MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • ರೇಂಜ್ ರೋವರ್ ಕಾರಿನ ಬೆಲೆ 1.06 ಕೋಟಿ ಇಳಿಕೆ, ಭಾರತ ಯುಕೆ ಟ್ರೇಡ್ ಡೀಲ್ ಬಂಪರ್ ಕೊಡುಗೆ

ರೇಂಜ್ ರೋವರ್ ಕಾರಿನ ಬೆಲೆ 1.06 ಕೋಟಿ ಇಳಿಕೆ, ಭಾರತ ಯುಕೆ ಟ್ರೇಡ್ ಡೀಲ್ ಬಂಪರ್ ಕೊಡುಗೆ

ರೇಂಜ್ ರೋವರ್ ಕಾರಿನ ಬೆಲೆ 1.06 ಕೋಟಿ ಇಳಿಕೆ, ಭಾರತ ಯುಕೆ ಟ್ರೇಡ್ ಡೀಲ್ ಬಂಪರ್ ಕೊಡುಗೆ, ಸೆಲೆಬ್ರೆಟಿಗಳು ಸೇರಿದಂತೆ ಹಲವರ ನೆಚ್ಚಿನ ಕಾರು ಇದೀಗ ಇತರ ಕಾರುಗಳಂತೆ ಸಾಮಾನ್ಯ ಬೆಲೆಯಲ್ಲಿ ಲಭ್ಯ. 

1 Min read
Author : Chethan Kumar
Published : Apr 03 2026, 04:13 PM IST
Share this Photo Gallery
  • FB
  • TW
  • Linkdin
  • Whatsapp
15
ಜಾಗ್ವಾರ್ ಲ್ಯಾಂಡ್ ರೋವರ್ ಕಾರಿನ ಬೆಲೆ ಭಾರಿ ಇಳಿಕೆ
Image Credit : Google

ಜಾಗ್ವಾರ್ ಲ್ಯಾಂಡ್ ರೋವರ್ ಕಾರಿನ ಬೆಲೆ ಭಾರಿ ಇಳಿಕೆ

ಜಾಗ್ವಾರ್ ಲ್ಯಾಂಡ್ ರೋವರ್ (JLR) ಐಷಾರಾಮಿ ಕಾರು ಇದೀಗ ಭಾರತೀಯರಿಗೆ ಗುಡ್ ನ್ಯೂಸ್ ನೀಡಿದೆ. ಭಾರತ ಹಾಗೂ ಯುಕೆ ಟ್ರೇಡ್ ಡೀಲ್‌ ಬಳಿಕ ಇದೀಗ JLR ತನ್ನ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ. ಇದರಿಂದ ಭಾರತದಲ್ಲಿ ಇನ್ನು ರೇಂಜ್ ರೋವರ್ ಸೇರಿದಂತೆ JLR ಕಾರುಗಳು ಸಾಮಾನ್ಯ ಕಾರುಗಳ ಬೆಲೆಯಲ್ಲಿ ಲಭ್ಯವಾಗಲಿದೆ.

25
1.06 ಕೋಟಿ ರೂಪಾಯಿ ಇಳಿಕೆ
Image Credit : Google

1.06 ಕೋಟಿ ರೂಪಾಯಿ ಇಳಿಕೆ

ಜಾಗ್ವಾರ್ ಲ್ಯಾಂಡ್ ರೋವರ್ ಟಾಟಾ ಮೋಟಾರ್ಸ್ ಮಾಲೀಕತ್ವದ ಬ್ರಿಟಿಷ್ ಕಾರು. ಇದರ ಉತ್ಪಾದನೆ ಎಲ್ಲವೂ ಲಂಡನ್‌ನಲ್ಲಿದೆ. ಭಾರತ ಕಾರು, ಬಿಡಿ ಭಾಗ ಆಮದು ಮಾಡಿಕೊಂಡು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ ಇದರ ಆಮದು ಸುಂಕ ದುಬಾರಿಯಾಗಿದ್ದ ಕಾರಣ ಕಾರಿನ ಬೆಲೆಯೂ ದುಬಾರಿಯಾಗಿತ್ತು. ಇದೀಗ ಸುಂಕ ಇಳಿಕೆ ಮಾಡಿದ ಕಾರಣ, JLR ತನ್ನ ಕಾರಿನ ಬೆಲೆಯಲ್ಲೂ ಇಳಿಕೆ ಮಾಡಿದೆ. ಗರಿಷ್ಠ 1.06 ಕೋಟಿ ರೂಪಾಯಿ ವರೆಗೆ ರೇಂಜ್ ರೋವರ್ ಕಾರುಗಳ ಬೆಲೆಯಲ್ಲಿ ಇಳಿಕೆಯಾಗಿದೆ.

Related Articles

Related image1
'ಧುರಂಧರ್ 2' ಹಿಟ್ ಆಗಿದ್ದಕ್ಕೆ ನಟ ರಣವೀರ್‌ ಸಿಂಗ್‌ಗೆ ಅಷ್ಟೊಂದು ದುಬಾರಿ ಕಾರು ಗಿಫ್ಟ್‌ ಕೊಟ್ರಾ ಆದಿತ್ಯ ಧರ್..?
Related image2
ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಬಿಗಿಯಾದ ಕಾನೂನು ಉರುಳು: ಲ್ಯಾಂಬೋರ್ಗಿನಿ ಕಾರು ಸೀಜ್, 35 ಲಕ್ಷ ದಂಡ!
35
ರೇಂಜ್ ರೋವರ್ ಕಾರುಗಳ ಬೆಲೆ ಎಷ್ಟಾಗಲಿದೆ
Image Credit : Land Rover

ರೇಂಜ್ ರೋವರ್ ಕಾರುಗಳ ಬೆಲೆ ಎಷ್ಟಾಗಲಿದೆ

ರೇಂಜ್ ರೋವರ್ 4.4 ಲೀಟರ್ ಪೆಟ್ರೋಲ್ ಎಸ್‌ಯುವಿ ಕಾರಿನ ಬೆಲೆ 4.25 ಕೋಟಿ ರೂಪಾಯಿ ಇದೀಗ ಈ ಕಾರು 3.19 ಕೋಟಿ ರೂಪಾಯಿಗೆ ಸಿಗಲಿದೆ. ರೇಂಜ್ ರೋವರ್ ಸ್ಪೋರ್ಟ್ ಎಡಿಶನ್ ಕಾರಿನ ಬೆಲೆ 2.75 ಕೋಟಿ ರೂಪಾಯಿಯಿಂದ 2.35 ಕೋಟಿ ರೂಪಾಯಿಗೆ ಇಳಿಕೆಯಾಗಲಿದೆ.

45
ಅಮದು ಸುಂಕದಲ್ಲಿ ಭಾರಿ ಇಳಿಕೆ
Image Credit : our own

ಅಮದು ಸುಂಕದಲ್ಲಿ ಭಾರಿ ಇಳಿಕೆ

ಭಾರತ ಯುಕೆ (CETA) ಟ್ರೇಡ್ ಡೀಲ್ ಜುಲೈ 2025ರ ಪ್ರಕರಾ ಅಮದು ಸುಂಕದಲ್ಲಿ ಭಾರಿ ಇಳಿಕೆ ಮಾಡಲಾಗಿದೆ. ಯುಕೆಯಿಂದ ಭಾರತಕ್ಕೆ ಆಮದು ಮಾಡುತ್ತಿರುವ ವಸ್ತುಗಳ ಮೇಲೆ ಶೇಕಡಾ 110ರಷ್ಟು ಸುಂಕ ವಿಧಿಸಲಾಗುತ್ತಿತ್ತು. ಇದೀಗ ಕೇಲ ಶೇಕಡಾ 30 ರಷ್ಟು ಆಮದು ಸುಂಕ ವಿಧಿಸಲಾಗುತ್ತದೆ. ಇದರಿಂದ ಲ್ಯಾಂಡ್ ರೋವರ್ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.

55
ಸೆಲೆಬ್ರೆಟಿಗಳ ನೆಚ್ಚಿನ ಕಾರು
Image Credit : our own

ಸೆಲೆಬ್ರೆಟಿಗಳ ನೆಚ್ಚಿನ ಕಾರು

ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳು ಸೆಲೆಬ್ರೆಟಿಗಳು, ಉದ್ಯಮಿಗಳ ನೆಚ್ಚಿನ ಕಾರಾಗಿದೆ. ಬಾಲಿವುಡ್‌ನ ಹಲವು ನಟ ನಟಿಯರು ರೇಂಜ್ ರೋವರ್ ಸೇರಿದಂತೆ ಜೆಎಲ್ಆರ್ ಕಾರುಗಳನ್ನು ಬಳಸುತ್ತಿದ್ದಾರೆ. ಇತ್ತೀಚೆಗೆ ಆಲಿಯಾ ಭಟ್, ರಣವೀರ್ ಸಿಂಗ್, ರಂದೀಪ್ ಹೂಡ, ಸೋನಮ್ ಕಪೂರ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ರೇಂಜ್ ರೋವರ್ ಕಾರು ಖರೀದಿಸಿದ್ದರು.

ಸೆಲೆಬ್ರೆಟಿಗಳ ನೆಚ್ಚಿನ ಕಾರು

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಕಾರುಗಳು
ಭಾರತ ಸುದ್ದಿ
ಆಟೋಮೊಬೈಲ್

Latest Videos
Recommended Stories
Recommended image1
ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳು ಇನ್ಮುಂದೆ ದುಬಾರಿ: 100% ರೋಡ್ ಟ್ಯಾಕ್ಸ್ ವಿನಾಯಿತಿಗೆ ರಾಜ್ಯ ಸರ್ಕಾರ ಬ್ರೇಕ್!
Recommended image2
EV Car Battery Care: ಎಲೆಕ್ಟ್ರಿಕ್ ಕಾರು ಖರೀದಿಸಿದ್ದೀರಾ? ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಇಲ್ಲಿವೆ ಸಿಂಪಲ್ ಟಿಪ್ಸ್
Recommended image3
ಗೆಳತಿ ಮಹಿಕಾಗೆ ಕೋಟ್ಯಾಂತರ ಮೌಲ್ಯದ ಫೆರಾರಿ ಕಾರು ಗಿಫ್ಟ್ ಕೊಟ್ಟ ಹಾರ್ದಿಕ್ ಪಾಂಡ್ಯ! ಬೆಲೆ ಕೇಳಿ ಫ್ಯಾನ್ಸ್ ಶಾಕ್, ಏನಿದರ ಸ್ಪೆಷಾಲಿಟಿ?
Related Stories
Recommended image1
'ಧುರಂಧರ್ 2' ಹಿಟ್ ಆಗಿದ್ದಕ್ಕೆ ನಟ ರಣವೀರ್‌ ಸಿಂಗ್‌ಗೆ ಅಷ್ಟೊಂದು ದುಬಾರಿ ಕಾರು ಗಿಫ್ಟ್‌ ಕೊಟ್ರಾ ಆದಿತ್ಯ ಧರ್..?
Recommended image2
ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಬಿಗಿಯಾದ ಕಾನೂನು ಉರುಳು: ಲ್ಯಾಂಬೋರ್ಗಿನಿ ಕಾರು ಸೀಜ್, 35 ಲಕ್ಷ ದಂಡ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved