- Home
- Business
- ಶ್ರಾವಣ ಬರ್ತಿದ್ದಂತೆ ಶುಭಕಾಲ ಆರಂಭ; ಎರಡು ದಿನಗಳಲ್ಲಿಯೇ 18,400 ರೂ ಇಳಿಕೆ, ಇಂದಿನ ಬೆಲೆ ಕೇಳಿದ್ರೆ ದಿಲ್ ಖುಷ್ ಆಗುತ್ತೆ!
ಶ್ರಾವಣ ಬರ್ತಿದ್ದಂತೆ ಶುಭಕಾಲ ಆರಂಭ; ಎರಡು ದಿನಗಳಲ್ಲಿಯೇ 18,400 ರೂ ಇಳಿಕೆ, ಇಂದಿನ ಬೆಲೆ ಕೇಳಿದ್ರೆ ದಿಲ್ ಖುಷ್ ಆಗುತ್ತೆ!
Gold And Silver Price Today: ಜುಲೈ ಆರಂಭದಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬಂದಿದ್ದು, ನಿನ್ನೆ ಮತ್ತು ಇಂದು ಭಾರೀ ಇಳಿಕೆಯಾಗಿದೆ. ಇಂದು ಖರೀದಿದಾರರಿಗೆ ಉತ್ತಮ ಅವಕಾಶವಾಗಿದೆ. ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

18,400 ರೂ. ಕಡಿಮೆ
ಜುಲೈ ಆರಂಭದಿಂದಲೂ ಚಿನ್ನದ ಬೆಲೆ ಇಳಿಕೆಯಾಗ್ತಿದ್ದಂತೆ ಏರಿಕೆಯಾಗಿದ್ದೇ ಹೆಚ್ಚು. ಆದ್ರೆ ನಿನ್ನೆ ಮತ್ತು ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ. ಈ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 18,400 ರೂ. ಕಡಿಮೆಯಾಗಿದೆ. ಹಾಗಾಗಿ ಚಿನ್ನ ಖರೀದಿ ಮಾಡೋರಿಗೆ ಇದು ಸುವರ್ಣವಕಾಶ ಆಗಿದೆ.
ಚಿನ್ನದ ಬೆಲೆ ಕುಸಿತ
ಇಂದು ದೇಶದಲ್ಲ ಎರಡನೇ ದಿನ ಚಿನ್ನದ ಬೆಲೆ ಕುಸಿತಗೊಂಡಿದೆ. ಈ ಲೇಖನದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ. ಶುಭ ಶುಕ್ರವಾರದಂದು ಇಂದು ಚಿನ್ನವನ್ನು ಬರಮಾಡಿಕೊಳ್ಳಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,210 ರೂಪಾಯಿ
8 ಗ್ರಾಂ: 73,680 ರೂಪಾಯಿ
10 ಗ್ರಾಂ: 92,100 ರೂಪಾಯಿ
100 ಗ್ರಾಂ: 9,21,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,048 ರೂಪಾಯಿ
8 ಗ್ರಾಂ: 80,384 ರೂಪಾಯಿ
10 ಗ್ರಾಂ: 1,00,480 ರೂಪಾಯಿ
100 ಗ್ರಾಂ: 10,04,800 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 92,100 ರೂಪಾಯಿ, ಮುಂಬೈ: 92,100 ರೂಪಾಯಿ, ದೆಹಲಿ: 92,100 ರೂಪಾಯಿ, ಬೆಂಗಳೂರು: 92,100 ರೂಪಾಯಿ, ಕೋಲ್ಕತ್ತಾ: 92,100 ರೂಪಾಯಿ, ಹೈದರಾಬಾದ್: 92,100 ರೂಪಾಯಿ, ಅಹಹಮದಾಬಾದ್: 92,150 ರೂಪಾಯಿ, ವಡೋದರ: 92,150 ರೂಪಾಯಿ
ಎಷ್ಟು ದರ ಇಳಿಕೆ?
ಇಂದು 22 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ 4,500 ರೂ.ಗಳಷ್ಟು ಇಳಿಕೆಯಾಗಿದೆ. ಇನ್ನು 24 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ 4,900 ರೂ.ಗಳಷ್ಟು ಕಡಿಮೆಯಾಗಿದೆ. ಈಗ ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು ಬೆಳ್ಳಿ ಬೆಲೆ
ಗುರುವಾರ ಬೆಳ್ಳಿ ದರದಲ್ಲಿ ಕುಸಿತಕೊಂಡಿತ್ತು. ಆದ್ರೆ ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ದೇಶದಲ್ಲಿಂದು ಬೆಳ್ಳಿ ದರ ಎಷ್ಟಿದೆ ಗೊತ್ತಾ?
10 ಗ್ರಾಂ: 1,180 ರೂಪಾಯಿ
100 ಗ್ರಾಂ: 11,800 ರೂಪಾಯಿ
1000 ಗ್ರಾಂ: 1,18,000 ರೂಪಾಯಿ