MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • RBIನಿಂದ ಹೊಸ ಹೆಜ್ಜೆ; ಬರಲಿವೆ 10 & 20 ರೂ. ಮುಖಬೆಲೆಯ ವಿಶೇಷ ಪ್ಲಾಸ್ಟಿಕ್ ನೋಟುಗಳು

RBIನಿಂದ ಹೊಸ ಹೆಜ್ಜೆ; ಬರಲಿವೆ 10 & 20 ರೂ. ಮುಖಬೆಲೆಯ ವಿಶೇಷ ಪ್ಲಾಸ್ಟಿಕ್ ನೋಟುಗಳು

ನಕಲಿ ನೋಟು ಹಾವಳಿ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರಲು ಮುಂದಾಗಿದೆ. ಆರಂಭದಲ್ಲಿ 10 ಮತ್ತು 20 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗುವುದು.

2 Min read
Author : Mahmad Rafik
Published : Jul 18 2026, 12:32 PM IST
Share this Photo Gallery
  • FB
  • TW
  • Linkdin
  • Whatsapp
17
ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳು
Image Credit : X

ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳು

ಭಾರತೀಯ ರಿಸರ್ವ್ ಬ್ಯಾಂಕ್ ಪ್ಲಾಸ್ಟಿಕ್ ಅಥವಾ ಪಾಲಿಮರ್ ನೋಟುಗಳನ್ನು ಚಲಾವಣೆಗೆ ತೆಗೆದುಕೊಂಡು ಬರಲು ಮುಂದಾಗಿದ್ದು, ಈ ಸಂಬಂಧ ಟೆಂಡರ್ ಆಹ್ವಾನಿಸಿದೆ. ಪ್ಲಾಸ್ಟಿಕ್ ನೋಟುಗಳಿಗೆ ಬೇಕಾದ ಹಾಳೆಗಳ ಪೂರೈಕೆಗೆ ಖಾಸಗಿ ಕಂಪನಿಗಳಿಗೆ ಆರ್‌ಬಿಐ ಆಹ್ವಾನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
10 ಮತ್ತು 20 ರೂಪಾಯಿ ಮುಖಬೆಲೆಯ ನೋಟುಗಳು
Image Credit : Asianet News

10 ಮತ್ತು 20 ರೂಪಾಯಿ ಮುಖಬೆಲೆಯ ನೋಟುಗಳು

ಆರಂಭದಲ್ಲಿ 10 ಮತ್ತು 20 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಣ ಮಾಡಲಾಗುವುದು. ಆ ಬಳಿಕ ಹಂತ ಹಂತವಾಗಿ ಇನ್ನುಳಿದ ನೋಟುಗಳ ಮುದ್ರಣಕ್ಕೆ ಆರ್‌ಬಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಈ ಹೊಸ ಪ್ಲಾಸ್ಟಿಕ್ ನೋಟುಗಳು ಹೇಗಿರುತ್ತವೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಹೊರ ಬಂದಿಲ್ಲ. ನಕಲಿ ನೋಟುಗಳ ಹಾವಳಿ ತಡೆಯಲು ಅತ್ಯಂತ ಗುಣಮಟ್ಟದ ಪಾಲಿಮರ್ ನೋಟುಗಳನ್ನು ಚಲಾವಣೆಗೆ ತರಲು ಆರ್‌ಬಿಐ ಪ್ಲಾನ್ ಮಾಡಿಕೊಂಡಿದೆ.

Related Articles

Related image1
ಮಂಗಳೂರು: ಉಪ್ಪಿನಂಗಡಿಯಲ್ಲಿ ಖೋಟಾನೋಟು ದಂಧೆ ಪತ್ತೆ, ಪ್ರಿಂಟಿಂಗ್ ಮೆಷಿನ್, RBI ಸೀಲ್ ಸಹಿತ 7 ಮಂದಿ ಅರೆಸ್ಟ್!
Related image2
RBI: ಗೋಕಾಕ ಮಹಾಲಕ್ಷ್ಮಿ ಬ್ಯಾಂಕ್‌ ಲೈಸೆನ್ಸ್‌ ರದ್ದು, ದಿವಾಳಿಗೆ ಕಾರಣವೇನು? ನಿಮ್ಮ ಹಣ ಮರಳಿ ಬರುತ್ತಾ?
37
ನಾಲ್ಕು ಹಂತಗಳ ಪರಿಶೀಲನೆ ಸಾಧ್ಯತೆ
Image Credit : Asianet News

ನಾಲ್ಕು ಹಂತಗಳ ಪರಿಶೀಲನೆ ಸಾಧ್ಯತೆ

ರಿಸರ್ವ್ ಬ್ಯಾಂಕ್ ಅಧಿಕಾರಿಗಳ ಪ್ರಕಾರ, ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸುವ ನೀತಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಾಲ್ಕು ಹಂತಗಳ ಪರಿಶೀಲನೆ ಬಳಿಕವಷ್ಟೇ ಪಾಲಿಮರ್ ನೋಟುಗಳನ್ನು ಮುದ್ರಣ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ಪಾಲಿಮರ್ ನೋಟ್ ಬರೋದು ಖಚಿತ ಎಂಬವುದು ಸ್ಪಷ್ಟವಾಗಿದೆ.

47
ಮುದ್ರಣಕ್ಕೂ ಮುಂಚೆ ಯಾವೆಲ್ಲಾ ಅಂಶಗಳ ಪರಿಗಣನೆ?
Image Credit : Asianet News

ಮುದ್ರಣಕ್ಕೂ ಮುಂಚೆ ಯಾವೆಲ್ಲಾ ಅಂಶಗಳ ಪರಿಗಣನೆ?

ಪಾಲಿಮರ್ ನೋಟ್‌ ಚಲಾವಣೆ ಪ್ರಕ್ರಿಯೆ ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಮುದ್ರಣಕ್ಕೂ ಮುನ್ನ ನೋಟುಗಳು ದೇಶದ ಹವಾಮಾನ, ಬಳಕೆ ವಿಧಾನ, ಸಾರ್ವಜನಿಕರ ಅನುಕೂಲ, ಬ್ಯಾಂಕ್‌ಗಳ ಅಗತ್ಯತೆ ಮತ್ತು ಎಟಿಎಂ ಸೌಲಭ್ಯ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಗಣಿಸಲಾಗುವುದು ಎಂದು ವರದಿಯಾಗಿದೆ. ಈ ನೋಟುಗಳು ಹಗರು ಮತ್ತು ತೆಳುವಾಗಿದ್ದು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಂತೆ ಕಠಿಣವಾಗಿರಲ್ಲ.

57
ನಕಲಿ ನೋಟು ಸಮಸ್ಯೆ ಶೂನ್ಯ ಸಾಧ್ಯತೆ
Image Credit : Asianet News

ನಕಲಿ ನೋಟು ಸಮಸ್ಯೆ ಶೂನ್ಯ ಸಾಧ್ಯತೆ

2012ರಲ್ಲಿ ಮೈಸೂರು, ಜೈಪುರ, ಭುವನೇಶ್ವರ ಮತ್ತು ಶಿಮ್ಲಾ ಸೇರಿದಂತೆ ಕೆಲವು ನಗರಗಳಲ್ಲಿ ಸುಮಾರು 1 ಬಿಲಿಯನ್ ಪಾಲಿಮರ್‌ನ 10 ರೂ. ಮುಖಬೆಲೆಯ ನೋಟುಗಳ ಪರೀಕ್ಷೆಗೆ ಭಾರತ ಸರ್ಕಾರ ಅನುಮೋದನೆ ನೀಡಿತ್ತು. ಆದ್ರೆ ತಾಂತ್ರಿಕ ಕಾರಣಗಳಿಂದ ಈ ಪರೀಕ್ಷೆ ಮುಂದುವರಿಯಲಿಲ್ಲ. ಈ ಹೊಸ ಪಾಲಿಮರ್ ನೋಟುಗಳಿಂದ, ಹರಿಯುವಿಕೆ, ಗಲೀಜು ಆಗುವಿಕೆ ಸಮಸ್ಯೆಗಳು ದೂರವಾಗಲಿವೆ. ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ನಕಲಿ ನೋಟು ಸಮಸ್ಯೆಯೂ ನಿವಾರಣೆಯಾಗಲಿದೆ.

67
ಸುಧಾರಿತ ವೈಶಿಷ್ಟ್ಯ
Image Credit : Asianet News

ಸುಧಾರಿತ ವೈಶಿಷ್ಟ್ಯ

ಮೈಕ್ರೋ-ಆಪ್ಟಿಕ್ ಹೊಲೊಗ್ರಾಮ್ ಮತ್ತು ವಿಶೇಷ ಶಾಯಿಯಂತಹ ಸುಧಾರಿತ ವೈಶಿಷ್ಟ್ಯಗಳನ್ನು ಪಾಲಿಮರ್ ನೋಟುಗಳಲ್ಲಿ ಬಳಸಲಾಗುತ್ತದೆ. ಕಾಗದದ ನೋಟುಗಳಿಗೆ ಹೋಲಿಸಿದರೆ ಅವುಗಳ ಉತ್ಪಾದನಾ ವೆಚ್ಚವೂ ಕಡಿಮೆ ಇರುತ್ತದೆ. ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್ ಮತ್ತು ನ್ಯೂಜಿಲೆಂಡ್‌ನಂತಹ ಅನೇಕ ದೇಶಗಳಲ್ಲಿ ಪಾಲಿಮರ್ ನೋಟುಗಳು ಹಲವು ವರ್ಷಗಳಿಂದ ಚಲಾವಣೆಯಲ್ಲಿವೆ.

77
ಮುದ್ರಣಾವೆಚ್ಚ ಏರಿಕೆ
Image Credit : Asianet News

ಮುದ್ರಣಾವೆಚ್ಚ ಏರಿಕೆ

ರಿಸರ್ವ್ ಬ್ಯಾಂಕ್ ವರದಿ ಪ್ರಕಾರ, ಈ ಹಿಂದಿನ ವರ್ಷ ನೋಟು ಮುದ್ರಣಾ ವೆಚ್ಚ ₹5,101.4 ಕೋಟಿಗಳಿಂದ ₹6,372.8 ಕೋಟಿಗೆ ಏರಿಕೆಯಾಗಿತ್ತು. ಹೊಸ ನೋಟುಗಳ ಬೇಡಿಕೆ ಹೆಚ್ಚಾದ ಹಿನ್ನೆಲೆ ಮುದ್ರಣಾವೆಚ್ಚ ಏರಿಕೆಯಾಗಿತ್ತು. ಆರ್ಥಿಕ ವರ್ಷ 2025ರಲ್ಲಿ ಹಳೆ/ಕೊಳಕು/ಹರಿದ ಸುಮಾರು 23.8 ಬಿಲಿಯನ್ ನೋಟುಗಳನ್ನು ವಿಲೇವಾರಿ ಮಾಡಲಾಗಿತ್ತು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಹಣ (Hana)
ಆರ್‌ಬಿಐ

Latest Videos
Recommended Stories
Recommended image1
ಗ್ರಾಹಕರಿಗೆ ಸೈಲೆಂಟ್‌ ಆಗಿ ಶಾಕ್ ನೀಡಿದ ಏರ್‌ಟೆಲ್: ಅತ್ಯಂತ ಜನಪ್ರಿಯ ಮೊಬೈಲ್‌ ರಿಚಾರ್ಜ್‌ ಪ್ಲಾನ್ ರದ್ದು
Recommended image2
ಲಾಲು ಯಾದವ್ ಆರೋಗ್ಯ ಸ್ಥಿತಿ ಗಂಭೀರ, IGIMS ಆಸ್ಪತ್ರೆಗೆ ದಾಖಲು
Recommended image3
Jio Q1 Results: ಜಿಯೋಗೆ ಬಂಪರ್ ಲಾಭ! ಗ್ರಾಹಕರ ಸಂಖ್ಯೆ ಭಾರೀ ಏರಿಕೆ, ಮೊದಲ ತ್ರೈಮಾಸಿಕದಲ್ಲಿ ಗಳಿಸಿದ್ದೆಷ್ಟು?
Related Stories
Recommended image1
ಮಂಗಳೂರು: ಉಪ್ಪಿನಂಗಡಿಯಲ್ಲಿ ಖೋಟಾನೋಟು ದಂಧೆ ಪತ್ತೆ, ಪ್ರಿಂಟಿಂಗ್ ಮೆಷಿನ್, RBI ಸೀಲ್ ಸಹಿತ 7 ಮಂದಿ ಅರೆಸ್ಟ್!
Recommended image2
RBI: ಗೋಕಾಕ ಮಹಾಲಕ್ಷ್ಮಿ ಬ್ಯಾಂಕ್‌ ಲೈಸೆನ್ಸ್‌ ರದ್ದು, ದಿವಾಳಿಗೆ ಕಾರಣವೇನು? ನಿಮ್ಮ ಹಣ ಮರಳಿ ಬರುತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved