ಸಂಬಳ ಆಗಿದೆಯಾ? ಇಂದೇ ಬರಮಾಡಿಕೊಳ್ಳಿ ಚಿನ್ನ, ಇಳಿಕೆಯಾಗಿದೆ ಬಂಗಾರದ ಬೆಲೆ
Gold And Silver Rate Today: ಚಿನ್ನ ಇಂದು ಕೇವಲ ಆಭರಣವಾಗಿ ಉಳಿದಿಲ್ಲ. ತಮ್ಮಲ್ಲಿರುವ ಹಣವನ್ನು ಚಿನ್ನದ ರೂಪದಲ್ಲಿ ಹೂಡಿಕೆ ಮಾಡಲಾಗುತ್ತದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಪ್ರತಿದಿನ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಆಗುತ್ತಿರುತ್ತದೆ. ಭಾನುವಾರ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಇಂದು ದೇಶದಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದೆ. ಎಷ್ಟು ಬೆಲೆ ಕಡಿಮೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.
ಆಭರಣದ ಬದಲು ಚಿನ್ನದ ಬಿಸ್ಕೆಟ್, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದು ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ. ಇದನ್ನು ನೀವು ಆ ದಿನದ ಚಿನ್ನದ ದರ ಹೇಗಿದೆ ಎಂಬುದರ ಮೇಲೆ ಬಹು ವರ್ಷಗಳ ನಂತರವೂ ಉತ್ತಮ ದರವನ್ನು ಪಡೆಯಬಹುದು.
02 ಡಿಸೆಂಬರ್ 2024
ಇಂದಿನ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,149 ರೂಪಾಯಿ
8 ಗ್ರಾಂ: 57,192 ರೂಪಾಯಿ
10 ಗ್ರಾಂ: 71,490 ರೂಪಾಯಿ
100 ಗ್ರಾಂ: 7,14,900 ರೂಪಾಯಿ
02 ಡಿಸೆಂಬರ್ 2024
ಇಂದಿನ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,799 ರೂಪಾಯಿ
8 ಗ್ರಾಂ: 62,392 ರೂಪಾಯಿ
10 ಗ್ರಾಂ: 77,990 ರೂಪಾಯಿ
100 ಗ್ರಾಂ: 7,79,900 ರೂಪಾಯಿ
gold rate
ದೇಶದ ಪ್ರಮುಳ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 71,490 ರೂ., ಮುಂಬೈ: 71,490 ರೂ., ದೆಹಲಿ: 71,640 ರೂ., ಕೋಲ್ಕತ್ತಾ: 71,490 ರೂ., ಬೆಂಗಳೂರು: 71,490 ರೂ., ಹೈದರಾಬಾದ್: 71,490 ರೂಪಾಯಿ ಆಗಿದೆ.
ಇಂದಿನ ಬೆಳ್ಳಿ ಬೆಲೆ
ಚಿನ್ನದ ಜೊತೆಯಲ್ಲಿ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಚಿನ್ನದ ಜೊತೆ ಬೆಳ್ಳಿ ಮೇಲಿನ ಹೂಡಿಕೆಯೂ ಸಹ ಅಧಿಕವಾಗಿದೆ. ಬೆಳ್ಳಿ ದರ ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 914 ರೂಪಾಯಿ
100 ಗ್ರಾಂ : 9,140 ರೂಪಾಯಿ
1 ಕೆಜಿ : 91,400 ರೂಪಾಯಿ