ಲಾಭ ಗಳಿಸುವ government ಷೇರುಗಳಿವು, ಡಿವಿಡೆಂಡ್‌ಗೂ ಬೆಸ್ಟ್, ಗ್ರೋತ್‌ಗೂ ಬೆಸ್ಟ್!
ಸ್ಟಾಕ್ ಅನ್ನು ಖರೀದಿಸುವುದು ಸುಲಭ, ಆದರೆ ಹೆಚ್ಚು ಡಿವಿಡೆಂಡ್ ಸಿಗುವ ಸ್ಟಾಕ್ ಅನ್ನು ಹುಡುಕುವುದು ಕಷ್ಟ. ದೀರ್ಘಾವಾದಿಯ ಈಕ್ವಿಟಿ ಮೇಲಿನ ಹೂಡಿಕೆ ಮಾಡಿದರೆ ಮುಕ್ಕಾಲು ಪಾಲು ಲಾಭವನ್ನೇ ನೀಡುತ್ತದೆ. ಇಂದಿನ ದಿನಗಳಲ್ಲಿ ಇರುವ ಹಣದುಬ್ಬರವನ್ನ ಸಮರ್ಥವಾಗಿ ನಿರ್ವಹಿಸಲು ಇಂತಹ ಹೂಡಿಕೆಗಳನ್ನ ಮಾಡದೆ ಬೇರೆ ದಾರಿಯಿಲ್ಲ ಎನ್ನುವಂತಾಗಿದೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುಲು ಉತ್ತಮ government ಷೇರುಗಳು ಇಲ್ಲಿವೆ.
fertilisers and chemical travancore limited ಸ್ಟಾಕ್ ಬೆಲೆ ಇಂದು 23 ಸೆಪ್ಟೆಂಬರ್ 2023 ರಂದು 1.98 % ರಷ್ಟು ಏರಿಕೆಯಾಗಿದೆ. ಪ್ರತಿ ಷೇರಿಗೆ 535.75 ಬೆಲೆ ಹೊಂದಿದೆ. ಪ್ರಸ್ತುತ ಪ್ರತಿ ಷೇರಿಗೆ 538.15 ರಂತೆ ವಹಿವಾಟು ನಡೆಸುತ್ತಿದೆ. ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ₹ 33964.81 ಕೋಟಿ. ಷೇರುಗಳಿಗೆ 52 ವಾರದ ಗರಿಷ್ಠ ₹ 576.35 ಮತ್ತು 52 ವಾರಗಳ ಕನಿಷ್ಠ ₹ 104.35 ಆಗಿದೆ.
rail vikas nigam ಕಳೆದ ಮೂರು ತಿಂಗಳುಗಳಲ್ಲಿ ರೈಲ್ ವಿಕಾಸ್ ನಿಗಮ್ (NSE:RVNL) ಸ್ಟಾಕ್ 31% ರಷ್ಟು ಗಮನಾರ್ಹವಾಗಿ ಹೆಚ್ಚಾಗಿದೆ.ಸರಾಸರಿ ಉದ್ಯಮದ ಬೆಳವಣಿಗೆಯ 14% ಗಿಂತ ಹೆಚ್ಚಾಗಿದೆ .ಕಳೆದ ಒಂದು ವರ್ಷದಲ್ಲಿ , ಈ ಕಂಪನಿಯ ಷೇರುಗಳು ಅದರ ಹೂಡಿಕೆದಾರರಿಗೆ 418 ಶೇಕಡಾ ಲಾಭವನ್ನು ಗಳಿಸಿ ಕೊಟ್ಟಿದೆ.
mazagon dock shipbuilders ಕಂಪನಿಯು ಈಗ ಪ್ರಸಕ್ತ ಹಣಕಾಸು ವರ್ಷದಲ್ಲಿ 12-15 ಶೇಕಡಾ ಆದಾಯದ ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ, ಕಂಪನಿಯ ಮಾರುಕಟ್ಟೆ ಬಂಡವಾಳವು ₹ 44,527.1 ಕೋಟಿಯಷ್ಟಿದೆ. ಷೇರುಗಳಿಗೆ 52 ವಾರದ ಗರಿಷ್ಠ ₹ 2483 ಮತ್ತು 52 ವಾರಗಳ ಕನಿಷ್ಠ ₹ 412.45 ಆಗಿದೆ.
power finance corporation ರಾಜ್ಯ-ಚಾಲಿತ ಜಲವಿದ್ಯುತ್ ಶಕ್ತಿ ಉತ್ಪಾದಕ SJVN ಯೋಜನೆಗಳಿಗೆ ಹಣಕಾಸಿನ ಸಹಾಯಕ್ಕಾಗಿ ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (PFC) ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿದೆ ಹೀಗಾಗಿ ಷೇರುಗಳು ದಾಖಲೆಯ ಎತ್ತರವನ್ನು ತಲುಪಿದೆ.