ವೀಕೆಂಡ್ ಶಾಪಿಂಗ್ ಪ್ಲಾನ್ ಇದ್ರೆ ಚಿನ್ನವನ್ನೇ ಖರೀದಿಸಿ; ಇಲ್ಲಿದೆ ನೋಡಿ ಇಂದಿನ ದರ
ವಾರಾಂತ್ಯದಲ್ಲಿ ಶಾಪಿಂಗ್ ಬದಲು ಚಿನ್ನದಲ್ಲಿ ಹೂಡಿಕೆ ಮಾಡುವುದು ಉತ್ತಮ. ಚಿನ್ನ ಕೇವಲ ಆಭರಣವಲ್ಲ, ಭವಿಷ್ಯದ ಹೂಡಿಕೆಯೂ ಹೌದು. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳನ್ನು ತಿಳಿಯಿರಿ.

ವೀಕೆಂಡ್ ಬಂದ್ರೆ ಸಾಕು ಶಾಪಿಂಗ್ ಮಾಡಬೇಕು ಅಂತ ಯೋಚನೆ ಮಾಡುತ್ತಾರೆ. ಬ್ರಾಂಡೆಡ್ ಬಟ್ಟೆ, ಶೂ ಸೇರಿದಂತೆ ಕೆಲವು ವಸ್ತುಗಳನ್ನು ಖರೀದಿಸಿದ್ರೆ 5 ರಿಂದ 6 ಸಾವಿರ ರೂಪಾಯಿ ಖರ್ಚಾಗುತ್ತದೆ. ಇದೇ ಹಣದಲ್ಲಿ ಚಿನ್ನವನ್ನ ಖರೀದಿಸಬಹುದು. ಭವಿಷ್ಯದಲ್ಲಿ ಚಿನ್ನ ಮಾರಾಟ ಮಾಡಿದ್ರೆ ಖರೀದಿ ಮಾಡಿದಕ್ಕಿಂತ ಹೆಚ್ಚಿನ ಹಣ ದೊರೆಯುತ್ತದೆ.

ಚಿನ್ನವನ್ನು ಆಪತ್ಕಾಲದ ನೆಂಟ ಎಂದು ಕರೆಯುತ್ತಾರೆ. ಹಣಕಾಸಿನ ಸಮಸ್ಯೆಗಳುಂಟಾದಾಗ ಚಿನ್ನ ನಿಮ್ಮ ನೆರವಿಗೆ ಬರುತ್ತದೆ. ಹಾಗಾಗಿ ಇಂದು ಚಿನ್ನ ಕೇವಲ ಆಭರಣವಾಗಿ ಉಳಿಯದೇ ಹೂಡಿಕೆಯಾಗಿ ಬದಲಾಗಿದೆ. ಅದೇ ರೀತಿ ಬೆಳ್ಳಿ ಮೇಲಿನ ಹೂಡಿಕೆಯೂ ಸಹ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,555 ರೂಪಾಯಿ
8 ಗ್ರಾಂ: 60,440 ರೂಪಾಯಿ
10 ಗ್ರಾಂ: 75,550 ರೂಪಾಯಿ
100 ಗ್ರಾಂ: 7,55,500 ರೂಪಾಯಿ
ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,242 ರೂಪಾಯಿ
8 ಗ್ರಾಂ: 65,936 ರೂಪಾಯಿ
10 ಗ್ರಾಂ: 82,420 ರೂಪಾಯಿ
100 ಗ್ರಾಂ: 8,24,200 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 75,550 ರೂಪಾಯಿ, ಮುಂಬೈ: 75,550 ರೂಪಾಯಿ, ದೆಹಲಿ: 75,700 ರೂಪಾಯಿ, ಕೋಲ್ಕತ್ತಾ: 75,550 ರೂಪಾಯಿ, ಬೆಂಗಳೂರು: 75,550 ರೂಪಾಯಿ, ಹೈದರಾಬಾದ್: 75,550 ರೂಪಾಯಿ, ಪುಣೆ: 75,550 ರೂಪಾಯಿ
ಬೆಳ್ಳಿ ದರ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
10 ಗ್ರಾಂ: 975 ರೂಪಾಯಿ
100 ಗ್ರಾಂ: 9,750 ರೂಪಾಯಿ
1000 ಗ್ರಾಂ: 97,500 ರೂಪಾಯಿ