ್ ಇವಿ ಸೆಗ್ಮೆಂಟ್ನಲ್ಲಿ ತನ್ನ ಇರುವಿಕೆಯನ್ನು ಇನ್ನಷ್ಟು ಬಲಿಷ್ಠ ಮಾಡಲಿದೆ ಎಂಬ ನಿರೀಕ್ಷೆ ಇದೆ.
ಏರ್‌ಕ್ರಾಫ್ಟ್ ನಿರ್ಮಾಣಕ್ಕಾಗಿ ಕರ್ನಾಟಕದಲ್ಲಿ ಭಾರೀ ಜಾಗ ಖರೀದಿ ಮಾಡಿದ Tata Advanced Systems!
ಕಡಿಮೆ ಬೆಲೆಗೆ ಸಿಗುತ್ತೆ
ಟಾಟಾ ನ್ಯಾನೋ ಇವಿ ಕಂಪನಿಯಲ್ಲೇ ತುಂಬಾನೇ ಕಡಿಮೆ ಬೆಲೆಗೆ ಸಿಗೋ ಎಲೆಕ್ಟ್ರಿಕ್ ಕಾರು ಆಗೋ ಚಾನ್ಸ್ ಇದೆ. ಬೆಲೆಯ ಬಗ್ಗೆ ತಲೆ ಕೆಡಿಸಿಕೊಳ್ಳೋ ಗ್ರಾಹಕರನ್ನು ಟಾರ್ಗೆಟ್ ಮಾಡಿ, ಇಂಡಿಯಾದಲ್ಲಿ ಬೆಳೆಯುತ್ತಿರುವ ಇವಿ ಮಾರ್ಕೆಟ್ನಲ್ಲಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ ಆಗಿ ಬರಲಿದೆಯಂತೆ. ಟಾಟಾ ಆಲ್ರೆಡಿ ಟಿಯಾಗೋ ಇವಿ, ಟಿಗೋರ್ ಇವಿ ಮತ್ತೆ ನೆಕ್ಸಾನ್ ಇವಿ ತರ ಫೇಮಸ್ ಎಲೆಕ್ಟ್ರಿಕ್ ಮಾಡೆಲ್ಗಳನ್ನು ಹೊಂದಿದೆ. ಈ ಲಿಸ್ಟ್ಗೆ ನ್ಯಾನೋ ಇವಿ ಸೇರಿಕೊಂಡಿದೆ. ಬೇಸಿಕ್ ಮತ್ತೆ ಎಫಿಷಿಯೆಂಟ್ ಅರ್ಬನ್ ಮೂವ್ಮೆಂಟ್ ಸೊಲ್ಯೂಷನ್ ಹುಡುಕೋ ಗ್ರಾಹಕರಿಗೆ ಇದು ಸಹಾಯವಾಗಲಿದೆ. ಜೊತೆಗೆ ಮಧ್ಯಮ ವರ್ಗದವರಿಗೆ ಜನಸ್ನೇಹಿ ಆಗುವುದರಲ್ಲಿ ಎರಡು ಮಾತಿಲ್ಲ.
ನಿರೀಕ್ಷಿತ ಫೀಚರ್ಸ್ ಮತ್ತೆ ರೇಂಜ್
ನ್ಯಾನೋದ ಎಲೆಕ್ಟ್ರಿಕ್ ವರ್ಷನ್ ತುಂಬಾ ಇಂಪಾರ್ಟೆಂಟ್ ಅಪ್ಗ್ರೇಡ್ಗಳ ಜೊತೆಗೆ ಬರಲಿದೆ ಎಂಬ ನಿರೀಕ್ಷೆ ಇದೆ. ಐಕಾನಿಕ್ ಡಿಸೈನ್ ಹಳೆ ಮಾಡೆಲ್ ರೀತಿಯಲ್ಲೇ ಇರಬಹುದು, ಆದ್ರೆ ಪ್ಲಾಟ್ಫಾರ್ಮ್ ಮತ್ತೆ ಕ್ಯಾಬಿನ್ ಫೀಚರ್ಸ್ನ ಚೇಂಜ್ ಮಾಡ್ತಾರೆ ಎನ್ನಲಾಗುತ್ತಿದೆ. ಟಾಟಾದ ಬೇರೆ ಇವಿಗಳಲ್ಲಿ ಯೂಸ್ ಮಾಡಿರೋದಕ್ಕಿಂತ ಎಲೆಕ್ಟ್ರಿಕ್ ಮೋಟಾರ್ ಚಿಕ್ಕದಾಗಿರುತ್ತೆ, ಅದ್ರಿಂದ ಕಾರ್ ಲೈಟ್ ಆಗಿ ಮತ್ತೆ ಎಫಿಷಿಯೆಂಟ್ ಆಗಿ ಇರುತ್ತೆ. ಇದು ಒಂದ್ಸಲ ಚಾರ್ಜ್ ಮಾಡಿದ್ರೆ 200 ಕಿಲೋಮೀಟರ್ ವರೆಗೂ ಓಡೋ ರೇಂಜ್ ಕೊಡುತ್ತೆ. ಸಿಟಿ ಒಳಗಡೆ ಡೈಲಿ ಯೂಸ್ಗೆ ಬಹಳ ಉಪಯುಕ್ತವಾಗಿದೆ.
ನೆಕ್ಸಾನ್, ಪಂಚ್, ಅಲ್ಟ್ರೋಜ್ ಸೇರಿ ಟಾಟಾ ಕಾರುಗಳಿಗೆ ಬರೋಬ್ಬರಿ 1.35 ಲಕ್ಷ ರೂ ಡಿಸ್ಕೌಂಟ್
ಟಾಟಾ ನ್ಯಾನೋ ಜರ್ನಿಯಲ್ಲಿ ಹೊಸ ಅಧ್ಯಾಯ
ಆಫೀಶಿಯಲ್ ಡೀಟೇಲ್ಸ್ ಮತ್ತೆ ಲಾಂಚ್ ಡೇಟ್ಸ್ ಇನ್ನೂ ರಿವೀಲ್ ಆಗಿಲ್ಲ, ಆದ್ರೆ ಟಾಟಾ ನ್ಯಾನೋ ಇವಿ ಸಿಕ್ಕಾಪಟ್ಟೆ ಎಕ್ಸೈಟ್ಮೆಂಟ್ ಕ್ರಿಯೇಟ್ ಮಾಡಿರುವುದಂತೂ ಸುಳ್ಳಲ್ಲ. ಟಾಟಾ ಮೋಟಾರ್ಸ್ ಆಲ್ರೆಡಿ ಮುಂದಿನ ಐದು ವರ್ಷಗಳಲ್ಲಿ 10 ಹೊಸ ಎಲೆಕ್ಟ್ರಿಕ್ ಮಾಡೆಲ್ಗಳನ್ನು ಲಾಂಚ್ ಮಾಡೋ ಪ್ಲಾನ್ನ ಅನೌನ್ಸ್ ಮಾಡಿದೆ. ಹಳೆ ನ್ಯಾನೋ 2008ರಲ್ಲಿ ಬರೀ ಒಂದು ಲಕ್ಷ ರೂಪಾಯಿ ಸ್ಟಾರ್ಟಿಂಗ್ ರೇಟ್ನಲ್ಲಿ ಲಾಂಚ್ ಆಗಿತ್ತು, ಮತ್ತೆ ಇವಿ ವರ್ಷನ್ ಕೂಡ ಅದೇ ತರ ಅಟ್ರಾಕ್ಟಿವ್ ರೇಟ್ನ ಮೇಂಟೇನ್ ಮಾಡಿದ್ರೆ, ಅದು ಮತ್ತೆ ಇಂಡಿಯಾದಲ್ಲಿ ಬಜೆಟ್ ಕಾರ್ ಎಂಬ ಹೊಸ ಚರಿತ್ರೆ ಬರೆದರೆ ಅದರಲ್ಲಿ ವ್ಯತ್ಯಾಸವೇನೂ ಇಲ್ಲ. ಆಶ್ಚರ್ಯವೂ ಇಲ್ಲ.