ಜಗತ್ತಿನ 10 ಅತಿದೊಡ್ಡ ಬ್ಯಾಂಕ್‌ಗಳು, ಲಿಸ್ಟ್‌ನಲ್ಲೇ ಇಲ್ಲ ಎಸ್‌ಬಿಐ, ಎಚ್‌ಡಿಎಫ್‌ಸಿ..!
ಜಾಗತಿಕ ಬ್ಯಾಂಕಿಂಗ್ ದೈತ್ಯ ಸಂಸ್ಥೆಗಳಿಗೆ ಹೋಲಿಸಿದರೆ ಭಾರತೀಯ ಬ್ಯಾಂಕುಗಳ ಆಸ್ತಿ ಗಾತ್ರ ತೀರಾ ಕಡಿಮೆ ಎಂದು ಹೋಲಿಕೆ ತೋರಿಸುತ್ತದೆ. ಚೀನಾದ ಐಸಿಬಿಸಿ ಬ್ಯಾಂಕ್ ಭಾರತದ ಎಸ್‌ಬಿಐಗಿಂತ 12 ಪಟ್ಟು ಹೆಚ್ಚು ಆಸ್ತಿ ಹೊಂದಿದೆ.

ಜಾಗತಿಕ ಬ್ಯಾಂಕಿಂಗ್ ದೈತ್ಯ ಸಂಸ್ಥೆಗಳ ಇತ್ತೀಚಿನ ಹೋಲಿಕೆಯು ಭಾರತೀಯ ಬ್ಯಾಂಕುಗಳು ಮತ್ತು ಅವುಗಳ ಅಂತರರಾಷ್ಟ್ರೀಯ ಸಹವರ್ತಿಗಳ (International Banks) ನಡುವಿನ ಆಸ್ತಿ ಗಾತ್ರದ ಗಣನೀಯ ಅಂತರವನ್ನು ತಿಳಿಸಿದೆ. ಬ್ಲೂಮ್‌ಬರ್ಗ್ ಡೇಟಾ (bloomberg) ಪ್ರಕಾರ, ಭಾರತದ ಉನ್ನತ ಬ್ಯಾಂಕುಗಳು (Indian Top Banks) ಪ್ರಮುಖ ಜಾಗತಿಕ ಸಂಸ್ಥೆಗಳು ಹೊಂದಿರುವ ಆಸ್ತಿಗಳಲ್ಲಿ ಒಂದು ಸಣ್ಣ ಭಾಗವನ್ನು ಮಾತ್ರ ಹೊಂದಿವೆ.
ಆಸ್ತಿಗಳ ವಿಚಾರದಲ್ಲಿ ಜಗತ್ತಿನ 10 ಅತಿದೊಡ್ಡ ಬ್ಯಾಂಕ್‌ಗಳನ್ನು ನೋಡುವುದಾದರೆ, ಅಗ್ರಸ್ಥಾನದಲ್ಲಿರುವ ಚೀನಾದ ಐಸಿಬಿಸಿ ಬ್ಯಾಂಕ್, ಭಾರತದ ಅಗ್ರ ಬ್ಯಾಂಕ್ ಆಗಿರುವ ಎಸ್‌ಬಿಐಗಿಂತ ಬರೋಬ್ಬರಿ 12 ಪಟ್ಟು ಅಧಿಕ ಆಸ್ತಿ ಹೊಂದಿದೆ.
ಇಂಡಸ್ಟ್ರಿಯಲ್ & ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ- Industrial and Commercial Bank of China ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಇದರ ಆಸ್ತಿ 5561 ಲಕ್ಷ ಕೋಟಿ ರೂಪಾಯಿ.
2ನೇ ಸ್ಥಾನದಲ್ಲಿರುವುದು ಕೂಡ ಚೀನಾದ ಕೃಷಿ ಬ್ಯಾಂಕ್. Agricultural Bank of China ಬರೋಬ್ಬರಿ 4897 ಲಕ್ಷ ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದೆ ಎಂದು ಬ್ಲೂಮ್‌ಬರ್ಗ್ ತಿಳಿಸಿದೆ.
ಚೀನಾ ಕನ್ಸಸ್ಟ್ರಕ್ಷನ್ ಬ್ಯಾಂಕ್ (China Construction Bank) ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದರ ಆಸ್ತಿ 4648 ಲಕ್ಷ ಕೋಟಿ ರೂಪಾಯಿ ಎಂದು ತಿಳಿಸಲಾಗಿದೆ.
ಚೀನಾದ ಇನ್ನೊಂದು ಬ್ಯಾಂಕ್, Bank of China ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬ್ಯಾಂಕ್ ಆಫ್ ಚೀನಾದ ಆಸ್ತಿ 3984 ಲಕ್ಷ ಕೋಟಿ ರೂಪಾಯಿ.
ಅಮೆರಿಕದ ಮಲ್ಟಿನ್ಯಾಷನಲ್ ಬ್ಯಾಂಕ್ JPMorgan Chase ಐದನೇ ಸ್ಥಾನದಲ್ಲಿದ್ದು ಇದರ ಆಸ್ತಿ ಮೌಲ್ಯ 3320 ಲಕ್ಷ ಕೋಟಿ ರೂಪಾಯಿ.
Bank of America ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು ಇದರ ಆಸ್ತಿ ಮೌಲ್ಯ 2739 ಲಕ್ಷ ಕೋಟಿ ರೂಪಾಯಿ ಎನ್ನಲಾಗಿದೆ.
ಭಾರತದಲ್ಲೂ ತನ್ನ ಹೆಜ್ಜೆ ಹೊಂದಿರುವ ಬ್ರಿಟನ್‌ನ ಯುನಿವರ್ಸಲ್ ಬ್ಯಾಂಕ್ HSBC 2490 ಲಕ್ಷ ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದೆ.
BNP Paribas ಫ್ರೆಂಚ್ ಇಂಟರ್‌ನ್ಯಾಷನ್ ಬ್ಯಾಂಕ್. ಇದರ ಆಸ್ತಿ ಮೌಲ್ಯ 2324 ಲಕ್ಷ ಕೋಟಿ ರೂಪಾಯಿ. ಭಾರತದಲ್ಲೂ ಹೆಜ್ಜೆ ಗುರುತನ್ನು ಹೊಂದಿದೆ.
ಕ್ರೆಡಿಟ್ ಅಗ್ರಿಕೋಲ್(Credit Agricole) ಫ್ರೆಂಚ್ ಇಂಟರ್‌ನ್ಯಾಷನಲ್ ಬ್ಯಾಂಕ್. ಇದರ ಮೌಲ್ಯ 2241 ಲಕ್ಷ ಕೋಟಿ ರೂಪಾಯಿ.
Mitsubishi UFJ Financial ಜಪಾನ್‌ನ ಇಂಟರ್‌ನ್ಯಾಷನ್ ಬ್ಯಾಂಕ್ ಆಗಿದೆ. 2005ರಲ್ಲಿ ಆರಂಭವಾದ ಈ ಕಂಪನಿಯ ಆಸ್ತಿ ಮೌಲ್ಯ 2158 ಲಕ್ಷ ಕೋಟಿ ರೂಪಾಯಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಎಚ್‌ಡಿಎಫ್‌ಸಿ ಭಾರತದ ಅಗ್ರ ಸರ್ಕಾರಿ ಹಾಗೂ ಖಾಸಿ ಬ್ಯಾಂಕ್‌ಗಳಾಗಿವೆ. ಈ ಎರಡೂ ಕಂಪನಿಗಳ ಆಸ್ತಿ ಸೇರಿಸಿದರೂ 10ನೇ ಸ್ಥಾನದಲ್ಲಿರುವ ಮಿತ್ಸುಬಿಷಿ ಬ್ಯಾಂಕ್‌ನ ಆಸ್ತಿ ಮೌಲ್ಯವೂ ದಾಟೋದಿಲ್ಲ. ಎಸ್‌ಬಿಐ 454 ಲಕ್ಷ ಕೋಟಿ ಆಸ್ತಿ ಹೊಂದಿದ್ದರೆ, ಎಚ್‌ಡಿಎಫ್‌ಸಿ ಬ್ಯಾಂಕ್ 410 ಲಕ್ಷ ಕೋಟಿ ಆಸ್ತಿ ಹೊಂದಿದೆ.