ಟಾಲಿವುಡ್ ಸ್ಟಾರ್ ನಟರ ಮಾಲಿಕತ್ವದ ರೆಸ್ಟೋರೆಂಟ್ ಗಳು, ಬೆಂಗಳೂರಿನಲ್ಲಿ ಯಾರದ್ದಿದೆ?
ರುಚಿಕರವಾದ ತಿನಿಸುಗಳು ಮತ್ತು ಅದ್ಭುತ ವಾತಾವರಣವಿರುವ ದುಬಾರಿ ರೆಸ್ಟೋರೆಂಟ್‌ಗಳನ್ನು ಟಾಲಿವುಡ್ ತಾರೆಯರು ನಡೆಸುತ್ತಿದ್ದಾರೆ. ಯಾರು ಯಾವ ವ್ಯಾಪಾರ ಮಾಡ್ತಿದ್ದಾರೆ ಅಂತ ನೋಡೋಣ.

ತಾರೆಯರ ಬಿಸಿನೆಸ್‌ಗಳು
ಸ್ಟಾರ್ ನಟರಿಗೆ ದುಡ್ಡಿನ ಕೊರತೆ ಇರಲ್ಲ. ಹಲವರು ನಟರು ಬೇರೆ ಬೇರೆ ರೀತಿಯಲ್ಲಿ ಹೂಡಿಕೆ ಮಾಡ್ತಾರೆ. ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಟಾಲಿವುಡ್‌ನ ಹಲವು ಸ್ಟಾರ್‌ಗಳು ಹೈದರಾಬಾದ್‌ನಲ್ಲಿ ತಮ್ಮದೇ ಆದ ರೆಸ್ಟೋರೆಂಟ್‌ಗಳನ್ನು ನಡೆಸುತ್ತಿದ್ದಾರೆ.

ರಕುಲ್ ಪ್ರೀತ್ ಸಿಂಗ್: ಕನ್ನಡದ ಗಿಲ್ಲಿ ಸಿನಿಮಾದ ಮೂಲಕ ನಟನೆಗೆ ಬಂದು ಟಾಲಿವುಡ್‌ನಲ್ಲಿ ದೊಡ್ಡ ಸ್ಟಾರ್ ಆಗಿ ಮೆರೆದ ರಕುಲ್ ಪ್ರೀತ್, ಮಾಧಾಪುರದಲ್ಲಿ ‘ಆರಂಭ’ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದಾರೆ.
ನಾಗ ಚೈತನ್ಯ: ಹೈದರಾಬಾದ್‌ನ ಜೂಬ್ಲೀ ಹಿಲ್ಸ್‌ನಲ್ಲಿ ‘ಷೋಯು’ ಎಂಬ ರೆಸ್ಟೋರೆಂಟ್ ಅನ್ನು ನಾಗ ಚೈತನ್ಯ ನಡೆಸುತ್ತಿದ್ದಾರೆ. ಈ ಮೂಲಕ ಅವರ ತಂದೆ ನಾಗಾರ್ಜುನ ಅವರ ವ್ಯಾಪಾರ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.
ವಿಜಯ್ ದೇವರಕೊಂಡ, ಆನಂದ್ ದೇವರಕೊಂಡ: ಈ ಸಹೋದರರು ಕಾಜಗೂಡದಲ್ಲಿ ‘ಗುಡ್ ವೈಬ್ಸ್ ಓನ್ಲಿ ಕೆಫೆ’ ಎಂಬ ರೆಸ್ಟೋರೆಂಟ್ ಹೊಂದಿದ್ದಾರೆ. ವಿಜಯ್ ರೌಡಿ ವೇರ್ಸ್ ಎಂಬ ಬಟ್ಟೆ ವ್ಯಾಪಾರವನ್ನು ಕೂಡ ನಡೆಸುತ್ತಿದ್ದಾರೆ. ಚಲನಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ, ತಮ್ಮದೇ ಆದ ಯಶಸ್ವಿ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅವರು AVD ಥಿಯೇಟರ್ ಮಲ್ಟಿಪ್ಲೆಕ್ಸ್‌ನ ಸಹ-ಮಾಲೀಕರಾಗಿದ್ದಾರೆ, ಪ್ರಾದೇಶಿಕ ಡಿಜಿಟಲ್ ಪ್ಲಾಟ್‌ಫಾರ್ಮ್ AHA ಅನ್ನು ಮುನ್ನಡೆಸುತ್ತಾರೆ ಮತ್ತು ಚಲನಚಿತ್ರ ನಿರ್ಮಾಣ ಕಂಪನಿ ಕಿಂಗ್ ಆಫ್ ದಿ ಹಿಲ್ ಅನ್ನು ನೋಡಿಕೊಳ್ಳುತ್ತಾರೆ.
ಮಹೇಶ್ ಬಾಬು, ನಮ್ರತಾ ಶಿರೋಡ್ಕರ್: ಈ ಜೋಡಿ ಬಂಜಾರಾ ಹಿಲ್ಸ್‌ನಲ್ಲಿ ‘AN ರೆಸ್ಟೋರೆಂಟ್’ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಇದಲ್ಲದೆ ಇನ್ನೂ ಹಲವು ವ್ಯಾಪಾರಗಳಲ್ಲಿ ಬಂಡವಾಳ ಹೂಡಿದ್ದಾರೆ. ಏಎಂಬಿ, ಎಂಬಿ ಕ್ಲಾತ್ಸ್, ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ತಮ್ಮದೇ ಆದ ನಿರ್ಮಾಣ ಸಂಸ್ಥೆಯಾದ ಜಿ. ಮಹೇಶ್ ಬಾಬು ಎಂಟರ್‌ಟೈನ್‌ಮೆಂಟ್ಸ್‌ನ ಮಾಲೀಕರಾಗಿದ್ದಾರೆ. ಇದರ ಜೊತೆಗೆ, ಅವರು ಹೈದರಾಬಾದ್‌ನಲ್ಲಿರುವ ಐಕಾನಿಕ್ 'ಎಎಂಬಿ' ಥಿಯೇಟರ್‌ನ ಹೆಮ್ಮೆಯ ಮಾಲೀಕರಾಗಿದ್ದಾರೆ. ಬೆಂಗಳೂರಿನಲ್ಲಿ ಹೊಸ ಥಿಯೇಟರ್‌ನೊಂದಿಗೆ ಅವರು ಎಎಂಬಿ ಬ್ರ್ಯಾಂಡ್ ಅನ್ನು ಸಕ್ರಿಯವಾಗಿ ವಿಸ್ತರಿಸುತ್ತಿದ್ದಾರೆ.
ಅಕ್ಕಿನೇನಿ ನಾಗಾರ್ಜುನ: ನಾಗಾರ್ಜುನ ಜೂಬ್ಲೀ ಹಿಲ್ಸ್‌ನಲ್ಲಿ ‘N ಗ್ರಿಲ್ & N ಏಷ್ಯನ್’ ಎಂಬ ರೆಸ್ಟೋರೆಂಟ್ ಹೊಂದಿದ್ದಾರೆ. ಇದರ ಜೊತೆಗೆ ಹಲವು ವ್ಯಾಪಾರಗಳಲ್ಲಿ ಬಂಡವಾಳ ಹೊಂಡಿದ್ದಾರೆ.
ಅಲ್ಲು ಅರ್ಜುನ್: ಜೂಬ್ಲೀ ಹಿಲ್ಸ್‌ನಲ್ಲಿ ‘ಬಫೆಲೋ ವೈಲ್ಡ್ ವಿಂಗ್ಸ್’ ಎಂಬ ರೆಸ್ಟೋರೆಂಟ್‌ಗೆ ಅಲ್ಲು ಅರ್ಜುನ್ ಒಡೆಯ. ಇದರ ಜೊತೆಗೆ ಇನ್ನೂ ಹಲವು ವ್ಯಾಪಾರಗಳ ಮೇಲೆ ಗಮನ ಹರಿಸಿದ್ದಾರೆ. ಈಗಾಗಲೇ ಏಏಏ ಥಿಯೇಟರ್ ಗೆ ಕೂಡ ಮಾಲೀಕರಾಗಿದ್ದಾರೆ.
ಸಂದೀಪ್ ಕಿಶನ್: ಜೂಬ್ಲೀ ಹಿಲ್ಸ್‌ನಲ್ಲಿ ‘ವಿವಾಹ ಭೋಜನಂಬು’ ಎಂಬ ತೆಲುಗು ರೆಸ್ಟೋರೆಂಟ್ ಅನ್ನು ಸಂದೀಪ್ ಕಿಶನ್ ಆರಂಭಿಸಿದ್ದಾರೆ. ಹಲವು ಕಡೆ ಈ ಬ್ರ್ಯಾಂಡ್‌ನ ಶಾಖೆಗಳಿವೆ.
ರಾಣಾ ದಗ್ಗುಬಾಟಿ: ಜೂಬ್ಲೀ ಹಿಲ್ಸ್‌ನಲ್ಲಿ ‘ಸ್ಯಾಂಕ್ಚುರಿ ಬಾರ್ & ಕಿಚನ್’ ಎಂಬ ದುಬಾರಿ ರೆಸ್ಟೋರೆಂಟ್‌ಗೆ ರಾಣಾ ದಗ್ಗುಬಾಟಿ ಒಡೆಯ. ಅಪ್ಪ ಪ್ರೊಡಕ್ಷನ್ ಹೌಸ್, ಸ್ಟುಡಿಯೋಸ್‌ನಲ್ಲಿ ಇದ್ದರೆ, ರಾಣಾ ಬೇರೆ ಬೇರೆ ವ್ಯಾಪಾರಗಳ ಮೇಲೆ ಗಮನ ಹರಿಸಿದ್ದಾರೆ.
ಹೀಗೆ ಹೀರೋ-ಹೀರೋಯಿನ್‌ಗಳು ತೆರೆಯ ಮೇಲೆ ನಟ-ನಟಿಯರಾಗಿ ಮಿಂಚುತ್ತಾ, ತೆರೆಯ ಹಿಂದೆ ಫುಡ್ ಬಿಸಿನೆಸ್‌ನಲ್ಲೂ ಗೆಲ್ಲುತ್ತಿದ್ದಾರೆ. ಎರಡೂ ಕಡೆಯಿಂದ ಭರ್ಜರಿ ದುಡ್ಡು ಮಾಡುತ್ತಾರೆ.