MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • ಹೊಸ ಫೀಚರ್, ಅತ್ಯಾಕರ್ಷಕ ಮಹೀಂದ್ರ 3XO REVX ಕಾರು ಲಾಂಚ್, ಬೆಲೆ ಎಷ್ಟು?

ಹೊಸ ಫೀಚರ್, ಅತ್ಯಾಕರ್ಷಕ ಮಹೀಂದ್ರ 3XO REVX ಕಾರು ಲಾಂಚ್, ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಮಹೀಂದ್ರ ಹೊಸ 3XO REVX ಕಾರು ಬಿಡುಗಡೆ ಮಾಡಿದೆ. ಹೊಸ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆ ಅತ್ಯಾಕರ್ಷಕ ಕಾರಿನ ಬೆಲೆ ಎಷ್ಟು?

3 Min read
Author : Chethan Kumar
Published : Jul 26 2025, 06:18 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Mahindra

ಬೆಂಗಳೂರು (ಜು.26) ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಕಂಪನಿ ಭಾರತದ ಪ್ಯಾಸೆಂಜರ್ ಕಾರುಗಳಲ್ಲಿ ಭಾರಿ ಕ್ರಾಂತಿ ಮಾಡಿದೆ. ಎಸ್‌ಯುವಿ ವಿಭಾಗದಲ್ಲಿ ಮೋಡಿ ಮಾಡಿರುವ ಮಹೀಂದ್ರ ಇದೀಗ ತನ್ನ ಅತ್ಯುತ್ತಮ ಮಾರಾಟದ ಮಹೀಂದ್ರ 3XO ಕಾರಿನ ಹೊಸ ವೇರಿಯೆಂಟ್ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಮಹೀಂದ್ರ 3XO REVX ಕಾರು ಬಿಡುಗಡೆಯಾಗಿದೆ. ಅತ್ಯುತ್ತಮ ಫೀಚರ್,ಆಕರ್ಷಕ ವಿನ್ಯಾಸ ಮತ್ತು ಅಪೂರ್ವ ಕಾರ್ಯಕ್ಷಮತೆ ಹೊಂದಿರುವ ತನ್ನ ಹೊಸ ಆಕರ್ಷಕ ಎಕ್ಸ್‌ಯುವಿ 3ಎಕ್ಸ್ಓ ‘ರಿವ್ಎಕ್ಸ್’ ಕಾರಿನ ಆರಂಭಿಕ ಎಕ್ಸ್ ಶೋರೂಮ್ ಬೆಲೆ ₹8.94 ಲಕ್ಷ ರೂಪಾಯಿ.

26
Image Credit : Google

ಎಕ್ಸ್‌ಯುವಿ 3ಎಕ್ಸ್ಓ ಇತ್ತೀಚೆಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಾರಾಟವಾಗಿರುವ ಮೈಲಿಗಲ್ಲು ಸಾಧನೆ ಮಾಡಿದೆ. ಇದು ಅತಿ ವೇಗವಾಗಿ ಈ ಮೈಲಿಗಲ್ಲನ್ನು ತಲುಪಿದ ಮಹೀಂದ್ರಾದ ಎಸ್‌ಯುವಿ ಆಗಿದೆ. ರಿವ್ಎಕ್ಸ್ ಸರಣಿಯು ಪ್ರೀಮಿಯಂ ವೈಶಿಷ್ಟ್ಯಗಳು, ವಿಶಿಷ್ಟ ಸ್ಟೈಲ್ ಮತ್ತು ವಿಭಾಗದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ್ದು ಎಕ್ಸ್‌ಯುವಿ 3ಎಕ್ಸ್ಓ ಸರಣಿಯನ್ನು ಉನ್ನತೀಕರಿಸಿದೆ. ವಿಶೇಷವಾಗಿ ಗ್ರಾಹಕರ ಆಕಾಂಕ್ಷೆಗಳಿಗೆ ತಕ್ಕಂತೆ ಮೌಲ್ಯವನ್ನು ನೀಡುತ್ತದೆ.

36
Image Credit : Mahindra

ತಮ್ಮ ವೈಯಕ್ತಿಕ ಸ್ಟೈಲ್ ಅನ್ನು ಪ್ರತಿಬಿಂಬಿಸುವ ವಾಹನಗಳನ್ನು ಬಯಸುವ ವ್ಯಕ್ತಿಗಳಿಗೆ ಸೂಕ್ತವಾಗಿ ರೂಪುಗೊಂಡಿರುವ ರಿವ್ಎಕ್ಸ್ ಸರಣಿಯು ವೈಯಕ್ತಿಕ ಅಭಿವ್ಯಕ್ತಿಯನ್ನು ಸಂಭ್ರಮಿಸುತ್ತದೆ. ಏಕೆಂದರೆ ಇದು ವಿಭಿನ್ನವಾಗಿ ಕಾಣುವ ಆಕಾಂಕ್ಷೆ ಹೊಂದಿರುವವರಿಗೆ ಇಷ್ಟವಾಗುವ "ವಿಭಿನ್ನತೆಯನ್ನು ಹೊಂದಿದೆ. ರಿವ್ಎಕ್ಸ್ ಸರಣಿಯ ಎಲ್ಲಾ ಮೂರು ವೇರಿಯೆಂಟ್ ಗಳು ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿವೆ, ಆ ಬಣ್ಣಗಳು ಇವು: ಗ್ಯಾಲಕ್ಸಿ ಗ್ರೇ, ಟಾಂಗೋ ರೆಡ್, ನೆಬ್ಯುಲಾ ಬ್ಲೂ, ಎವರೆಸ್ಟ್ ವೈಟ್, ಮತ್ತು ಸ್ಟೆಲ್ತ್ ಬ್ಲ್ಯಾಕ್.

46
Image Credit : Mahindra

ರಿವ್ಎಕ್ಸ್ ಸರಣಿಯ ವಿಶೇಷತೆಗಳು:

• ರಿವ್ಎಕ್ಸ್ ಎಂ (ಎಕ್ಸ್-ಶೋರೂಮ್ ಬೆಲೆ: ₹8.94 ಲಕ್ಷ) – ಈ ವೇರಿಯೆಂಟ್ 1.2L ಎಂಸ್ಟಾಲ್ಲನ್ ಟಿಸಿಎಂಪಿಎಫ್ಐ ಎಂಜಿನ್‌ನಿಂದ ಚಾಲಿತವಾಗಿದ್ದು, 82 ಕೆಡಬ್ಲ್ಯೂ ಶಕ್ತಿ ಮತ್ತು 200 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಆಕರ್ಷಕ ಬಾಹ್ಯರೂಪವನ್ನು ಹೊಂದಿದ್ದು, ಕಾರಿನ ದೇಹದ ಬಣ್ಣದ ಗ್ರಿಲ್, ಪೂರ್ಣ-ಅಗಲದ ಎಲ್ಇಡಿ ಡಿ ಆರ್ ಎಲ್ ಗಳು, ಆರ್16 ಕಪ್ಪು ವೀಲ್ ಕವರ್‌ಗಳು ಮತ್ತು ಡ್ಯುಯಲ್-ಟೋನ್ ರೂಫ್‌ ಹೊಂದಿದೆ. ಈ ಮೂಲಕ ಗ್ರಾಕರಿಗೆ ಆತ್ಮವಿಶ್ವಾಸ ಮತ್ತು ವಿಶಿಷ್ಟ ಸ್ಟೈಲ್ ಅನ್ನು ಒದಗಿಸುತ್ತದೆ. ಒಳಾಂಗಣದಲ್ಲಿ ಆರಾಮದಾಯಕ ಕಪ್ಪು ಲೆದರೆಟ್ ಸೀಟ್ ಗಳು, 26.03 ಸೆಂ.ಮೀ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ನೊಂದಿಗೆ ಸ್ಟೀರಿಂಗ್- ಮೌಂಟೆಡ್ ಕಂಟ್ರೋಲ್‌ ಗಳನ್ನು ಹೊಂದಿದೆ. ಜೊತೆಗೆ ಆನಂದದಾಯಕ ಕ್ಯಾಬಿನ್ ಅನುಭವಕ್ಕಾಗಿ 4-ಸ್ಪೀಕರ್ ಆಡಿಯೊ ಸೆಟಪ್‌ ನೊಂದಿಗೆ ಬರುತ್ತದೆ. ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, 35 ಪ್ರಮಾಣಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ, ಇದರಲ್ಲಿ ಆರು ಏರ್‌ಬ್ಯಾಗ್‌ಗಳು, ಇ ಎಸ್ ಸಿ ಜೊತೆಗೆ ಹಿಲ್ ಹೋಲ್ಡ್ ಕಂಟ್ರೋಲ್ (ಎಚ್ ಎಚ್ ಸಿ), ಮತ್ತು 4 ಡಿಸ್ಕ್ ಬ್ರೇಕ್‌ಗಳು ಸೇರಿವೆ.

56
Image Credit : Google

• ರಿವ್ಎಕ್ಸ್ ಎಂ(ಓ) (ಎಕ್ಸ್-ಶೋರೂಮ್ ಬೆಲೆ: ₹9.44 ಲಕ್ಷ) – ಈ ವೇರಿಯೆಂಟ್ ಸಿಂಗಲ್-ಪೇನ್ ಸನ್‌ರೂಫ್‌ ನ ಸೇರ್ಪಡೆಯೊಂದಿಗೆ ಅತ್ಯುನ್ನತ ಕ್ಯಾಬಿನ್ ಅನುಭವ ಒದಗಿಸುತ್ತದೆ ಮತ್ತು ರಿವ್ಎಕ್ಸ್ ಎಂ ಗಿಂತ ಒಟ್ಟಾರೆಯಾಗಿ ಹೆಚ್ಚು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

• ರಿವ್ಎಕ್ಸ್ ಎ (ಎಕ್ಸ್-ಶೋರೂಮ್ ಬೆಲೆ: ₹11.79 ಲಕ್ಷದಿಂದ ಪ್ರಾರಂಭ) – ಈ ವೇರಿಯೆಂಟ್ ಸುಧಾರಿತ 1.2 ಲೀ ಎಂಸ್ಟಾಲ್ಲನ್ ಟಿಜಿಡಿಐ ಎಂಜಿನ್‌ನಿಂದ ಚಾಲಿತವಾಗಿದ್ದು, ವಿಭಾಗದಲ್ಲಿಯೇ ಅತ್ಯುತ್ತಮವಾದ 96 ಕೆಡಬ್ಲ್ಯೂ ಪವರ್ ಮತ್ತು 230 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಎರಡರಲ್ಲೂ ದೊರೆಯುತ್ತದೆ.

66
Image Credit : Google

ಪಾನೋರಮಿಕ್ ಸನ್‌ ರೂಫ್, ಲೆದರೆಟ್ ಆಸನಗಳು, ಡ್ಯುಯಲ್-ಟೋನ್ ಒಳಾಂಗಣ, ಆಟೋ-ಡಿಮ್ಮಿಂಗ್ ಐ ಆರ್ ವಿ ಎಂ ಇತ್ಯಾದಿಗಳನ್ನು ಒಳಗೊಂಡಂತೆ ಕ್ಯಾಬಿನ್ ಅನುಭವವನ್ನು ಉನ್ನತಗೊಳಿಸುವ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಹೊರಾಂಗಣದಲ್ಲಿ ಇದು ದೇಹದ ಬಣ್ಣದ ಗ್ರಿಲ್, ವಿಶಿಷ್ಟ ಬ್ಯಾಡ್ಜಿಂಗ್, ಆರ್ 16 ಪೇಂಟೆಡ್ ಕಪ್ಪು ಅಲಾಯ್‌ಗಳು, ಮತ್ತು ಡ್ಯುಯಲ್-ಟೋನ್ ರೂಫ್‌ನೊಂದಿಗೆ ರಿವ್ಎಕ್ಸ್ ವಿನ್ಯಾಸದ ಅಂಶಗಳನ್ನು ಹೊಂದಿದೆ. ರಿವ್ಎಕ್ಸ್ ಎಯು ಎರಡು ಎಚ್ ಡಿ ಸ್ಕ್ರೀನ್‌ಗಳನ್ನು ಹೊಂದಿದೆ: ಅದರಲ್ಲಿ ಒಂದು 26.03 ಸೆಂ.ಮೀ ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು 26.03 ಸೆಂ.ಮೀ ಪುಲ್ ಡಿಜಿಟಲ್ ಕ್ಲಸ್ಟರ್ ಆಗಿದೆ. ಇದರ ಜೊತೆಗೆ, ಇದು ಅಡ್ರೆನಾಕ್ಸ್ ಕನೆಕ್ಟ್ ಅನ್ನು ಹೊಂದಿದ್ದು, ಇದರಲ್ಲಿ ಬಿಲ್ಟ್-ಇನ್ ಅಲೆಕ್ಸಾ, ಆನ್‌ ಲೈನ್ ನ್ಯಾವಿಗೇಷನ್, ಮತ್ತು ವೈರ್‌ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕಾರ್ಯ ನಿರ್ವಹಿಸುತ್ತದೆ. ಆಧುನಿಕ ಚಾಲಕರಿಗೆ ಅತ್ಯುತ್ತಮ ಸಂಪರ್ಕ ವ್ಯವಸ್ಥೆ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಕಾರುಗಳು
ಆಟೋಮೊಬೈಲ್
Latest Videos
Recommended Stories
Recommended image1
ಜಸ್ಟ್‌ 2 ಲಕ್ಷ ರೂಪಾಯಿಯಲ್ಲಿ ಟಾಟಾ ಸಿಯೆರಾ ಕಾರ್‌ಅನ್ನು ಮನೆಗೆ ತನ್ನಿ, 10 ವೇರಿಯಂಟ್‌ಗಳ EMI ಡಿಟೇಲ್ಸ್‌
Recommended image2
ಲ್ಯಾಂಬೋರ್ಘಿನಿ ಲವ್: ಅಮ್ಮನ ಹಿಂದೆ ಕುಳಿತು ಫಾಲೋ ಮಾಡ್ಕೊಂಡ್ ಬಂದ ಬಾಲಕನ ಆಸೆ ಈಡೇರಿಸಿದ ಉದ್ಯಮಿ
Recommended image3
ಫಾರ್ಚುನರ್‌ಗೆ ನಡುಕ ಹುಟ್ಟಿಸಿದ ಎಂಜಿ ಮೆಜೆಸ್ಟರ್‌! ಕೇವಲ ₹41,000ಕ್ಕೆ ಬುಕ್ಕಿಂಗ್‌ ಆರಂಭ; ಏನಿದು '5-5-5' ಆಫರ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved