ಹೊಸ ಮಹೀಂದ್ರಾ ಬೊಲೆರೋ, ಕೈಗೆಟುಕುವ ಬೆಲೆಯಲ್ಲಿ 26 ಕಿ.ಮಿ ಮೈಲೇಜ್!
ಮಹೀಂದ್ರ ಕಾರುಗಳಿಗೆ ಭಾರತ ಮಾತ್ರವಲ್ಲ ಹಲವು ದೇಶಗಳಲ್ಲಿ ಭಾರಿ ಬೇಡಿಕೆ. ಇತ್ತೀಚೆಗೆ ಬಿಡುಗಡೆಯಾಗಿರುವ ಹೊಚ್ಚ ಹೊಸ ಮಹೀಂದ್ರ ಬೊಲೆರೋ ಕಾರು ಬೆಲೆಯೂ ಕಡಿಮೆ ಜೊತೆಗೆ 26 ಕಿ.ಮಿ ಮೈಲೇಜ್ ನೀಡುತ್ತಿದೆ. ಅಪ್‌ಗ್ರೇಡ್ ಮಾದರಿಯ ಈ ಬೊಲೆರೋ ಹೇಗಿದೆ?
ಹೊಸ ಮಹೀಂದ್ರಾ ಬೊಲೆರೊ ಕಾರು
ಮಾರುಕಟ್ಟೆಯಲ್ಲಿ ಹಳೆಯ ಕಾರುಗಳಿಗೆ ಹೇಗೆ ನಿರ್ದಿಷ್ಟ ಗ್ರಾಹಕರಿದ್ದಾರೋ, ಹಾಗೆಯೇ ಹೊಸ ಕಾರುಗಳಿಗೂ ಬೇಡಿಕೆ ಇದ್ದೇ ಇರುತ್ತದೆ. ಹೊಸ ಕಾರುಗಳಿಗಾಗಿ ಕಾಯುತ್ತಿರುವ ಕಾರು ಪ್ರಿಯರ ಬೇಡಿಕೆಯನ್ನು ಪೂರೈಸುವಂತೆ ಮಹೀಂದ್ರಾ ಕಂಪನಿ ತನ್ನ ಹಳೆಯ ಬ್ರ್ಯಾಂಡ್ ಬೊಲೆರೊ ಕಾರನ್ನು ಮರುವಿನ್ಯಾಸಗೊಳಿಸಿ ಮಹೀಂದ್ರ ಬೊಲೆರೋ ಅಪ್‌ಗ್ರೇಡ್ ಆವೃತ್ತಿಯಾಗಿ ರೂಪಿಸಿದೆ. ಇದರಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ಹೆಚ್ಚಿನ ಕಾರ್ಯಕ್ಷಮತೆಯ ಎಂಜಿನ್ ಅಳವಡಿಸಲಾಗಿದೆ.
ಮಹೀಂದ್ರ ಬೊಲೆರೋ
ಮಹೀಂದ್ರ ಬೊಲೆರೋ ಎಂದ ತಕ್ಷಣ ಮನಸ್ಸಿನಲ್ಲಿ ಮೂಡುವ ಕಾರು ಇದು. ಆದರೆ ಈ ಬೊಲೆರೋ ಹಲವು ಬದಲಾವಣೆ ಅಪ್‌ಗ್ರೇಡ್ ಮೂಲಕ ಬಿಡುಗಡೆಯಾಗಿದೆ. ಇದೀಗ ಬಿಡುಗಡೆಯಾಗಿರುವ ಬೊಲೆರೋ ಅತ್ಯಂತ ಆಕರ್ಷಕ ವಿನ್ಯಾಸ ಹಾಗೂ ಅತ್ಯುತ್ತಮ ಎಂಜಿನ್ ಹೊಂದಿದೆ. ಮಹೀಂದ್ರಾ ಕಂಪನಿ ತನ್ನ ಆಫ್-ರೋಡಿಂಗ್ ಸಾಮರ್ಥ್ಯವನ್ನು ಹೆಚ್ಚಿಸುವ 1.5 ಲೀಟರ್ ಎಂಜಿನ್‌ನೊಂದಿಗೆ ಬರುವ ಹೊಸ ಮಹೀಂದ್ರಾ ಬೊಲೆರೋ ಕಾರನ್ನು ಪರಿಚಯಿಸಿದೆ. ಈ ಶಕ್ತಿಶಾಲಿ ಎಂಜಿನ್ 98.56 bhp ಪವರ್ ಮತ್ತು 260 Nm ಟಾರ್ಕ್ ಉತ್ಪಾದಿಸುತ್ತದೆ. ಇದರ ಮೈಲೇಜ್ ಪ್ರತಿ ಲೀಟರಿಗೆ ಗರಿಷ್ಠ 26 ಕಿ.ಮೀ. ತಲುಪುತ್ತದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ಹೊಸ ಮಹೀಂದ್ರಾ ಬೊಲೆರೊ ಕಾರು
ಹೊಸ ಮಹೀಂದ್ರಾ ಬೊಲೆರೊದ ಪ್ರೀಮಿಯಂ ವೈಶಿಷ್ಟ್ಯಗಳು
ಮಹೀಂದ್ರಾ ಕಂಪನಿಯ ಹೊಸ ಮಹೀಂದ್ರಾ ಬೊಲೆರೊ ಕಾರು ಐಷಾರಾಮಿ ಒಳಾಂಗಣ ಮತ್ತು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (N10 [O] ಮಾದರಿಗೆ ಮಾತ್ರ ಲಭ್ಯ), ಕ್ರೂಸ್ ಕಂಟ್ರೋಲ್, ಅಡ್ಜಸ್ಟೇಬಲ್ ಚಾಲಕ ಸೀಟು ಮತ್ತು ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಮಹೀಂದ್ರಾ ಕಂಪನಿ ತನ್ನ ಹೊಸ ಮಹೀಂದ್ರಾ ಬೊಲೆರೊದಲ್ಲಿ ಎರಡು ಫ್ರಂಟ್ ಏರ್‌ಬ್ಯಾಗ್‌ಗಳು, ರಿವರ್ಸ್ ಅಸಿಸ್ಟ್‌ನೊಂದಿಗೆ ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು ISOFIX ಚೈಲ್ಡ್ ಮೌಂಟ್‌ನಂತಹ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸಿದೆ.
ಹೊಸ ಮಹೀಂದ್ರಾ ಬೊಲೆರೊ ಕಾರು
ಹೊಸ ಮಹೀಂದ್ರಾ ಬೊಲೆರೊ ಬೆಲೆ
ಹೊಸ ಮಹೀಂದ್ರಾ ಬೊಲೆರೊದ ಬೆಲೆ ₹9.95 ಲಕ್ಷದಿಂದ ಆರಂಭವಾಗುತ್ತದೆ ಮತ್ತು ಅದರ ದುಬಾರಿ ಆವೃತ್ತಿ ₹13 ಲಕ್ಷದ ವ್ಯಾಪ್ತಿಯಲ್ಲಿದೆ. 2024 ರಲ್ಲಿ ಇದರ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಇತ್ತೀಚಿನ ವರದಿಗಳು ಹೊಸ ಮಹೀಂದ್ರಾ ಬೊಲೆರೊ ಮಾರಾಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದು ತಿಳಿಸಿವೆ.