ಭಾನುವಾರ ಚಿನ್ನದ ಬೆಲೆ ಏರಿಕೆನಾ? ಇಳಿಕೆನಾ? ಇಲ್ಲಿದೆ ನೋಡಿ ಇಂದಿನ ಪರಿಷ್ಕೃತ ದರ
Gold And Silver Price Today: ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ವಿವರ ಇಲ್ಲಿದೆ. ಜಾಗತಿಕ ಮಾರುಕಟ್ಟೆ ಮತ್ತು ಹೂಡಿಕೆಗಳ ಮೇಲಿನ ಪರಿಣಾಮದಿಂದ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತದೆ. 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ಬೆಲೆಯನ್ನು ತಿಳಿಯಿರಿ.

ಇಂದು ಚಿನ್ನದ ಬೆಲೆ ಏರಿಕೆಯಾಗಿದೆಯಾ ಅಥವಾ ಇಳಿಕೆಯಾಗಿದೆಯಾ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ. ಚಿನ್ನದ ಮೇಲಿನ ಹೂಡಿಕೆ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಬದಲಾವಣೆಗಳಿಂದ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳತವಾಗುತ್ತಿರುತ್ತದೆ.
ಈಗಾಗಲೇ 80 ಸಾವಿರದ ಗಡಿ ದಾಟಿರುವ ಚಿನ್ನ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಹಾಗಾಗಿ ಬೆಲೆ ಇಳಿಕೆ ಮತ್ತು ಸ್ಥಿರವಾಗಿರುವ ಸಂದರ್ಭದಲ್ಲಿ ಚಿನ್ನ ಖರೀದಿಸಬೇಕು ಎಂದು ಮಾರುಕಟ್ಟೆ ತಜ್ಞರು ಸಲಹೆ ನೀಡುತ್ತಾರೆ. ಭಾರತದಲ್ಲಿ ಇಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,310 ರೂಪಾಯಿ
8 ಗ್ರಾಂ: 66,480 ರೂಪಾಯಿ
10 ಗ್ರಾಂ: 83,100 ರೂಪಾಯಿ
100 ಗ್ರಾಂ: 8,31,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,066 ರೂಪಾಯಿ
8 ಗ್ರಾಂ: 72,528 ರೂಪಾಯಿ
10 ಗ್ರಾಂ: 90,660 ರೂಪಾಯಿ
100 ಗ್ರಾಂ: 9,06,600 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 83,100 ರೂಪಾಯಿ, ಮುಂಬೈ: 83,100 ರೂಪಾಯಿ, ದೆಹಲಿ: 83,250 ರೂಪಾಯಿ, ಕೋಲ್ಕತ್ತಾ: 83,100 ರೂಪಾಯಿ, ಬೆಂಗಳೂರು: 83,100 ರೂಪಾಯಿ, ಹೈದರಾಬಾದ್: 83,100 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 940 ರೂಪಾಯಿ
100 ಗ್ರಾಂ: 9,400 ರೂಪಾಯಿ
1000 ಗ್ರಾಂ: 94,000 ರೂಪಾಯಿ