ದಾಖಲೆಗೆ ಜಸ್ಟ್ 400 ರೂ ಕಡಿಮೆ ಅಷ್ಟೇ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ದರ
Gold And Silver Price Today: ಚಿನ್ನದ ಬೆಲೆ ಇಂದು ದಾಖಲೆಗೆ ಸನಿಹದಲ್ಲಿದೆ. ಇಂದಿನ 22, 24 ಮತ್ತು 18 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ

ಚಿನ್ನ ಹೂಡಿಕೆದಾರರ ಅಚ್ಚುಮೆಚ್ಚಿನ ಹೂಡಿಕೆಯ ವಿಷಯವಾಗಿದೆ. ಅಲ್ಲದೇ ಷೇರು ಮಾರುಕಟ್ಟೆಯ ಹೂಡಿಕೆದಾರರು ಮಾತ್ರವಲ್ಲದೇ ಜನ ಸಾಮಾನ್ಯರು ಕೂಡ ಚಿನ್ನದ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಹೆಚ್ಚು ಬೇಡಿಕೆ ಇರುತ್ತದೆ.
ಚಿನ್ನ ಖರೀದಿಸೋದು ಅಂದ್ರೆ ಸಾಮಾನ್ಯ ವಿಷಯವಲ್ಲ. ಇದಕ್ಕಾಗಿ ಮೊದಲೇ ಹಣಕಾಸಿನ ಪ್ಲಾನ್ ಮಾಡಿಕೊಳ್ಳಬೇಕು. ಹಾಗಾದ್ರೆ ಮಾತ್ರ ಚಿನ್ನ ನಿಮ್ಮದಾಗುತ್ತದೆ. ಇಂದಿನ ಬೆಲೆ ಗಮನಿಸಿದ್ರೆ ಚಿನ್ನದ ಹಳೆ ದಾಖಲೆ ಸರಿದೂಗಿಸಲು ಕೇವಲ 400 ರೂಪಾಯಿ ಮಾತ್ರ ಕಡಿಮೆಯಾಗಿದೆ. ಇಂದು ದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,960 ರೂಪಾಯಿ
8 ಗ್ರಾಂ: 79,680 ರೂಪಾಯಿ
10 ಗ್ರಾಂ:99,600 ರೂಪಾಯಿ
100 ಗ್ರಾಂ: 9,96,000 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,130 ರೂಪಾಯಿ
8 ಗ್ರಾಂ: 76,040 ರೂಪಾಯಿ
10 ಗ್ರಾಂ: 91,300 ರೂಪಾಯಿ
100 ಗ್ರಾಂ: 9,13,000 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,470 ರೂಪಾಯಿ
8 ಗ್ರಾಂ: 59,760 ರೂಪಾಯಿ
10 ಗ್ರಾಂ: 74,700 ರೂಪಾಯಿ
100 ಗ್ರಾಂ: 7,47,000 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 91,300 ರೂಪಾಯಿ, ನವದೆಹಲಿ: 99,600 ರೂಪಾಯಿ, ಮುಂಬೈ: 91,300 ರೂಪಾಯಿ, ಕೋಲ್ಕತ್ತಾ: 91,300 ರೂಪಾಯಿ, ಬೆಂಗಳೂರು: 91,300 ರೂಪಾಯಿ, ಹೈದರಾಬಾದ್: 91,300 ರೂಪಾಯಿ, ಅಹಮದಾಬಾದ್: 99,650 ರೂಪಾಯಿ, ವಡೋದರಾ: 99,650 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
10 ಗ್ರಾಂ: 1,040 ರೂಪಾಯಿ
100 ಗ್ರಾಂ: 10,400 ರೂಪಾಯಿ
1000 ಗ್ರಾಂ: 1,04,000 ರೂಪಾಯಿ