ಅಮೆರಿಕ-ಯುರೋಪ್ ಒಕ್ಕೂಟ ವ್ಯಾಪಾರ ಒಪ್ಪಂದ: ಚಿನ್ನದ ದರ ಕುಸಿತ ಆರಂಭ; ಎಷ್ಟು ಇಳಿಕೆ?
ಅಮೆರಿಕ-ಯುಕೆ ವ್ಯಾಪಾರ ಒಪ್ಪಂದದ ನಂತರ ಡಾಲರ್ ಮೌಲ್ಯ ಏರಿಕೆಯಿಂದ ಚಿನ್ನದ ಬೆಲೆ ಕುಸಿತ ಕಂಡಿದೆ. ವ್ಯಾಪಾರ ಒತ್ತಡ ಕಡಿಮೆಯಾದರೆ ಚಿನ್ನದ ಮೇಲಿನ ಹೂಡಿಕೆ ಕುಂಠಿತಗೊಳ್ಳಬಹುದು ಎಂಬ ಊಹಾಪನೆಗಳಿವೆ. ಅಮೆರಿಕ-ಚೀನಾ ವ್ಯಾಪಾರ ಸಂಧಾನಗಳು ಮುಂದಿನ ಬೆಳವಣಿಗೆಗಳಿಗೆ ಕಾರಣವಾಗಬಹುದು.

ಅಮೆರಿಕ ಮತ್ತು ಯುಕೆ ನಡುವಿನ ವ್ಯಾಪಾರ ಒಪ್ಪಂದದ ನಂತರ ಡಾಲರ್ ಮೌಲ್ಯ ಏರಿಕೆಯಾದ ಹಿನ್ನೆಲೆಯಲ್ಲಿ ಸೋಮವಾರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. EU ತನ್ನ ರಫ್ತಿಗೆ 15% ಮೂಲ ಸುಂಕಕ್ಕೆ ಒಪ್ಪಿಕೊಂಡಿದೆ. $750 ಶತಕೋಟಿ ಮೌಲ್ಯದ ಅಮೆರಿಕನ್ ಇಂಧನ ಉತ್ಪನ್ನಗಳಿಗೆ ಒಪ್ಪಿಗೆ ನೀಡಿದೆ. ಅಮೆರಿಕದಲ್ಲಿ $600 ಶತಕೋಟಿ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದೆ.
ಬೆಳಗ್ಗೆ 4.3ಕ್ಕೆ ಚಿನ್ನದ ಬೆಲೆ 0.1% ಇಳಿಕೆಯಾಗಿ ಪ್ರತಿ ಔನ್ಸ್‌ಗೆ $3,335.39 ತಲುಪಿದೆ. ಡಾಲರ್ ಸೂಚ್ಯಂಕ 0.5% ಏರಿಕೆಯಾಗಿದೆ. ಬಲಿಷ್ಠ ಡಾಲರ್ ವಿದೇಶಿ ಖರೀದಿದಾರರಿಗೆ ಚಿನ್ನವನ್ನು ದುಬಾರಿಯಾಗಿಸುತ್ತದೆ.
"ಹೆಚ್ಚಿನ ‘ವ್ಯಾಪಾರ ಒಪ್ಪಂದಗಳು’ ಏರ್ಪಟ್ಟರೆ, ಡಾಲರ್ ಮೇಲೆ ಒತ್ತಡ ಹೇರುತ್ತಿರುವ ನೀತಿ ಅನಿಶ್ಚಿತತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ" ಎಂದು HSBCಯ ಜಾಗತಿಕ FX ಸಂಶೋಧನಾ ಮುಖ್ಯಸ್ಥ ಪಾಲ್ ಮ್ಯಾಕೆಲ್ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. SPDR ಗೋಲ್ಡ್ ಶೇರ್ಸ್ ETF (GLD) ಬಗ್ಗೆ ಚಿಲ್ಲರೆ ಭಾವನೆ ‘ಬುಲಿಶ್’ ಪ್ರದೇಶದಲ್ಲಿ ಉಳಿದಿದೆ.
ಅಮೆರಿಕ ಮತ್ತು ಚೀನಾ ಅಧಿಕಾರಿಗಳು ಸ್ಟಾಕ್‌ಹೋಮ್‌ನಲ್ಲಿ ಭೇಟಿಯಾಗಿ ಸುಂಕ ಕದನ ವಿರಾಮವನ್ನು ಆಗಸ್ಟ್ 12ರಂದು ಭೇಟಿಯಾಗಿ ಚರ್ಚಿಸಲಿದ್ದಾರೆ. ಒಂದು ವೇಳೆ ವ್ಯಾಪಾರ ಒತ್ತಡ ಕಡಿಮೆಯಾದರೆ ಚಿನ್ನದ ಮೇಲಿನ ಹೂಡಿಕೆ ಕಡಿಮೆಯಾಗಬಹುದು. ಹೂಡಿಕೆ ಪ್ರಮಾಣ ಕಡಿಮೆಯಾದ್ರೆ ಚಿನ್ನದ ಬೆಲೆಯೂ ಇಳಿಕೆಯಾಗುತ್ತದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಧಿಸುತ್ತಿರುವ ತೆರಿಗೆಗಳು ಜಾಗತೀಕ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿವೆ.
ತೆರಿಗೆ ಒಪ್ಪಂದ ವಿಸ್ತರಣೆ ಕುರಿತು ಅಮೆರಿಕ ಮತ್ತು ಚೀನಾದ ಅಧಿಕಾರಿಗಳು ಸ್ಟಾಕ್‌ಹೋಮ್‌ನಲ್ಲಿ ಸಭೆ ಸೇರಲಿದ್ದಾರೆ. ತೆರಿಗೆ ಒಪ್ಪಂದ ಎಷ್ಟು ಕಾಲ ಇರುತ್ತದೆ, ಫೆಂಟನಿಲ್ ಕಳ್ಳಸಾಗಣೆಯೊಂದಿಗೆ ಸಂಬಂಧಿಸಿದ ಯುಎಸ್ ಲೆವಿಗಳು ಮತ್ತು ರಷ್ಯಾ ಮತ್ತು ಇರಾನ್‌ನಿಂದ ಚೀನಾದ ಅನುಮೋದಿತ ತೈಲ ಆಮದು ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿವೆ. ತಮ್ಮ ಆಡಳಿತವು ಚೀನಾದೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು "ತುಂಬಾ ಹತ್ತಿರದಲ್ಲಿದೆ" ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ನೀಡಿದ್ದಾರೆ.