ಟೆಸ್ಲಾ ಕಾರಿನ ನಂಬರ್ ಪ್ಲೇಟ್ ಮೇಲೆ ಕನ್ನಡ, ಅಮೆರಿಕದಲ್ಲಿ ಟೆಸ್ಲಾಗೆ ಮನಸೋತ ಶಿವರಾಜ್ ಕುಮಾರ್!
ಕರ್ನಾಟಕದಿಂದ ಬೇರೆ ರಾಜ್ಯಕ್ಕೆ, ಇನ್ನು ಬೇರೆ ದೇಶಕ್ಕೆ ತೆರಳಿದಾಗ ಕನ್ನಡಿಗರು, ಕನ್ನಡ ಮಾತು ಕೇಳಿದರೆ ಕಿವಿ ನೆಟ್ಟಗಾವುದು ಮಾತ್ರವಲ್ಲ, ಮನಸ್ಸು ತುಂಬಿಬರುತ್ತದೆ. ಕನ್ನಡ ಸಮಾವೇಶಕ್ಕಾಗಿ ಅಮೆರಿಕ ಪ್ರವಾಸದಲ್ಲಿದ್ದ ಶಿವರಾಜ್ ಕುಮಾರ್ ಸುತ್ತ ಕನ್ನಡಿಗರೇ ತುಂಬಿದ್ದರು. ಇದರ ನಡುವೆ ಶಿವಣ್ಣಗೆ ವಾಶಿಂಗ್ಟನ್ ರಿಜಿಸ್ಟ್ರೇಶನ್ ಟೆಸ್ಲಾ ಕಾರು ಮೋಡಿ ಮಾಡಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿಮಾ ಜೊತೆ ಹಲವು ಕಾರ್ಯಕ್ರಮಗಳಲ್ಲೂ ಬ್ಯೂಸಿಯಾಗಿದ್ದಾರೆ. ಕಳೆದ ವಾರ 7ನೇ ವಿಶ್ವ ನಾವಿಕ ಕನ್ನಡ ಸಮಾವೇಶ ಕಾರ್ಯಕ್ರಮಕ್ಕಾಗಿ ಅಮೆರಿಕ ಪ್ರವಾಸ ಮಾಡಿದ್ದರು.
ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಸೆಲೆಬ್ರೆಟಿಗಳ ತಂಡ ಈ ಸಮಾವೇಶದಲ್ಲಿ ಪಾಲ್ಗೊಂಡಿತ್ತು. ಶಿವರಾಜ್ ಕುಮಾರ್ ಅವರನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಗಿತ್ತು. ಶಿವಣ್ಣ ಪಂಚೆ ಉಟ್ಟ ಭರ್ಜರಿ ಸ್ಟೆಪ್ಸ್ ಹಾಕಿದ್ದರು.
ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ಆಯೋಜಿಸುವ ಈ ಕಾರ್ಯಕ್ರಮ ಪ್ರತಿ ಬಾರಿ ಹಲವು ವಿಶೇಷತೆಗಳಿಂದ ಕೂಡಿದೆ. ಕರ್ನಾಟಕ ಹಾಗೂ ಕನ್ನಡ ಸೊಗಡಿನ ಈ ಕಾರ್ಯಕ್ರಮದಲ್ಲಿ ಕನ್ನಡ ಮೇಳೈಸುತ್ತದೆ. ಶಿವರಾಜ್ ಕುಮಾರ್ ಸುತ್ತ ಅಮೆರಿಕದ ಕನ್ನಡಗರೇ ತುಂಬಿಕೊಂಡಿದ್ದರು.
ಇದರ ನಡುವೆ ಶಿವರಾಜ್ ಕುಮಾರ್‌ಗೆ ವಾಶಿಂಗ್ಟನ್ ಡಿಸಿ ರಿಜಿಸ್ಟ್ರೇಶನ್ ಹೊಂದಿರುವ ಟೆಸ್ಲಾ ಎಲೆಕ್ಟ್ರಿಕ್ ಕಾರು ಗಮನಸೆಳೆದಿದೆ. ಕಾರಣ ಈ ಕಾರಿನ ನಂಬರ್ ಪ್ಲೇಟ್ ಮೇಲೆ ದೊಡ್ಡದಾಗಿ ಕನ್ನಡ ಎಂದು ಬರೆಯಲಾಗಿದೆ.
ಈ ಕಾರು ನೋಡಿ ಶಿವರಾಜ್ ಕುಮಾರ್ ಖಷಿಪಟ್ಟಿದ್ದಾರೆ. ಕಾರಿನ ನಂಬರ್ ಪ್ಲೇಟ್‌ನಲ್ಲಿ ಇಂಗ್ಲೀಷ್ ಮೂಲಕ ಕನ್ನಡ ಎಂದು ಬರೆಯಲಾಗಿದೆ. ಕನ್ನಡ ಪದಗಳು ಬಿಟ್ಟರೆ ನಂಬರ್ ಪ್ಲೇಟ್‌ನಲ್ಲಿ ಇನೇನು ಕಾಣುತ್ತಿಲ್ಲ. ನಂಬರ್ ಕೂಡ ಇಲ್ಲ.
ಶಿವರಾಜ್ ಕುಮಾರ್ ಈ ಕಾರು ವೀಕ್ಷಿಸಿ ಅಚ್ಚರಿ ಪಟ್ಟಿರುವ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಕೆಂಪು ಬಣ್ಣದ ಟೆಸ್ಲಾ ಎಲೆಕ್ಟ್ರಿಕ್ ಕಾರಾಗಿದೆ.
ಮೂರು ದಿನಗಳ ಕಾಲ ಅಮೆರಿಕದಲ್ಲಿ ವಿಶ್ವ ನಾವಿಕ ಕನ್ನಡ ಸಮಾವೇಶ ಆಯೋಜಿಸಲಾಗಿತ್ತು. ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.