- Home
- Business
- ಶುಕ್ರವಾರ ಸಾರ್ವಕಾಲಿಕ ದಾಖಲೆ ಕಂಡಿದ್ದ ಚಿನ್ನದ ಬೆಲೆ ಇಂದು ಎಷ್ಟಿದೆ? ಖರೀದಿಗೆ ಹೋಗೋ ಮುನ್ನ ದರ ಚೆಕ್ ಮಾಡ್ಕೊಳ್ಳಿ
ಶುಕ್ರವಾರ ಸಾರ್ವಕಾಲಿಕ ದಾಖಲೆ ಕಂಡಿದ್ದ ಚಿನ್ನದ ಬೆಲೆ ಇಂದು ಎಷ್ಟಿದೆ? ಖರೀದಿಗೆ ಹೋಗೋ ಮುನ್ನ ದರ ಚೆಕ್ ಮಾಡ್ಕೊಳ್ಳಿ
Gold And Silver Price: ಚಿನ್ನದ ಬೆಲೆ ಗಗನಕ್ಕೇರಿದ್ದು, ಶುಕ್ರವಾರ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ದಾಖಲೆ ಬರೆದಿತ್ತು. ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ವಿವರ ಇಲ್ಲಿದೆ.

ಚಿನ್ನದ ಬೆಲೆ ಏರಿಕೆ ಪರ್ವ ಮುಂದುವರೆದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಒಂದೇ ದಿನ 6250 ರು. ಏರಿಕೆಯಾಗಿ, 96,450 ರು.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆ ಬರೆದಿತ್ತು. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೆಹಲಿಯಲ್ಲಿ ಶುಕ್ರವಾರ 99.9 ಶುದ್ಧತೆಯ ಚಿನ್ನ, 10 ಗ್ರಾಂಗೆ 6250 ಏರಿಕೆಯೊಂದಿಗೆ 96,450 ರು.ಗೆ ತಲುಪಿದೆ. ಗುರುವಾರ s 90,200 ರು. ಇತ್ತು. ಇನ್ನು ಬೆಳ್ಳಿ ಬೆಲೆಯೂ ಏರಿಕೆ ಕಂಡಿದ್ದು, ಪ್ರತಿ ಕೇಜಿಗೆ 2300 ರು.ಗಳಷ್ಟು ಏರಿಕೆಯಾಗಿದ್ದು, 95,500 ರು.ಗೆ ತಲುಪಿತ್ತು. ಇಂದು ಚಿನ್ನದ ಜೊತೆಯಲ್ಲಿ ಬೆಳ್ಳಿದ ದರದ ಮಾಹಿತಿ ಈ ಲೇಖನದಲ್ಲಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,746 ರೂಪಾಯಿ
8 ಗ್ರಾಂ: 69,968 ರೂಪಾಯಿ
10 ಗ್ರಾಂ: 87,460 ರೂಪಾಯಿ
100 ಗ್ರಾಂ: 8,74,600 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,541 ರೂಪಾಯಿ
8 ಗ್ರಾಂ: 76,328 ರೂಪಾಯಿ
10 ಗ್ರಾಂ: 95,410 ರೂಪಾಯಿ
100 ಗ್ರಾಂ: 9,54,100 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 87,460 ರೂಪಾಯಿ, ಮುಂಬೈ: 87,460 ರೂಪಾಯಿ, ದೆಹಲಿ: 87,610 ರೂಪಾಯಿ, ಕೋಲ್ಕತ್ತಾ: 87,460 ರೂಪಾಯಿ, ಬೆಂಗಳೂರು: 87,460 ರೂಪಾಯಿ, ಹೈದರಾಬಾದ್: 87,460 ರೂಪಾಯಿ, ಪುಣೆ: 87,460 ರೂಪಾಯಿ, ಕೇರಳ: 87,460 ರೂಪಾಯಿ, ಅಹಮದಾಬಾದ್: 87,460 ರೂಪಾಯಿ, ವಡೋದರಾ: 87,460 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 972 ರೂಪಾಯಿ
100 ಗ್ರಾಂ: 9,720 ರೂಪಾಯಿ
1000 ಗ್ರಾಂ: 97,200 ರೂಪಾಯಿ
ಬೆಲೆ ಏರಿಕೆಗೆ ಕಾರಣ ಏನು?
ಸ್ಥಳೀಯ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಚಿನ್ನಕ್ಕೆ ಭಾರೀ ಬೇಡಿಕೆ ಸೃಷ್ಟಿಯಾದ ಕಾರಣದ ದರದಲ್ಲಿ ಏರಿಕೆಯಾಗಿದೆ. ಇದರ ಜೊತೆಗೆ ಅಮೆರಿಕ ಮತ್ತು ಚೀನಾದ ನಡುವಿನ ಸುಂಕ ಸಮರದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.