ಇಂದಿನ 1 ಗ್ರಾಂ ಚಿನ್ನದ ಬೆಲೆ ಎಷ್ಟು? 1 ಕೆಜಿ ಬೆಳ್ಳಿ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ
Gold And Silver Price: ಜನರು ಚಿನ್ನ ಮತ್ತು ಬೆಳ್ಳಿ ದರದ ಮೇಲೆ ಕಣ್ಣಿಟ್ಟಿರುತ್ತಾರೆ, ಏಕೆಂದರೆ ಬೆಲೆ ಇಳಿಕೆಯಾದಾಗ ಖರೀದಿಸಲು ಬಯಸುತ್ತಾರೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ವಿವರ ಇಲ್ಲಿದೆ.

ಜನರು ಚಿನ್ನ ಮತ್ತು ಬೆಳ್ಳಿ ದರದ ಮೇಲೊಂದು ಕಣ್ಣಿಟ್ಟಿರುತ್ತಾರೆ. ಕಾರಣ ಬೆಲೆ ಇಳಿಕೆಯಾಗುತ್ತಲೇ ತಮ್ಮ ಆರ್ಥಿಕ ಶಕ್ತಿಗನುಸಾರವಾಗಿ ಖರೀದಿಸಬೇಕು. ಇದರಿಂದ ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆಗಳಾದ್ರೆ ಸಹಾಯಕ್ಕೆ ಬರುತ್ತೆ ಎಂಬುವುದು ಜನರ ನಂಬಿಕೆ.
ಚಿನ್ನದ ಬೆಲೆಯಂತೂ ಹಂತ ಹಂತವಾಗಿ ಏರಿಕೆಯಾಗುತ್ತಲೇ ಬಂದಿದೆ. ಕೆಲವೊಂದು ದಿನ ಬಂಪರ್ ರೀತಿಯಲ್ಲಿ ಬೆಲೆ ಕಡಿಮೆಯಾಗಿ ಮರುದಿನ ಏರಿಕೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಚಿನ್ನ ಖರೀದಿಸೋದು ಒಳ್ಳೆಯದು. ಇಂದು ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ದೇಶದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ : 8,066 ರೂಪಾಯಿ
8 ಗ್ರಾಂ: 64,528 ರೂಪಾಯಿ
10 ಗ್ರಾಂ: 80,660 ರೂಪಾಯಿ
100 ಗ್ರಾಂ: 8,06,600 ರೂಪಾಯಿ
ದೇಶದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ : 8,799 ರೂಪಾಯಿ
8 ಗ್ರಾಂ: 70,392 ರೂಪಾಯಿ
10 ಗ್ರಾಂ: 87,990 ರೂಪಾಯಿ
100 ಗ್ರಾಂ: 8,79,900 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 80,660 ರೂಪಾಯಿ, ಮುಂಬೈ: 80,660 ರೂಪಾಯಿ, ದೆಹಲಿ: 80,810 ರೂಪಾಯಿ, ಕೋಲ್ಕತ್ತಾ: 80,660 ರೂಪಾಯಿ, ಬೆಂಗಳೂರು: 80,660 ರೂಪಾಯಿ, ಹೈದರಾಬಾದ್: 80,660 ರೂಪಾಯಿ, ಪುಣೆ: 80,660 ರೂಪಾಯಿ
ದೇಶದಲ್ಲಿ ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
10 ಗ್ರಾಂ: 1,001 ರೂಪಾಯಿ
100 ಗ್ರಾಂ: 10,010 ರೂಪಾಯಿ
1000 ಗ್ರಾಂ: 1,00,100 ರೂಪಾಯಿ