ಚಿನ್ನ ಖರೀದಿಸುವ ಕನಸಿಗೆ ರೆಕ್ಕೆ ಬಂದಾಯ್ತು; ಇಲ್ಲಿದೆ ಇಂದಿನ ಬಂಗಾರ-ಬೆಳ್ಳಿ ಬೆಲೆ
Gold and Silver Price: ಚಿನ್ನದ ಬೆಲೆಯಲ್ಲಿ ಏರಿಳಿತ ಸಾಮಾನ್ಯ. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಹಾಗೂ ಬೆಳ್ಳಿ ದರದ ಬಗ್ಗೆ ಮಾಹಿತಿ ಇಲ್ಲಿದೆ. ಚಿನ್ನವನ್ನು ಹೂಡಿಕೆಯಾಗಿ ಪರಿಗಣಿಸುವುದು ಸಾಮಾನ್ಯವಾಗಿದೆ.

ಚಿನ್ನದ ಮೇಲಿನ ವ್ಯಾಮೋಹ ಕೇವಲ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಇರುತ್ತದೆ. ಚಿನ್ನಾಭರಣಗಳನ್ನು ಧರಿಸಿ ಮಿಂಚಬೇಕು ಅಂತ ಮಹಿಳೆ ಅಂದ್ಕೊಂಡ್ರೆ ಪುರುಷರು ಇದನ್ನು ಹೂಡಿಕೆ ಎಂದು ಪರಿಗಣಿಸುತ್ತಾರೆ. ಹಾಗಾಗಿ ಕೊಂಚ ಹಣ ಉಳಿದರೂ ಮಧ್ಯಮ ವರ್ಗದ ಜನತೆ ಚಿನ್ನದ ಖರೀದಿಗೆ ಮುಂದಾಗುತ್ತಾರೆ.
ಚಿನ್ನದ ಬೆಲೆಯಲ್ಲಿ ಪ್ರತಿನಿತ್ಯ ಏರಿಳಿತ ಆಗುತ್ತಿರುತ್ತದೆ. ಕಳೆದ ಏಳು ದಿನ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿತ್ತು. ಇಂದು ದೇಶದಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ. ಹಾಗೆ ಬೆಳ್ಳಿ ಮೇಲಿನ ಹೂಡಿಕೆಯೂ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,291 ರೂಪಾಯಿ
8 ಗ್ರಾಂ: 66,328 ರೂಪಾಯಿ
10 ಗ್ರಾಂ: 82,910 ರೂಪಾಯಿ
100 ಗ್ರಾಂ: 8,29,100 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,045 ರೂಪಾಯಿ
8 ಗ್ರಾಂ: 72,360 ರೂಪಾಯಿ
10 ಗ್ರಾಂ: 90,450 ರೂಪಾಯಿ
100 ಗ್ರಾಂ: 9,04,500 ರೂಪಾಯಿ
ದೇಶದ ಪ್ರಮುಖ ನಗರಗಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 82,910 ರೂಪಾಯಿ, ಮುಂಬೈ: 82,910 ರೂಪಾಯಿ, ದೆಹಲಿ: 83,060 ರೂಪಾಯಿ, ಬೆಂಗಳೂರು: 82,910 ರೂಪಾಯಿ, ಕೋಲ್ಕತ್ತಾ: 82,910 ರೂಪಾಯಿ, ಹೈದರಾಬಾದ್: 82,910 ರೂಪಾಯಿ, ಪುಣೆ: 82,910 ರೂಪಾಯಿ, ಕೇರಳ: 82,910 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 929 ರೂಪಾಯಿ
100 ಗ್ರಾಂ: 9,290 ರೂಪಾಯಿ
100 ಗ್ರಾಂ: 92,900 ರೂಪಾಯಿ
ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ.