ಕೊಹ್ಲಿ ಅನುಷ್ಕಾ ದಂಪತಿ ಪೈಕಿ ಯಾರ ಬಳಿ ಇದೇ ಅತೀ ಹೆಚ್ಚು ದುಬಾರಿ ಕಾರು?
ವಿರಾಟ್ ಕೊಹ್ಲಿ ಕ್ರಿಕೆಟ್, ಎಂಡೋರ್ಸಮೆಂಟ್, ಜಾಹೀರಾತುಗಳ ಮೂಲಕ ಆದಾಯಗಳಿಸುತ್ತಿದ್ದರೆ, ಅನುಷ್ಕಾ ಶರ್ಮಾ, ಬಾಲಿವುಡ್ ನಟಿಯಾಗಿ ನಿರ್ಮಾಪಕಿಯಾಗಿಯೂ ಆದಾಯಗಳಿಸುತ್ತಿದ್ದಾರೆ. ಇವರಿಬ್ಬರಲ್ಲಿ ಯಾರಲ್ಲಿ ಹೆಚ್ಚು ಕಾರುಗಳಿವೆ? ಅತೀ ಹೆಚ್ಚು ದುಬಾರಿ ಕಾರು ಯಾರ ಬಳಿ ಇದೆ?
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕ್ಯೂಟ್ ಕಪಲ್ ಎಂದೇ ಗುರುತಿಸಿಕೊಂಡಿದ್ದಾರೆ. ಪುತ್ರಿ ವಮಿಕಾ ಆಗಮನ ಬಳಿಕ ಅನುಷ್ಕಾ ಶರ್ಮಾ ಸಿನಿಮಾದಿಂದ ಕೊಂಚ ದೂರ ಉಳಿದಿದ್ದಾರೆ.
ಐಸಿಸಿ ವಿಶ್ವಕಪ್ ಫೈನಲ್ ಸೋಲಿನ ಬಳಿಕ ವಿರಾಟ್ ಕೊಹ್ಲಿ ಕ್ರಿಕೆಟ್ನಿಂದ ವಿಶ್ರಾಂತಿ ಪಡೆದಿದ್ದಾರೆ. ಇಬ್ಬರು ಪುತ್ರಿ ಜೊತೆ ಕಾಲಕಳೆಯುತ್ತಾ ವಿಶ್ರಾಂತಿಗೆ ಜಾರಿದ್ದಾರೆ.
ಅನುಷ್ಕಾ ಹಾಗೂ ಕೊಹ್ಲಿ ಇಬ್ಬರ ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಇಬ್ಬರಲ್ಲೂ ಹಲವು ದುಬಾರಿ ಕಾರುಗಳಿವೆ. ಆಡಿ ಸೀರಿಸ್ ಕಾರುಗಳು ಕೊಹ್ಲಿ ಬಳಿ ಇದ್ದರೆ, ರೇಂಜ್ ರೋವರ್ ಸೇರಿದಂತೆ ಹಲವು ಕಾರುಗಳು ಅನುಷ್ಕಾ ಬಳಿ ಇದೆ.
ಕೊಹ್ಲಿ ಬಳಿ 3.94 ಕೋಟಿ ರೂಪಾಯಿ ಬೆಲೆಯ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಬಳಿ ಇರುವ ಕಾರುಗಳ ಪೈಕಿ ಇದು ದುಬಾರಿ ಕಾರು.
ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಬ್ಬರೂ ರೇಂಜ್ ರೋವರ್ ವೊಗ್ ಕಾರು ಹೊಂದಿದ್ದಾರೆ. ಕೊಹ್ಲಿ 1818 ನಂಬರ್ ಪಡೆದುಕೊಂಡಿದ್ದರೆ, ಅನುಷ್ಕಾ ಶರ್ಮಾ 7272 ನಂಬರ್ ಪ್ಲೇಟ್ ಪಡೆದುಕೊಂಡಿದ್ದಾರೆ.
ಆಡಿ ಕ್ಯೂ7, ಆಡಿ ಎ8, ಆಡಿ R8 LMX, ಆಡಿ, ಆಡಿ R8 V10 Plus, ಆಡಿ S6 ಸೇರಿದಂತೆ ಆಡಿ ಸೀರಿಸ್ ಕಾರುಗಳು ಕೊಹ್ಲಿ ಬಳಿ ಇದೆ. ವಿರಾಟ್ ಕೊಹ್ಲಿ ಆಡಿ ಕಂಪನಿಯ ಭಾರತದ ರಾಯಭಾರಿಯಾಗಿದ್ದಾರೆ.
2012ರಲ್ಲಿ ಶ್ರೀಲಂಕಾ ವಿರುದ್ದ ಸರಣಿ ಶ್ರೇಷ್ಠ ಪ್ರದರ್ಶನ ನೀಡಿ ಸಿಕ್ಕಿದ ರೆನಾಲ್ಟ್ ಡಸ್ಟರ್, ಟೋಯೋಟಾ ಜೊತೆಗಿನ ಎಂಡೋರ್ಸ್ಮೆಂಟ್ನಿಂದ ಸಿಕ್ಕಿದ ಟೋಯೋಟಾ ಫಾರ್ಚುನರ್ ಕಾರು ಕೊಹ್ಲಿ ಬಳಿ ಇದೆ.
ಅನುಷ್ಕಾ ಬಳಿ BMW 7 , ರೇಂಜ್ ರೋವರ್ ಆಟೋಬಯೋಗ್ರಫಿ ಸೇರಿದಂತೆ ಇತರ ಕೆಲ ದುಬಾರಿ ಕಾರುಗಳಿವೆ. ಅನುಷ್ಕಾ ಒಟ್ಟು ಆಸ್ತಿ 255 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ.