ಕನ್ನಡ ದಿನಪತ್ರಿಕೆಗಳು ಕಂಡಂತೆ ನಿರ್ಮಲಾ ಬಜೆಟ್!
ಮೋದಿ ಆಡಳಿತಾವಧಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಇವಡು ಮಂಡಿಸಿರುವ ಬಜೆಟ್‌ಗೆ ಪರ ವಿರೋಧಗಳು ವ್ಯಕ್ತವಾಗಿವೆ. ಕೃಷಿ, ಆರೋಗ್ಯ, ಉದ್ಯಮ, ಶಿಕ್ಷಣ ಹೀಗೆ ನಾನಾ ಕ್ಷೇತ್ರಗಳಿಗೆ ಕೊಡುಗೆ ನೀಡಿರುವ ನಿರ್ಮಲಾ ಸೀತಾರಾಮನ್, ಬೆಲೆ ಏರಿಕೆಯ ಕಹಿಯನ್ನೂ ನೀಡಿದ್ದಾರೆ. ಇನ್ನು ತೆರಿಗೆ ವಿಚಾರದಲ್ಲೂ ತೆರಿಗೆದಾರರಿಗೆ ಎರಡು ಆಯ್ಕೆ ನೀಡಿದ್ದಾರೆ. ಹೀಗಿರುವಾಗ ನಿರ್ಮಲಾ ಬಜೆಟ್ ಹೇಗಿತ್ತು? ಇಲ್ಲಿದೆ ನೋಡಿ ಕನ್ನಡ ದಿನಪತ್ರಿಕೆಗಳು ಕಂಡಂತೆ ನಿರ್ಮಲಾ ಬಜೆಟ್‌ನ ಒಂದು ನೋಟ
ಟಾನಿಕ್ ಬಜೆಟ್- ಕನ್ನಡಪ್ರಭ ದಿನಪತ್ರಿಕೆ
ಅಂಗೈಯಲ್ಲಿ ಅರಮನೆ- ಸಂಯುಕ್ತ ಕರ್ನಾಟಕ
ಒಣ ಮಂತ್ರ, ಪುನಶ್ಚೇತನ ಅತಂತ್ರ- ಪ್ರಜಾವಾಣಿ
ಆಶಾ ಭಾರತ: ಹೊಸ ದಿಗಂತ
ಯಾರಿಗೂ ನಾಟ್ ರೀಚಬಲ್- ವಿಜಯ ಕರ್ನಾಟಕ
ಕಿಸಾನ್ ಕಿಸೆಗೆ ಕಾಸು- ಉದಯವಾಣಿ
ಆರ್ಥಿಕತೆ ಮೇಲೆತ್ತುವ ಕಸರತ್ತು- ವಾರ್ತಾ ಭಾರತಿ
ಸುಖಕರ ಭವಿಷ್ಯಕ್ಕೆ ಚತುರೋಪಾಯ- ವಿಜಯವಾಣಿ
ಆರ್ಥಿಕ ನಿರ್ಮಲೀಕರಣ, ಸೀತಾರಾಮನ್ ಎಫೆಕ್ಟ್- ವಿಶ್ವವಾಣಿ