ಚಿನ್ನ vs ರಿಯಲ್ ಎಸ್ಟೇಟ್, ಕಳೆದ 10-15 ವರ್ಷದಲ್ಲಿ ಹೆಚ್ಚು ಲಾಭ ಕೊಟ್ಟಿದ್ದು ಯಾವುದು?
ಚಿನ್ನ ಅಥವಾ ರಿಯಲ್ ಎಸ್ಟೇಟ್? ಯಾವುದರ ಮೇಲೆ ಹೂಡಿಕೆ ಮಾಡಿದರೆ ಉತ್ತಮ? ಕಳೆದ 10 ರಿಂದ 15 ವರ್ಷದಲ್ಲಿ ಗೋಲ್ಡ್ ಹಾಗೂ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದವರಿಗೆ ಸಿಕ್ಕದ ಲಾಭವೆಷ್ಟು?

ಭಾರತದಲ್ಲಿ ರಿಯಲ್ ಎಸ್ಟೇಟ್ ಹಾಗೂ ಗೋಲ್ಡ್ ಎರಡೂ ಹೂಡಿಕೆ ಕಾರಣದಿಂದ ಪ್ರಮುಖ ಕ್ಷೇತ್ರಗಳು. ಎರಡೂ ವರ್ಷದಿಂದ ವರ್ಷಕ್ಕೆ ಕೈಗೆಟುಕದ ರೀತಿಯಲ್ಲಿ ಬೆಳೆಯುತ್ತಿದೆ. ನಿವೇಷನ ಖರೀದಿ, ಚಿನ್ನ ಖರೀದಿ ಎರಡೂ ಅತೀ ದುಬಾರಿ. ಹೀಗಾಗಿ ಹಲವರು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಾರೆ. ಮಾರುಕಟ್ಟೆಗಳ ಏರಿಳಿತಗಳ ನಡುವೂ ರಿಯಲ್ ಎಸ್ಟೇಟ್ ಹಾಗೂ ಚಿನ್ನ ಒಂದು ರೀತಿಯಲ್ಲಿ ಸುರಕ್ಷತೆಯ ಹೂಡಿಕೆಯಾಗಿದೆ. ಈ ಎರಡೂ ಕ್ಷೇತ್ರ ಕಳೆದ 10 ರಿಂದ 15 ವರ್ಷದಲ್ಲಿ ಎಷ್ಟು ಲಾಭ ನೀಡಿದೆ. ಈ ಕುರಿತು ತಜ್ಞರು ಅಂಕಿ ಅಂಶ ಸಮೇತ ಉತ್ತರಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಗಳು ಈ ಕ್ಷೇತ್ರದ ಹೂಡಿಕೆ ಸೇಫ್ ಹಾಗೂ ಆಸ್ತಿಯನ್ನು ನೀಡಲಿದೆ. ಹೀಗಾಗಿ ರಿಯಲ್ ಎಸ್ಟೇಟ್ ಹೂಡಿಕೆ ಉತ್ತಮ ಎಂದು ವಾದಿಸುತ್ತಾರೆ. ಬೆಂಗಳೂರು, ಮುಂಬೈ, ನೋಯ್ಡಾ, ಪುಣೆ ಸೇರಿದಂತೆ ಹಲವೆಡೆ ರಿಯಲ್ ಎಸ್ಟೇಟ್ ಬೆಲೆ ಸೇಕಡಾ 92ರಷ್ಟು ಹೆಚ್ಚಾಗಿದೆ ಎಂದಿದ್ದಾರೆ. ಆದರೆ ರಿಯಲ್ ಎಸ್ಟೇಟ್ ಹಾಗೂ ಗೋಲ್ಡ್ ಹೂಡಿಕೆ ವಿಚಾರದಲ್ಲಿ ನೋಡಿದರೆ ವ್ಯತ್ಯಾಸ ಸ್ಪಷ್ಟ ಎಂದು ಬ್ಯಾಂಕ್‌ಬಜಾರ್ ಸಿಇಒ ಹಾಗೂ ಸಹ ಸಂಸ್ಥಾಪಕ ಅದಿಲ್ ಶೆಟ್ಟಿ ಹೇಳಿದ್ದಾರೆ.
ಭಾರತದಲ್ಲಿ ರಿಯಲ್ ಎಸ್ಟೇಟ್ ಸುದೀರ್ಘ ಹೂಡಿಕೆ ಯೋಜನೆಗಳು. ಕಳೆದ 10 ರಿಂ 15 ವರ್ಷದ ಅಂಕಿ ಅಂಶದ ಪ್ರಕಾರ ಭಾರತದಲ್ಲಿ ರಿಯಲ್ ಎಸ್ಟೇಟ್ ಶೇಕಡಾ 5.2 ರಿಂದ ಶೇಕಡಾ 6.4ರ ವರೆಗೆ ಲಾಭ ಅಥವಾ ಆದಾಯ ನೀಡಿದೆ. ಇದೇ ವೇಳೆ ಚಿನ್ನ ಶೇಕಡಾ 11.3 ರಿಂದ ಶೇಕಡಾ 14ರಷ್ಟು ಆದಾಯ ನೀಡಿದೆ ಎಂದು ಅದಿಲ್ ಶೆಟ್ಟಿ ಹೇಳಿದ್ದಾರೆ. ಹೀಗಾಗಿ ಭಾರತದಲ್ಲಿ ಕಳದ 10 ರಿಂದ 15 ವರ್ಷದಲ್ಲಿ ಚಿನ್ನ ಉತ್ತಮ ಲಾಭ ನೀಡಿದೆ ಎಂದಿದ್ದಾರೆ.
ಆದಿಲ್ ಶೆಟ್ಟಿ ಪ್ರಕಾರ 15 ವರ್ಷದ ಹಿಂದೆ 1 ಲಕ್ಷ ರೂಪಾಯಿ ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ ಇದೀಗ 5 ಲಕ್ಷ ರೂಪಾಯಿ ಆಗುತ್ತಿತ್ತು. ಅದೇ ರಿಯಲ್ ಎಸ್ಟೇಟ್‌ನಲ್ಲಿ 15 ವರ್ಷದ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇದೀಗ 2.5 ಲಕ್ಷ ರೂಪಾಯಿ ಆಗುತ್ತಿತ್ತು ಎಂದಿದ್ದಾರೆ. ಇಷ್ಟೇ ಅಲ್ಲ ಚಿನ್ನದ ಮೇಲೆ ಹೂಡಿಕೆ ಅತೀ ಸುಲಭ ಎಂದಿದ್ದಾರೆ.
ಕೈಯಲ್ಲಿರುವಷ್ಟು ಮೊತ್ತವನ್ನು ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಸಾವಿರ ರೂಪಾಯಿಂದ ಲಕ್ಷ ಲಕ್ಷ ರೂಪಾಯಿ ವರೆಗೆ ಚಿನ್ನದ ಮೇಲೆ ಹೂಡಿಕೆ ಮಾಡಲು ಸಾಧ್ಯವಿದೆ. ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆ ಚಿನ್ನದ ಮೇಲೆ ಸಾಧ್ಯವಿದೆ. ಆದರೆ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಲು ಲಕ್ಷ ಲಕ್ಷ ರೂಪಾಯಿ ಅವಶ್ಯಕತೆ ಇದೆ ಎಂದಿದ್ದಾರೆ. ಹೀಗಾಗಿ ಕಳೆದ 15 ವರ್ಷಗಳ ಅಂಕಿ ಅಂಶದ ಪ್ರಕಾರ ಚಿನ್ನದ ಹೂಡಿಕೆ ಲಾಭ ಹಾಗೂ ಸುಲಭ ಎಂದಿದ್ದಾರೆ.