ಒಂದಲ್ಲ, ಎರಡಲ್ಲ ಬರೋಬ್ಬರಿ 10 ಸಾವಿರ ಇಳಿಕೆ.... ಚಿನ್ನದಂಗಡಿಗೆ ಜನರ ದಾಂಗುಡಿ
ಭಾರತ-ಪಾಕಿಸ್ತಾನ ಯುದ್ಧದ ನಡುವೆ ಪಾಕಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ನಿನ್ನೆ ಏರಿಕೆ ಕಂಡ ಚಿನ್ನದ ದರ ಇಂದು ತುಸು ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

ಭಾರತ ಪಾಕಿಸ್ತಾನ ನಡುವಣ ಯುದ್ಧ ಮತಷ್ಟು ತೀವ್ರ ಸ್ವರೂಪ ಪಡೆದಿದ್ದು, ಪಾಕಿಸ್ತಾನದ ಮಾರುಕಟ್ಟೆ ಪಾತಾಳಕ್ಕೆ ಕುಸಿದಿದೆ. ಜೊತೆ ಪಾಕಿಸ್ತಾನ ಯುದ್ಧದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಕುಸಿದಿದೆ. ಈ ನಡುವೆ ಭಾರತದಲ್ಲಿ ನಿನ್ನೆ ಗಗನಕ್ಕೇರಿದ ಚಿನ್ನದ ದರದಲ್ಲಿ ಇಂದು ತುಸು ಇಳಿಕೆ ಆಗಿದೆ. ಇಂದಿನ ಬೆಳ್ಳಿ ಬಂಗಾರದ ದರ ಇಲ್ಲಿದೆ.
ನಿರಂತರವಾಗಿ ಚಿನ್ನದ ದರ ಏರಿಕೆಯ ಆಗುತ್ತಲೇ ಇರುವುದರಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಮದುವೆ ಮುಂಜಿ ಮುಂತಾದ ಶುಭಕಾರ್ಯಗಳನ್ನು ಹತ್ತಿರದಲ್ಲೇ ಇಟ್ಟುಕೊಂಡಿರುವವರು ಏರುತ್ತಿರುವ ಚಿನ್ನದ ದರ ನೋಡಿ ಆಘಾತಕ್ಕೊಳಗಾಗುತ್ತಿದ್ದಾರೆ. ಆದರೂ ಇಂದು ತುಸು ನಿರಾಳ ಎಂಬಂತೆ ಚಿನ್ನದ ದರದಲ್ಲಿ ತುಸು ಇಳಿಕೆ ಕಂಡು ಬಂದಿದೆ. 22 ಗ್ರಾಂ ಚಿನ್ನದ ದರದಲ್ಲಿ ಗ್ರಾಂಗೆ 115 ರೂಪಾಯಿ ಇಳಿಕೆ ಆಗಿದೆ. ಹಾಗಾಗಿ 100 ಗ್ರಾಂ ಚಿನ್ನದ ದರದಲ್ಲಿ ನಿನ್ನೆಗೆ ಹೋಲಿಸಿದರೆ 11,500 ರೂ ಇಳಿಕೆ ಆಗಿದೆ.
ನಿನ್ನೆ ಏರಿಕೆ ಕಂಡಿದ ಚಿನ್ನದ ದರದಲ್ಲಿ ಇಂದು ತುಸು ಇಳಿಕೆಯಾಗಿದೆ. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರ ಎಷ್ಟಿದೆ ಅಂತ ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,015 ರೂಪಾಯಿ
8 ಗ್ರಾಂ: 72,120 ರೂಪಾಯಿ
10 ಗ್ರಾಂ: 90,150 ರೂಪಾಯಿ
100 ಗ್ರಾಂ: 9,01,500 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,835 ರೂಪಾಯಿ
8 ಗ್ರಾಂ: 78,680 ರೂಪಾಯಿ
10 ಗ್ರಾಂ: 98,350 ರೂಪಾಯಿ
100 ಗ್ರಾಂ: 9,83,500 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,376 ರೂಪಾಯಿ
8 ಗ್ರಾಂ: 59,008 ರೂಪಾಯಿ
10 ಗ್ರಾಂ: 73,760 ರೂಪಾಯಿ
100 ಗ್ರಾಂ: 7,37,600 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 90,150 ರೂಪಾಯಿ, ಮುಂಬೈ: 90,150 ರೂಪಾಯಿ, ದೆಹಲಿ: 90,300 ರೂಪಾಯಿ, ಕೋಲ್ಕತ್ತಾ: 90,150 ರೂಪಾಯಿ, ಬೆಂಗಳೂರು: 90,150 ರೂಪಾಯಿ, ಹೈದರಾಬಾದ್: 90,150 ರೂಪಾಯಿ, ವಡೋದರಾ: 90,200 ರೂಪಾಯಿ, ಅಹಮದಾಬಾದ್: 90,200ರೂಪಾಯಿ, ಪುಣೆ: 90,150 ರೂಪಾಯಿ, ಕೇರಳ: 90,150 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ನಿನ್ನೆಗೆ ಹೋಲಿಸಿದರೆ ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ನಿನ್ನೆಯ ದರವೇ ಇದೆ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿದೆ.
10 ಗ್ರಾಂ: 991 ರೂಪಾಯಿ (1 ರೂ. ಏರಿಕೆ)
100 ಗ್ರಾಂ: 9,910 ರೂಪಾಯಿ (10 ರೂ. ಏರಿಕೆ)
1000 ಗ್ರಾಂ: 99,100 ರೂಪಾಯಿ (100 ರೂ. ಏರಿಕೆ)