ಯುದ್ಧ ಭೂಮಿಯಲ್ಲಿ ಕಾಂಡೋಮ್; ಎಲ್ಲೇ ವಾರ್ ಶುರುವಾದ್ರೂ ಹೆಚ್ಚಾಗೋದ್ಯಾಕೆ ಬೇಡಿಕೆ?
ಪ್ರಪಂಚದಲ್ಲಿ ಎಲ್ಲಿಯೇ ಯುದ್ಧ ಶುರುವಾದರೂ ಶಸ್ತ್ರಾಸ್ತ್ರ, ಆಹಾರ, ಔಷಧಿಗಳ ಜೊತೆಗೆ ಕೆಲವು ಸಾಮಾನ್ಯ ವಸ್ತುಗಳಿಗೂ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಈ ಪಟ್ಟಿಯಲ್ಲಿ ಕಾಂಡೋಮ್‌ಗಳೂ ಇವೆ. ಅಂದಹಾಗೆ, ಯುದ್ಧದ ಸಮಯದಲ್ಲಿ ಇವುಗಳಿಗೆ ಯಾಕೆ ಬೇಡಿಕೆ ಹೆಚ್ಚಾಗುತ್ತೆ ಎಂಬುದರ ಮಾಹಿತಿ ಇಲ್ಲಿದೆ.

ಯುದ್ಧ ಸಮಯದಲ್ಲಿ ಡಿಮಾಂಡ್!
ಬಂದೂಕಿನ ನಳಿಕೆಯ ತುದಿಗೆ ಕಾಂಡೋಮ್
ವಾಟರ್‌ಪ್ರೂಫ್ ಕವರ್ ನಂತೆ ಬಳಕೆ
ಈ ಹಿಂದೆಯೂ ಬಳಕೆ
ಕಾಂಡೋಮ್‌ಗಳ ಬಳಕೆ ಕೇವಲ ಭೂಮಿಯಲ್ಲಿ ಮಾತ್ರವಲ್ಲ, ಸಮುದ್ರ ಯುದ್ಧಗಳಲ್ಲೂ ಇದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಸಮುದ್ರದಲ್ಲಿ ಸ್ಫೋಟಕಗಳನ್ನು (ಲಿಂಪೆಟ್ ಮೈನ್‌ಗಳು) ನೀರಿನಿಂದ ರಕ್ಷಿಸಲು ಕಾಂಡೋಮ್‌ಗಳನ್ನು ಬಳಸಲಾಗಿತ್ತು ಎಂಬ ಮಾಹಿತಿ ಇದೆ. ಇವು ವಾಟರ್‌ಪ್ರೂಫ್ ಕವರ್‌ನಂತೆ ಕೆಲಸ ಮಾಡಿ, ಸ್ಫೋಟಕ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಿದವು.
ಇದನ್ನೂ ಓದಿ: ಬಯಲಾಯ್ತು ಕಾಂಡೋಮ್ ಗುಟ್ಟು! ಘಮಘಮಕ್ಕೆ ಬೆಂಗಳೂರು, ನವರಾತ್ರಿಯಲ್ಲಿ ಗುಜರಾತ್ ಟಾಪ್ 1
ಯುದ್ದಭೂಮಿಯಲ್ಲಿ ಕಾಂಡೋಮ್
ಯುದ್ಧಭೂಮಿಯಲ್ಲಿ ವೈದ್ಯಕೀಯ ಸಾಮಗ್ರಿಗಳ ಕೊರತೆ ಇರುವುದು ಸಾಮಾನ್ಯ. ಅಂತಹ ಸಮಯದಲ್ಲಿ ಸೈನಿಕರು ಕಾಂಡೋಮ್‌ಗಳನ್ನು ತಾತ್ಕಾಲಿಕ ಗ್ಲೌಸ್‌ಗಳಾಗಿ ಅಥವಾ ಗಾಯಗಳನ್ನು ಮುಚ್ಚಲು ಬಳಸುತ್ತಾರೆ. ಇದು ಸೋಂಕು ತಗಲುವ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಒಟ್ಟಾರೆಯಾಗಿ, ಕಾಂಡೋಮ್‌ಗಳು ಕೇವಲ ವೈಯಕ್ತಿಕ ಆರೋಗ್ಯಕ್ಕೆ ಮಾತ್ರವಲ್ಲದೆ, ಯುದ್ಧದ ಸಮಯದಲ್ಲಿ ಸೈನಿಕರಿಗೆ ಹಲವು ವಿಧಗಳಲ್ಲಿ ಉಪಯುಕ್ತವಾಗಿವೆ.
ಇದನ್ನೂ ಓದಿ: ಏಷ್ಯಾದಲ್ಲಿ ಅತಿ ಹೆಚ್ಚು ಕಾಂಡೋಮ್ ಬಳಸುವ ಮತ್ತು ಮಾರುವವ ದೇಶ ಯಾವುದು ಗೊತ್ತಾ? ಸಾವಿರಾರು ಕೋಟಿಯ ಉದ್ಯಮವಿದು!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

