MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Engineer's Day Special
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Business
  • Finance Investment ಪೋಷಕರೇ, ಹದಿಹರೆಯದ ಮಕ್ಕಳಿಗೆ ಹಣಕಾಸಿನ ಪಾಠ ಕಲಿಸಲು ಹೀಗೆ ಮಾಡಿ

Finance Investment ಪೋಷಕರೇ, ಹದಿಹರೆಯದ ಮಕ್ಕಳಿಗೆ ಹಣಕಾಸಿನ ಪಾಠ ಕಲಿಸಲು ಹೀಗೆ ಮಾಡಿ

ಹದಿಹರೆಯದ ಮಕ್ಕಳಿಗೆ ಹಣಕಾಸಿನ ಪಾಠ ಕಲಿಸಲು ಸ್ಟ್ರೀಕಿಂಗ್ ಆ್ಯಪ್‌ಗಳು, ಮೈನರ್ ಡಿಮ್ಯಾಟ್ ಖಾತೆಗಳ ಮೂಲಕ ಹೂಡಿಕೆ, ಮತ್ತು ಫ್ರಾಕ್ಷನಲ್ ಓನರ್‌ಶಿಪ್‌ನಂತಹ ಆಧುನಿಕ ವಿಧಾನಗಳನ್ನು ಬಳಸಬಹುದು. ಫ್ಯಾಮ್‌ ಪೇ, ಯುಪಿಐ ಸರ್ಕಲ್‌ನಂತಹ ಸಾಧನಗಳು ಸುರಕ್ಷಿತವಾಗಿ ಹಣದ ನಿರ್ವಹಣೆಯನ್ನು ಕಲಿಸಲು ಸಹಾಯ ಮಾಡುತ್ತವೆ.

2 Min read
Author : Kannadaprabha News
Published : Aug 25 2026, 02:38 PM IST
Share this Photo Gallery
  • FB
  • TW
  • Linkdin
  • Whatsapp
16
1. ಸ್ಟ್ರೀಕಿಂಗ್‌ ಆ್ಯಪ್‌ಗಳು
Image Credit : Gemini

1. ಸ್ಟ್ರೀಕಿಂಗ್‌ ಆ್ಯಪ್‌ಗಳು

ಟೀನ್‌ ಮಕ್ಕಳಿಗೆ ಹಣಕಾಸು ಪಾಠ ಹೇಳಿಕೊಡಲು ಈ ಕಾಲದ ಪೋಷಕರು ಬಳಸುತ್ತಿರುವ ಆ್ಯಪ್ ಇದು. ಮಕ್ಕಳು ಮೊಬೈಲ್‌ನಲ್ಲಿ ಈ ಆ್ಯಪ್ ಮೂಲಕ ಖರ್ಚುಗಳನ್ನು ದಾಖಲಿಸಬಹುದು. ‘ಸ್ಟ್ರೀಕ್ - ಟೀನ್ಸ್ ಬ್ಯಾಂಕಿಂಗ್ ಆ್ಯಪ್‌’ 8 ರಿಂದ 21 ವರ್ಷದ ಟೀನೇಜರ್‌ಗಳಿಗಾಗಿಯೇ ಇರುವ ಒಂದು ಅಪ್ಲಿಕೇಶನ್‌. ಇದರಲ್ಲಿ ಮಕ್ಕಳು ನಿತ್ಯ ಫೈನಾನ್ಶಿಯಲ್‌ ಗುರಿಯನ್ನು ನಮೂದಿಸಬೇಕು.

ಉಳಿತಾಯ ದಾಖಲಿಸಬೇಕು. ಪ್ರತಿಯಾಗಿ ಇದರಲ್ಲಿ ರಿವಾರ್ಡ್‌ಗಳು ಪಾಯಿಂಟ್‌ಗಳು ಸಿಗುತ್ತವೆ. ‘ಜಾರ್‌ ಆ್ಯಪ್‌’ ಗೇಮಿಂಗ್‌ ರೀತಿ ಹುಡುಗರಿಗೆ ಉಳಿತಾಯದ ಪಾಠ ಕಲಿಸುತ್ತದೆ. ಇದರಲ್ಲಿ ನಿತ್ಯ 10 ರು., 20 ರು. ಉಳಿತಾಯ ಮಾಡುತ್ತ ಹೋದರೆ ಕ್ಯಾಶ್‌ಬ್ಯಾಕ್‌ ಸೌಲಭ್ಯವೂ ಸಿಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
2. ಹೂಡಿಕೆಯ ಪಾಠ
Image Credit : Gemini

2. ಹೂಡಿಕೆಯ ಪಾಠ

18ಕ್ಕಿಂತ ಕಡಿಮೆ ವಯಸ್ಸಿನವರು ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಖಾತೆ ತೆರೆಯಲು ಸಾಧ್ಯವಿಲ್ಲ. ಪೋಷಕರ ಮೂಲಕ ಮೈನರ್ ಡಿಮ್ಯಾಟ್ ಅಕೌಂಟ್‌ ತೆರೆಯಬಹುದು. ಝೆರೋದಾ, ಗ್ರೋನಂಥಾ ಆ್ಯಪ್‌ಗಳಲ್ಲಿ ದೊಡ್ಡವರ ಪ್ಯಾನ್‌ ಕಾರ್ಡ್‌ ಬಳಸಿ ಅಕೌಂಟ್‌ ಓಪನ್ ಮಾಡಬಹುದು. ಮ್ಯೂಚುಯಲ್ ಫಂಡ್‌ಗಳಲ್ಲಿ ತಿಂಗಳಿಗೆ ರು.100 ಅಥವಾ ರು.500 ರಂತೆ ಮೈನರ್ ಫಂಡ್ ಎಸ್‌ಐಪಿ ಆರಂಭಿಸಬಹುದು. ಗೂಗಲ್, ಆ್ಯಪಲ್‌ನಂತಹ ಕಂಪನಿಗಳ ಷೇರುಗಳಲ್ಲಿ ಮೈನರ್ ಖಾತೆಗಳ ಮೂಲಕ ಹೂಡಿಕೆ ಮಾಡುವ ಅವಕಾಶವಿದೆ

Related Articles

Related image1
Shivamogga ಉಪ್ಪಿನಕಾಯಿ ಬ್ಯುಸಿನೆಸ್; ದಿನಕ್ಕೆ 500-600 kg ಸೇಲ್, 3-4 ಕೋಟಿ ಆದಾಯ
Related image2
ಅಂದು ಮನೆಗಾಗಿ 1 ಹಸು ಖರೀದಿ, ಇಂದು 100 ಎಮ್ಮೆಗಳ ಒಡತಿ ಕಲಬುರಗಿ ಮಹಿಳೆ; Dairy Farming
36
3. ಫ್ರಾಕ್ಷನಲ್‌ ಓನರ್‌ಶಿಪ್‌
Image Credit : AI

3. ಫ್ರಾಕ್ಷನಲ್‌ ಓನರ್‌ಶಿಪ್‌

ಆನ್‌ಲೈನ್‌ ಖರೀದಿಗೆ ಮುಗಿಬೀಳುವವರಿಗೆ, ಅವರು ಖರೀದಿ ಮಾಡುವ ಕಂಪನಿಗಳಲ್ಲೇ ಅವರಿಗೆ ಇನ್‌ವೆಸ್ಟ್‌ ಮಾಡಲು ಪ್ರೋತ್ಸಾಹಿಸಿದರೆ ಎರಡು ಉಪಯೋಗ. ಒಂದು ಹೂಡಿಕೆ ಸಾಧ್ಯವಾಗುತ್ತದೆ, ಎರಡನೆಯದು ಮಕ್ಕಳು ಜಂಕ್‌ಫುಡ್‌, ಆನ್‌ಲೈನ್‌ ಶಾಪಿಂಗ್‌ ಖಯಾಲಿಗೆ ಬ್ರೇಕ್‌ ಹಾಕಿ ಅದನ್ನೇ ಇನ್‌ವೆಸ್ಟ್‌ಮೆಂಟ್‌ ಮಾಡಲು ಬಳಸುವ ಸಾಧ್ಯತೆ ಇದೆ. ಸ್ವಿಗ್ಗಿ, ಜೊಮಾಟೋ, ನೈಕಿ ಮೊದಲಾದ ಕಂಪನಿಗಳ ಷೇರುಗಳನ್ನು ಖರೀದಿಸಿ ಅವರನ್ನು ಫ್ರಾಕ್ಷನಲ್‌ ಓನರ್‌ಶಿಪ್‌ನಡಿ ಅವರನ್ನು ಕಂಪನಿಯ ಮಾಲೀಕರನ್ನಾಗಿ ಮಾಡಬಹುದು.

46
4. ಗಳಿಕೆಯನ್ನು ಹೂಡಿಕೆ ಮಾಡಿ
Image Credit : X

4. ಗಳಿಕೆಯನ್ನು ಹೂಡಿಕೆ ಮಾಡಿ

ಈ ಕಾಲದ ಟೀನ್‌ ಹುಡುಗರಿಗೆ ವೀಡಿಯೋ ಎಡಿಟಿಂಗ್, ಕೋಡಿಂಗ್, ಗ್ರಾಫಿಕ್ ಡಿಸೈನ್‌ಗಳಂಥಾ ಕೌಶಲ್ಯಗಳಿರುತ್ತವೆ. ಅವುಗಳನ್ನು ಬಳಸಿ ಸಣ್ಣ ಪುಟ್ಟ ಮೊತ್ತವನ್ನು ಹೇಗೆ ಗಳಿಸಬಹುದು ಅಂತ ಕಲಿಸಬಹುದು. ಅದರಿಂದ ಬರುವ ಹಣ ಇನ್‌ವೆಸ್ಟ್‌ಮೆಂಟ್‌ಗಳಿಗೆ ಹೋಗುವಂತೆ ನಿರ್ವಹಣೆ ಮಾಡಬಹುದು.

56
5. ಹಣಕಾಸಿನ ನಿರ್ವಹಣೆ ಕಲಿಸಿ
Image Credit : Asianet News

5. ಹಣಕಾಸಿನ ನಿರ್ವಹಣೆ ಕಲಿಸಿ

ಟೀನ್‌ಗಳಿಗೆಂದೇ ಫ್ಯಾಮ್‌ ಪೇ ಆ್ಯಪ್ ಇದೆ. ಪೋಷಕರ ಆಧಾರ್ ಅಥವಾ ಪ್ಯಾನ್ ಕಾರ್ಡ್ ಬಳಸಿ ಪೇರೆಂಟ್ ಕೆವೈಸಿ ಪೂರ್ಣಗೊಳಿಸಿದರೆ ಇದರಲ್ಲಿ ಯುಪಿಐ ನಿರ್ವಹಣೆಯನ್ನು ಮಾಡಬಹುದು. ಇದಕ್ಕೆ ಬ್ಯಾಂಕ್‌ ಅಕೌಂಟ್‌ನ ಅಗತ್ಯವೂ ಇಲ್ಲ. ಪೋಷಕರು ಸಣ್ಣಮೊತ್ತವನ್ನು ಮಕ್ಕಳ ಫೋನ್‌ ನಂಬರ್‌ಗೆ ಹಾಕಿದರೆ ಅವರು ಅದನ್ನು ಸಾಮಾನ್ಯ ಯುಪಿಐನಂತೆ ಬಳಸಬಹುದು. ಜೂಜು, ಬೆಟ್ಟಿಂಗ್ ಅಥವಾ ವಯಸ್ಕರ ವೆಬ್‌ಸೈಟ್‌ಗಳಲ್ಲಿ ಈ ಕಾರ್ಡ್/ ಯುಪಿಐ ಕೆಲಸ ಮಾಡದಂತೆ ಲಾಕ್ ಮಾಡಲಾಗಿರುತ್ತದೆ. ಹೀಗಾಗಿ ಹೆಚ್ಚು ರಿಸ್ಕ್‌ ಇರುವುದಿಲ್ಲ.

66
ಯುಪಿಐ ಸರ್ಕಲ್‌
Image Credit : Asianet News

ಯುಪಿಐ ಸರ್ಕಲ್‌

ಇದರ ಜೊತೆಗೆ ಪೋಷಕರು ತಮ್ಮ ಭೀಮ್, ಗೂಗಲ್ ಪೇ ಅಥವಾ ಫೋನ್ ಪೇ ಆಪ್‌ಗಳಲ್ಲಿ ಯುಪಿಐ ಸರ್ಕಲ್‌ ಅನ್ನು ಆಯ್ಕೆ ಮಾಡಿ ಮಕ್ಕಳನ್ನು ಸೆಕೆಂಡರಿ ಯೂಸರ್‌ ಆಗಿ ಸೇರಿಸಬಹುದು. ಇದರಲ್ಲಿ ಪೋಷಕರು ಫೋನ್‌ನಲ್ಲಿ ಅನುಮತಿ ನೀಡಿದರೆ ಮಾತ್ರ ಹಣ ಕಟ್‌ ಆಗುತ್ತದೆ. ಅಥವಾ ಇಷ್ಟು ಹಣವಷ್ಟೇ ಖರ್ಚು ಮಾಡಬಹುದು ಅಂತ ಲಿಮಿಟ್‌ ಫಿಕ್ಸ್‌ ಮಾಡಿದರೆ ಮಕ್ಕಳು ಆ ಲಿಮಿಟ್‌ವರೆಗೆ ಪಾವತಿ ಮಾಡಬಹುದು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಹೂಡಿಕೆ
ಜೆನ್ ಝಡ್
ಹಣ (Hana)
ಉಳಿತಾಯ ಯೋಜನೆ

Latest Videos
Recommended Stories
Recommended image1
ಭಾರತದ ಮೊದಲ ಎಫ್‌1 ಡ್ರೈವರ್‌ ಕಾರ್ತಿಕೇಯನ್‌ ಈಗ ಬೆಂಗಳೂರಿನಲ್ಲಿ 100 ಕೋಟಿ ರೂ ಮೌಲ್ಯದ ಕಂಪನಿ ಮಾಲೀಕ!
Recommended image2
HDFC ಬ್ಯಾಂಕ್‌ನಲ್ಲಿ ನಾಯಕತ್ವ ಬದಲಾವಣೆ, 35 ವರ್ಷಗಳ ಅನುಭವದ ಜಿಮ್ಮಿ ಟಾಟಾಗೆ ಪ್ರಮುಖ ಹೊಣೆ! ಯಾರಿದು?
Recommended image3
ನಿಮ್ಮ ಎಲ್ಲಾ ಹಣವನ್ನು ಒಂದೇ ಬ್ಯಾಂಕಿನಲ್ಲಿ ಇಡಬೇಡಿ, 30ಕ್ಕೂ ಮುನ್ನ ಹಣ ಉಳಿಸಿ, ಬೆಂಗಳೂರು ಸಿಎ ಕೊಟ್ಟ ಸಲಹೆ
Related Stories
Recommended image1
Shivamogga ಉಪ್ಪಿನಕಾಯಿ ಬ್ಯುಸಿನೆಸ್; ದಿನಕ್ಕೆ 500-600 kg ಸೇಲ್, 3-4 ಕೋಟಿ ಆದಾಯ
Recommended image2
ಅಂದು ಮನೆಗಾಗಿ 1 ಹಸು ಖರೀದಿ, ಇಂದು 100 ಎಮ್ಮೆಗಳ ಒಡತಿ ಕಲಬುರಗಿ ಮಹಿಳೆ; Dairy Farming
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved