ಮದುವೆ ಸೀಸನ್‌ನಲ್ಲಿಯೇ ಇಳಿಕೆಯಾದ ಚಿನ್ನದ ಬೆಲೆ; ಇಂದಿನ 22, 24 ಕ್ಯಾರಟ್ ಬಂಗಾರದ ಬೆಲೆ ಎಷ್ಟಿದೆ?
Gold And Silver Price: ಮದುವೆ ಸೀಸನ್‌ನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, ಆದ್ರೆ ಇಂದು ದರ ಇಳಿಕೆಯಾಗಿದೆ. ಜನರು ಕೂಡಿಟ್ಟ ಹಣದಲ್ಲಿ ಚಿನ್ನ ಖರೀದಿಸುತ್ತಿದ್ದಾರೆ. 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ, ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ.

ಮಧ್ಯಮ ವರ್ಗದ ಜನರಿಗೆ ಚಿನ್ನ ಅನ್ನೋದು ದಿನದಿಂದ ದಿನಕ್ಕೆ ಗಗನ ಕುಸುಮವಾಗಿದೆ. ಕಳೆದ 15 ದಿನಗಳಿಂದ ದೇಶದಲ್ಲಿ ಮದುವೆ ಸೀಸನ್ ಆರಂಭವಾಗಿದ್ದು, ಬೆಲೆ ಏರಿಕೆಯಾದ್ರೂ ಜನರು ಕೂಡಿಟ್ಟ ಹಣದಲ್ಲಿ ಅನಿವಾರ್ಯವಾಗಿ ಚಿನ್ನ ಖರೀದಿಸುತ್ತಿದ್ದಾರೆ.
ಚಿನ್ನದ ಬೆಲೆ ಇಳಿಕೆಯಾಗುತ್ತಿರುವ ಅಥವಾ ಸ್ಥಿರವಾಗಿರುವ ಸಂದರ್ಭದಲ್ಲಿಯೇ ಬಂಗಾರವನ್ನು ಖರೀದಿಸಬೇಕು. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,944 ರೂಪಾಯಿ
8 ಗ್ರಾಂ: 71,552 ರೂಪಾಯಿ
10 ಗ್ರಾಂ: 89,440 ರೂಪಾಯಿ
100 ಗ್ರಾಂ: 8,94,400 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,757 ರೂಪಾಯಿ
8 ಗ್ರಾಂ: 78,056 ರೂಪಾಯಿ
10 ಗ್ರಾಂ: 97,570 ರೂಪಾಯಿ
100 ಗ್ರಾಂ: 9,75,700 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 89,440 ರೂಪಾಯಿ, ಬೆಂಗಳೂರು: 89,440 ರೂಪಾಯಿ, ದೆಹಲಿ: 89,590 ರೂಪಾಯಿ, ಕೋಲ್ಕತ್ತಾ: 89,440 ರೂಪಾಯಿ, ಹೈದರಾಬಾದ್: 89,440 ರೂಪಾಯಿ, ಕೇರಳ: 89,440 ರೂಪಾಯಿ, ಪುಣೆ: 89,440 ರೂಪಾಯಿ, ವಡೋದರ: 89,440 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 999 ರೂಪಾಯಿ
100 ಗ್ರಾಂ: 9,990 ರೂಪಾಯಿ
1000 ಗ್ರಾಂ: 99,990 ರೂಪಾಯಿ