MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • 'ಹೊಸ E20 ಕಾರು ನೀಡಿ, ಇಲ್ಲವೇ 21 ಲಕ್ಷ ವಾಪಾಸ್‌ ಮಾಡಿ..' ಗ್ರಾಹಕ ಕೋರ್ಟ್‌ ತೀರ್ಪಿಗೆ ಮಾರುತಿ ಸುಜುಕಿ ಕಂಗಾಲು!

'ಹೊಸ E20 ಕಾರು ನೀಡಿ, ಇಲ್ಲವೇ 21 ಲಕ್ಷ ವಾಪಾಸ್‌ ಮಾಡಿ..' ಗ್ರಾಹಕ ಕೋರ್ಟ್‌ ತೀರ್ಪಿಗೆ ಮಾರುತಿ ಸುಜುಕಿ ಕಂಗಾಲು!

ಹೊಸ ಮಾರುತಿ ಗ್ರಾಂಡ್ ವಿಟಾರಾ ಕಾರು ಇ-20 ಇಂಧನದಿಂದ ಪದೇ ಪದೇ ಕೈಕೊಟ್ಟ ಕಾರಣ, ಗ್ರಾಹಕನಿಗೆ ಹೊಸ ಕಾರು ನೀಡಿ ಅಥವಾ ₹20.50 ಲಕ್ಷ ಹಣವನ್ನು ಮರಳಿಸುವಂತೆ ರಾಯ್‌ಪುರ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

2 Min read
Author : Santosh Naik
Published : Jul 16 2026, 10:00 PM IST
Share this Photo Gallery
  • FB
  • TW
  • Linkdin
  • Whatsapp
16
ರಾಯ್‌ಪುರ ಗ್ರಾಹಕ ಕೋರ್ಟ್‌ ಆದೇಶಕ್ಕೆ ಕಂಗಾಲಾದ ಮಾರುತಿ
Image Credit : Google

ರಾಯ್‌ಪುರ ಗ್ರಾಹಕ ಕೋರ್ಟ್‌ ಆದೇಶಕ್ಕೆ ಕಂಗಾಲಾದ ಮಾರುತಿ

ಹೊಸದಾಗಿ ಖರೀದಿಸಿದ ಮಾರುತಿ ಸುಜುಕಿ 'ಗ್ರಾಂಡ್ ವಿಟಾರಾ' ಕಾರು ಪದೇ ಪದೇ ಕೈಕೊಟ್ಟ ಹಿನ್ನೆಲೆಯಲ್ಲಿ, ಗ್ರಾಹಕನಿಗೆ ಹೊಸ ಇ-20 (E20) ಇಂಧನ ಸ್ನೇಹಿ ಕಾರು ನೀಡಬೇಕು ಅಥವಾ ಸಂಪೂರ್ಣ ಹಣ ಮರಳಿಸಬೇಕು ಎಂದು ರಾಯ್‌ಪುರ ಗ್ರಾಹಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಇ-20 ಇಂಧನ ಬಳಕೆಯಿಂದ ಕಾರು ಕೆಟ್ಟುಹೋದ ಪ್ರಕರಣದಲ್ಲಿ ಗ್ರಾಹಕನಿಗೆ ಇಷ್ಟು ದೊಡ್ಡ ಮೊತ್ತದ ಪರಿಹಾರ ನೀಡಲು ಆದೇಶಿಸಿರುವುದು ದೇಶದಲ್ಲೇ ಇದೇ ಮೊದಲ ಪ್ರಕರಣ ಎನ್ನಲಾಗಿದೆ. ಆದರೆ, ಈ ಆದೇಶದಲ್ಲಿ ಹಲವು ಪ್ರಮುಖ ತಾಂತ್ರಿಕ ಸತ್ಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಮಾರುತಿ ಸುಜುಕಿ ಕಂಪನಿಯು, ಗ್ರಾಹಕ ನ್ಯಾಯಾಲಯದ ಈ ತೀರ್ಪನ್ನು ಮೇಲ್ಮನವಿ ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಗ್ರಾಹಕ ನ್ಯಾಯಾಲಯ ನೀಡಿದ ಮಹತ್ವದ ತೀರ್ಪು ಮತ್ತು ದಂಡದ ವಿವರ
Image Credit : our own

ಗ್ರಾಹಕ ನ್ಯಾಯಾಲಯ ನೀಡಿದ ಮಹತ್ವದ ತೀರ್ಪು ಮತ್ತು ದಂಡದ ವಿವರ

ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಪ್ರಕರಣದ ವಿಚಾರಣೆ ನಡೆಸಿ ಮಾರುತಿ ಸುಜುಕಿ ಕಂಪನಿಗೆ ಬಿಸಿ ಮುಟ್ಟಿಸಿದೆ. 45 ದಿನಗಳ ಒಳಗೆ ಗ್ರಾಹಕನಿಗೆ ಇ-20 ಇಂಧನಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಹೊಸ ಗ್ರಾಂಡ್ ವಿಟಾರಾ ಕಾರನ್ನು ಬದಲಾಯಿಸಿಕೊಡಬೇಕು ಎಂದು ಆದೇಶಿಸಿದೆ. ಒಂದು ವೇಳೆ ಕಾರು ಬದಲಾಯಿಸಿಕೊಡಲು ವಿಫಲವಾದರೆ, ಗ್ರಾಹಕ ಕಾರಿಗೆ ಪಾವತಿಸಿದ್ದ ನೋಂದಣಿ ಹಾಗೂ ವಿಮೆ ಸೇರಿದಂತೆ ಒಟ್ಟು ₹20.50 ಲಕ್ಷ ಹಣವನ್ನು ಸಂಪೂರ್ಣವಾಗಿ ಮರಳಿಸಬೇಕು ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ ಗ್ರಾಹಕ ಅನುಭವಿಸಿದ ಮಾನಸಿಕ ಕಿರುಕುಳಕ್ಕೆ ₹1 ಲಕ್ಷ ಮತ್ತು ಕಾನೂನು ಹೋರಾಟದ ವೆಚ್ಚವಾಗಿ ₹10,000 ಪರಿಹಾರ ನೀಡುವಂತೆಯೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Related Articles

Related image1
ಕೇವಲ 11 ಸಾವಿರ ರೂಗೆ ಬುಕ್ ಮಾಡಿ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್, ಹೊಸ ಕಾರು ಜುಲೈ 24ಕ್ಕೆ ಲಾಂಚ್
Related image2
ಹೊಸ ಕಾರು ಖರೀದಿಗೆ ಒಳ್ಳೆ ಸಮಯ; ಮಾರುತಿ ಸುಜುಕಿ ಕಾರುಗಳಿಗೆ ಜುಲೈ ತಿಂಗಳಲ್ಲಿ ₹90,000 ವರೆಗೆ ಡಿಸ್ಕೌಂಟ್!
36
ಏನಿದು ಇ-20 ಕಾರು ವಿವಾದ? ಹಿನ್ನೆಲೆ ಇಲ್ಲಿದೆ
Image Credit : google

ಏನಿದು ಇ-20 ಕಾರು ವಿವಾದ? ಹಿನ್ನೆಲೆ ಇಲ್ಲಿದೆ

ರಾಯ್‌ಪುರ ನಿವಾಸಿಯಾದ ವೈದ್ಯ ಡಾ. ಪ್ರೇಮರಾಜ್ ಡೇಬ್ಟಾ ಅವರು ಜೂನ್ 2024 ರಲ್ಲಿ ಮಾರುತಿ ಸುಜುಕಿಯ ಅಧಿಕೃತ ನೆಕ್ಸಾ ಡೀಲರ್‌ಶಿಪ್‌ನಿಂದ 'ಗ್ರಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಜೇಟಾ ಪ್ಲಸ್' ಕಾರನ್ನು ಖರೀದಿಸಿದ್ದರು. ಕಾರು ಡಿಸೆಂಬರ್ 2023 ರಲ್ಲಿ ತಯಾರಿಸಲ್ಪಟ್ಟಿದೆ ಎಂದು ಡೀಲರ್‌ಗಳು ಭರವಸೆ ನೀಡಿದ್ದರು. ಆದರೆ ಬಳಿಕ ಆರ್‌ಟಿಒ ಮತ್ತು ಗ್ರಾಹಕ ಆಯೋಗದ ದಾಖಲೆಗಳ ಮೂಲಕ ಈ ಕಾರು ಜನವರಿ 2023 ರಲ್ಲಿ ತಯಾರಾಗಿದ್ದ ಹಳೆಯ ಮಾಡೆಲ್ ಎನ್ನುವುದು ಬಯಲಿಗೆ ಬಂದಿತ್ತು. ಹೊಸ ಇ-20 ಇಂಧನ ನೀತಿ ಜಾರಿಗೆ ಬರುವ ಮುನ್ನ ತಯಾರಾದ ಈ ಕಾರು, ಶೇ.20 ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್‌ಗೆ ಪೂರಕವಾಗಿರಲಿಲ್ಲ ಎನ್ನಲಾಗಿದೆ.

46
ಪದೇ ಪದೇ ಕೈಕೊಟ್ಟ ಕಾರು; ಉಲ್ಬಣಿಸಿದ ತಾಂತ್ರಿಕ ಸಮಸ್ಯೆ
Image Credit : google

ಪದೇ ಪದೇ ಕೈಕೊಟ್ಟ ಕಾರು; ಉಲ್ಬಣಿಸಿದ ತಾಂತ್ರಿಕ ಸಮಸ್ಯೆ

ಕಾರು ಖರೀದಿಸಿದ ಕೆಲವೇ ತಿಂಗಳುಗಳಲ್ಲಿ (ನವೆಂಬರ್ 2024 ರಲ್ಲಿ) ಇಂಜಿನ್ ಮಾಲ್‌ಫಂಕ್ಷನ್ ಸೂಚನೆ ಡ್ಯಾಶ್‌ಬೋರ್ಡ್‌ನಲ್ಲಿ ಕಾಣಿಸಿಕೊಂಡು ಕಾರು ಹಾದಿ ಮಧ್ಯದಲ್ಲೇ ಆಫ್ ಆಗಲಾರಂಭಿಸಿತು. ಡೀಲರ್‌ಶಿಪ್‌ನವರು ಪೆಟ್ರೋಲ್‌ನಲ್ಲಿ ಕಲಬೆರಕೆ ಇರುವುದೇ ಇದಕ್ಕೆ ಕಾರಣ ಎಂದು ಹೇಳಿ ಇಡೀ ಟ್ಯಾಂಕ್ ಖಾಲಿ ಮಾಡಿ ಹೊಸ ಪೆಟ್ರೋಲ್ ತುಂಬಿಸಿಕೊಟ್ಟಿದ್ದರು. ಆದರೆ ಪೆಟ್ರೋಲ್ ಬಂಕ್ ಮಾಲೀಕರು ತಮ್ಮ ಇಂಧನದಲ್ಲಿ ಯಾವುದೇ ದೋಷವಿಲ್ಲ ಎಂದು ಲಿಖಿತವಾಗಿ ಸ್ಪಷ್ಟಪಡಿಸಿದ್ದರು. ಇದಾದ ಮೇಲೆಯೂ ಕಾರು ಪದೇ ಪದೇ ಕೆಟ್ಟುಹೋಗಿ ಸುಮಾರು ಒಂದು ತಿಂಗಳ ಕಾಲ ವರ್ಕ್‌ಶಾಪ್‌ನಲ್ಲೇ ಧೂಳು ಹಿಡಿಯುವಂತಾಯಿತು.

56
ವಾರಂಟಿ ನಿರಾಕರಣೆ ಮತ್ತು ₹5.30 ಲಕ್ಷ ಬೇಡಿಕೆ
Image Credit : google

ವಾರಂಟಿ ನಿರಾಕರಣೆ ಮತ್ತು ₹5.30 ಲಕ್ಷ ಬೇಡಿಕೆ

ಕಾರಿನ ಸಮಸ್ಯೆ ಮುಂದುವರಿದಾಗ ಡೀಲರ್‌ಗಳು ಗ್ರಾಹಕನಿಗೆ ಇಮೇಲ್ ಕಳುಹಿಸಿ, "ಕಲಬೆರಕೆ ಪೆಟ್ರೋಲ್ ಬಳಕೆಯಿಂದ ಇಂಜಿನ್ ಹಾಳಾಗಿದೆ. ಇದನ್ನು ವಾರಂಟಿ ಅಡಿಯಲ್ಲಿ ಉಚಿತವಾಗಿ ಸರಿಪಡಿಸಲು ಬರಲ್ಲ. ಇಂಜಿನ್ ಬದಲಾಯಿಸಲು ₹5.30 ಲಕ್ಷ ವೆಚ್ಚವಾಗುತ್ತದೆ, ಅದನ್ನು ಗ್ರಾಹಕರೇ ಭರಿಸಬೇಕು" ಎಂದು ತಿಳಿಸಿದ್ದರು. ಕಾರು ಕಂಪನಿಯ ಈ ಉದ್ಧಟತನದ ವರ್ತನೆಯಿಂದ ಬೇಸತ್ತ ವೈದ್ಯ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಕಂಪನಿಯ ವಾದಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಗ್ರಾಹಕರ ಪರವಾಗಿ ತೀರ್ಪು ಪ್ರಕಟಿಸಿತು.

66
ತೀರ್ಪನ್ನು ಬಲವಾಗಿ ವಿರೋಧಿಸಿದ ಮಾರುತಿ ಸುಜುಕಿ
Image Credit : google

ತೀರ್ಪನ್ನು ಬಲವಾಗಿ ವಿರೋಧಿಸಿದ ಮಾರುತಿ ಸುಜುಕಿ

ಈಗ ಈ ಆದೇಶವನ್ನು ದೇಶದ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಮಾರುತಿ ಸುಜುಕಿ ನಿರ್ಧರಿಸಿದೆ. ಗ್ರಾಹಕನಿಗೆ ನೀಡಲಾದ ಕಾರು ಸಂಪೂರ್ಣವಾಗಿ ಇ-20 ಹೊಂದಾಣಿಕೆ (E20 Compliant) ಹೊಂದಿತ್ತು ಮತ್ತು ಈ ಬಗ್ಗೆ ಕಾರಿನ ಯೂಸರ್ ಮ್ಯಾನ್ಯುವಲ್‌ನಲ್ಲೇ ವಿವರಣೆ ನೀಡಲಾಗಿತ್ತು ಎಂದು ಕಂಪನಿ ಸಮರ್ಥಿಸಿಕೊಂಡಿದೆ. ತಾಂತ್ರಿಕ ತಪಾಸಣೆಯ ವೇಳೆ ಇಂಧನದಲ್ಲಿ ಕಲಬೆರಕೆ ದ್ರವ ಇರುವುದು ಪತ್ತೆಯಾಗಿತ್ತು. ನ್ಯಾಯಾಲಯವು ಈ ಪ್ರಮುಖ ವೈಜ್ಞಾನಿಕ ಸಾಕ್ಷ್ಯಗಳನ್ನು ಮತ್ತು ಪ್ರಮುಖ ವಾಸ್ತವಾಂಶಗಳನ್ನು ಆದೇಶದಲ್ಲಿ ಪರಿಗಣಿಸಿಲ್ಲ ಎಂದು ಮಾರುತಿ ಸುಜುಕಿ ಆರೋಪಿಸಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಕಾರುಗಳು
ಆಟೋಮೊಬೈಲ್
ಸುದ್ದಿ
ವ್ಯವಹಾರ
ವ್ಯಾಪಾರ ಸುದ್ದಿ
ನ್ಯಾಯಾಲಯ

Latest Videos
Recommended Stories
Recommended image1
ಹ್ಯುಂಡೈ ಕ್ರೆಟಾ ಖರೀದಿ ಮಾಡೋ ಪ್ಲ್ಯಾನ್‌ ಇದ್ಯಾ? ಹಾಗಿದ್ರೆ ಸ್ವಲ್ಪ ಕಾಯಿರಿ!; ನೆಕ್ಸ್ಟ್ ಜನರೇಷನ್ ವೇರಿಯಂಟ್‌ನಲ್ಲಿದೆ ಭರ್ಜರಿ ಫೀಚರ್ಸ್‌
Recommended image2
526 ಕಿ.ಮೀ ಮೈಲೇಜ್, ಕೇವಲ 25 ಸಾವಿರ ರೂಗೆ ಬುಕ್ ಮಾಡಿ ಕಿಯಾ ಸೈರೋಸ್ ಎಲೆಕ್ಟ್ರಿಕ್ ಕಾರು
Recommended image3
ಕೇವಲ 11 ಸಾವಿರ ರೂಗೆ ಬುಕ್ ಮಾಡಿ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್, ಹೊಸ ಕಾರು ಜುಲೈ 24ಕ್ಕೆ ಲಾಂಚ್
Related Stories
Recommended image1
ಕೇವಲ 11 ಸಾವಿರ ರೂಗೆ ಬುಕ್ ಮಾಡಿ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್, ಹೊಸ ಕಾರು ಜುಲೈ 24ಕ್ಕೆ ಲಾಂಚ್
Recommended image2
ಹೊಸ ಕಾರು ಖರೀದಿಗೆ ಒಳ್ಳೆ ಸಮಯ; ಮಾರುತಿ ಸುಜುಕಿ ಕಾರುಗಳಿಗೆ ಜುಲೈ ತಿಂಗಳಲ್ಲಿ ₹90,000 ವರೆಗೆ ಡಿಸ್ಕೌಂಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved