ಟಾಟಾ ಸಮೂಹದ TCS ಕಂಪನಿಗೆ 53 ಸಾವಿರ ಕೋಟಿ ನಷ್ಟ; ಇವರ ಮೇಲೆ ಪರಿಣಾಮ ಬೀರುತ್ತಾ?
TCS employees: ಟಿಸಿಎಸ್ ನೌಕರರಿಗೆ 2025ರಲ್ಲಿ ಸಂಬಳ ಏರಿಕೆಯಾಗಲಿದೆ. ಆದರೆ, ಟಿಸಿಎಸ್ ಸಂಸ್ಥೆ ಸಾವಿರಾರು ಕೋಟಿ ರೂ.ಗಳಷ್ಟು ನಷ್ಟವನ್ನು ಅನುಭವಿಸಿದೆ.

ಟಾಟಾ ಸಮೂಹದ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS- Tata Consultancy Services) ತನ್ನ ಹೊಸ ನೀತಿಗಳನ್ನು ಪ್ರಕಟಿಸಿದೆ. ಹೊಸ ಪಾಲಿಸಿಯಲ್ಲಿ ಟಿಸಿಎಸ್ ನೌಕರರ ಸಂಬಳ ಏರಿಕೆ ಮಾಡುವ ಕುರಿತು ಮಾಹಿತಿ ನೀಡಲಾಗಿದೆ.
ಭಾರತದ ಅತಿದೊಡ್ಡ ಐಟಿ ಸಂಸ್ಥೆಯಾಗಿರುವ ಟಿಸಿಎಸ್, ಮಾರ್ಚ್-2025ರಲ್ಲಿ ಸಂಬಳ ಏರಿಕೆ ಮಾಡಲಿದೆ. ಹೊಸ ಸಂಬಳ ಏಪ್ರಿಲ್-2025ರಿಂದ ಅನ್ವಯವಾಗಲಿವೆ. ಈ ಎಲ್ಲಾ ಬೆಳವಣಿಗೆಳ ನಡುವೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಾವಿರಾರು ಕೋಟಿ ರೂ.ಗಳಷ್ಟು ನಷ್ಟವನ್ನು ಅನುಭವಿಸಿದೆ.
ಕಳೆದ ವಾರದ ವಹಿವಾಟಿನಲ್ಲಿ ಟಿಸಿಎಸ್‌ನ ಮಾರುಕಟ್ಟೆ ಮೌಲ್ಯಮಾಪನವು 53,185.89 ಕೋಟಿ ರೂ.ಗಳಷ್ಟು ಕುಸಿದಿದ್ದು, 13.7 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಇದು ಟಿಸಿಎಸ್ ಕಂಪನಿಯ ಅತಿ ದೊಡ್ಡ ಪ್ರಮಾಣದ ನಷ್ಟ ಎಂದು ವರದಿಯಾಗಿದೆ. ಈ ನಷ್ಟವು ಉದ್ಯೋಗಿಗಳ ಸಂಬಳ ಏರಿಕೆ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆ ಮೂಡಿದೆ.
ಭಾರತದ ಎರಡನೇ ಅತಿದೊಡ್ಡ ಕಂಪನಿಯಾಗಿರುವ ಭಾರ್ತಿ ಏರ್‌ಟೆಲ್‌ನ ಮಾರುಕಟ್ಟೆ ಮೌಲ್ಯದಲ್ಲಿ ಕುಸಿತ ಕಂಡಿದೆ. ಭಾರ್ತಿ ಏರ್‌ಟೆಲ್ ಮೌಲ್ಯ 44,407.77 ಕೋಟಿ ರೂ.ಗಳಷ್ಟು ಕುಸಿದು, 9.3 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.
ಕಳೆದ ವಾರ, ಬಿಎಸ್‌ಇ ಮಾನದಂಡವು 628.15 ಪಾಯಿಂಟ್‌ಗಳು ಅಥವಾ 0.82% ನಷ್ಟು ಕುಸಿತ ಕಂಡರೆ, ನಿಫ್ಟಿ 133.35 ಪಾಯಿಂಟ್‌ಗಳು ಅಥವಾ 0.58% ನಷ್ಟು ಕುಸಿತ ಕಂಡಿತು. ಹಾಗಾಗಿ ಬಹುತೇಕ ಎಲ್ಲಾ ದೈತ್ಯ ಕಂಪನಿಗಳ ನಿವ್ವಳ ಮೌಲ್ಯದಲ್ಲಿ ಕುಸಿತ ಕಂಡಿದೆ.