ಇನ್ಮೇಲೆ ಫಾರ್ಚುನರ್ ಕಾರು ಖರೀದಿ ಸುಲಭ, ಕೇವಲ 50 ಸಾವಿರ ರೂ ಡೌನ್‌ಪೇಮೆಂಟ್
ಟೊಯೋಟಾ ಫಾರ್ಚೂನರ್ ಕಾರನ್ನ ಕೇವಲ 50,000 ರೂಪಾಯಿ ಡೌನ್ ಪೇಮೆಂಟ್ ಕೊಟ್ಟು ಮನೆಗೆ ತಗೊಂಡು ಹೋಗಬಹುದು. ಐಷಾರಾಮಿ ಫೀಚರ್ಸ್ ಮತ್ತು ಪವರ್‌ಫುಲ್ ಎಂಜಿನ್‌ಗೆ ಹೆಸರುವಾಸಿಯಾದ ಫಾರ್ಚೂನರ್ ಖರೀದಿ ಸುಲಭಗೊಳಿಸಲಾಗಿದೆ.

ಟೊಯೋಟಾ ಫಾರ್ಚೂನರ್ ಯಾರಿಗೆ ತಾನೇ ಇಷ್ಟ ಆಗಲ್ಲ? ಬಹಳಷ್ಟು ಜನ ಈ ಕಾರು ಖರೀದಿಸಲು ಹಾತೊರೆಯುುತ್ತಾರೆ. ಈಗ ಆ ಕನಸು ನನಸಾಗುವ ಸಮಯ ಬಂದಿದೆ. ಇದೀಗ ಕೇವಲ 50,000 ರೂಪಾಯಿ ಡೌನ್ ಪೇಮೆಂಟ್ ಮಾಡಿದರೆ ಫಾರ್ಚುನರ್ ಮನೆ ಬಾಗಿಲಿಗೆ ಬರಲಿದೆ. ಐಷಾರಾಮಿ ಫೀಚರ್ಸ್ ಮತ್ತು ಪವರ್‌ಫುಲ್ ಎಂಜಿನ್‌ಗೆ ಹೆಸರುವಾಸಿಯಾದ ಫಾರ್ಚೂನರ್, ಪೆಟ್ರೋಲ್ ಮತ್ತು ಡೀಸೆಲ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದು 2694 cc, DOHC, ಡ್ಯುಯಲ್ VVT-i ಎಂಜಿನ್ ಹೊಂದಿದೆ. ಇದು 166 PS ಪವರ್ ಮತ್ತು 245 Nm ಟಾರ್ಕ್ ಉತ್ಪಾದಿಸುತ್ತದೆ. 7 ಜನ ಕೂರಬಹುದಾದ ವಿಶಾಲವಾದ ಸ್ಪೇಸ್ ಇದೆ.
ಟೊಯೋಟಾ ಫಾರ್ಚೂನರ್
50,000 ಡೌನ್ ಪೇಮೆಂಟ್. ಈ SUV ಕೊಳ್ಳಬೇಕು ಅಂತ ಕನಸು ಕಾಣ್ತಿರೋರಿಗೆ ಮತ್ತು ದುಬಾರಿ ಬೆಲೆ ಬಗ್ಗೆ ಚಿಂತೆ ಮಾಡ್ತಿರೋರಿಗೆ, ಒಂದು ಒಳ್ಳೆ ಫೈನಾನ್ಸ್ ಪ್ಲಾನ್ ಇದೆ. ಟೊಯೋಟಾ ಫಾರ್ಚೂನರ್ ಆನ್-ರೋಡ್ ಬೆಲೆ ಸುಮಾರು 39.32 ಲಕ್ಷ ರೂಪಾಯಿ. ಕೇವಲ 50,000 ರೂಪಾಯಿ ಡೌನ್ ಪೇಮೆಂಟ್ ಕೊಟ್ಟರೆ, ಉಳಿದ 38.82 ಲಕ್ಷಕ್ಕೆ ಲೋನ್ ಸಿಗುತ್ತೆ. ಮಧ್ಯಮ ವರ್ಗದವರು ಹೆಚ್ಚು ದುಡ್ಡು ಖರ್ಚು ಮಾಡದೆ ಈ ಐಷಾರಾಮಿ SUV ಕೊಳ್ಳಬಹುದು.
ಫಾರ್ಚೂನರ್ EMI ಪ್ಲಾನ್‌ಗಳು
10 ವರ್ಷಗಳ EMI ಪ್ಲಾನ್. ನೀವು 10 ವರ್ಷಗಳ (120 ತಿಂಗಳು) ಲೋನ್ ತೆಗೆದುಕೊಂಡರೆ, ನಿಮ್ಮ EMI 47,000 ದಿಂದ 49,000 ರೂಪಾಯಿ ಇರುತ್ತೆ. ಬಡ್ಡಿ ದರ 9% ದಿಂದ 10% ಇರುತ್ತೆ. ಈ ದೀರ್ಘಾವಧಿ EMI ಪ್ಲಾನ್ ನಿಮಗೆ ಬಜೆಟ್ ಮ್ಯಾನೇಜ್ ಮಾಡಲು ಮತ್ತು ಫಾರ್ಚೂನರ್ ಓಡಿಸುವ ಐಷಾರಾಮಿ ಅನುಭವಿಸಲು ಸಹಾಯ ಮಾಡುತ್ತದೆ. ನಿಖರವಾದ EMI ವಿವರಗಳಿಗಾಗಿ ಬ್ಯಾಂಕ್‌ಗಳಲ್ಲಿ ವಿಚಾರಿಸಿ.
ಫಾರ್ಚೂನರ್ EMI
ಹೆಚ್ಚಿನ EMI ಲೋನ್ ಆಯ್ಕೆ. ಬೇಗ ಲೋನ್ ತೀರಿಸಬೇಕು ಅಂತ ಅಂದುಕೊಳ್ಳುವವರಿಗೆ 7 ವರ್ಷಗಳ (84 ತಿಂಗಳು) ಲೋನ್ ಸಿಗುತ್ತೆ. ಈ ಆಯ್ಕೆಯಲ್ಲಿ EMI ಸುಮಾರು 62,458 ರೂಪಾಯಿ ಇರುತ್ತೆ. ಹೆಚ್ಚು ಸಂಬಳ ಇರುವವರಿಗೆ ಈ ಆಯ್ಕೆ ಸೂಕ್ತ.
ಟೊಯೋಟಾ ಕಾರ್ ಫೀಚರ್ಸ್
ಪ್ರೀಮಿಯಂ ಫೀಚರ್ಸ್ ಮತ್ತು ಸುರಕ್ಷತೆ. ಫಾರ್ಚೂನರ್ ಕೇವಲ ಸ್ಟೈಲ್ ಬಗ್ಗೆ ಅಲ್ಲ. ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪವರ್ ORVM, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ಇನ್ನೂ ಹಲವು ಫೀಚರ್ಸ್ ಇದರಲ್ಲಿದೆ. ವಿವಿಧ ಬಣ್ಣಗಳಲ್ಲಿ ಲಭ್ಯ. ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ.