- Home
- Business
- 5000% ಲಾಭ! ಒಂದೇ ವರ್ಷದಲ್ಲಿ ಹೂಡಿಕೆದಾರರನ್ನು ಕೋಟ್ಯಧಿಪತಿಯನ್ನಾಗಿ ಮಾಡಿದ 11 ರೂ. ಷೇರು; ಹಣದ ಸುರಿಮಳೆ
5000% ಲಾಭ! ಒಂದೇ ವರ್ಷದಲ್ಲಿ ಹೂಡಿಕೆದಾರರನ್ನು ಕೋಟ್ಯಧಿಪತಿಯನ್ನಾಗಿ ಮಾಡಿದ 11 ರೂ. ಷೇರು; ಹಣದ ಸುರಿಮಳೆ
ಎಲೈಟ್‌ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್ ಷೇರು ಕಳೆದ ವರ್ಷದಲ್ಲಿ ಶೇ.5000ಕ್ಕೂ ಹೆಚ್ಚು ಲಾಭ ನೀಡಿದೆ. ಒಂದು ಲಕ್ಷ ರೂ. ಹೂಡಿಕೆ 50 ಲಕ್ಷ ರೂ. ಆಗಿದೆ. ಈ ಮಲ್ಟಿಬ್ಯಾಗರ್ ಸ್ಟಾಕ್ ಹೂಡಿಕೆದಾರರನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿದೆ.

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಲಾಭ ಸಂಪಾದಿಸೋದು ಸುಲಭದ ಮಾತಲ್ಲ. ಹೂಡಿಕೆದಾರರು ಮಾರುಕಟ್ಟೆಗೆ ಅನುಗುಣವಾಗಿ ಬಹಳ ಸಮಂಜಸವಾದ ನಿರ್ಧಾರ ತೆಗೆದುಕೊಳ್ಳಬೇಕು. ಹಾಗಾದ್ರೆ ಮಾತ್ರ ನಿಮ್ಮ ಲಾಭದ ಪ್ರಮಾಣ ಅಧಿಕವಾಗಿರುತ್ತದೆ. ಇಂದು ನಾವು ಹೇಳುತ್ತಿರುವ ಮಲ್ಟಿಬ್ಯಾಗರ್ ಸ್ಟಾಕ್ ಒಂದೇ ವರ್ಷದಲ್ಲಿ ಹೂಡಿಕೆದಾರರನ್ನು ಕೋಟ್ಯಧಿಪತಿಯನ್ನಾಗಿ ಮಾಡಿದೆ.
ಎಲೈಟ್‌ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್ ಎಂಬ ಮಲ್ಟಿಬ್ಯಾಗರ್ ಸ್ಟಾಕ್ ತನ್ನ ಹೂಡಿಕೆದಾರರಿಗೆ ನಿರೀಕ್ಷೆ ಮಾಡದಷ್ಟು ರಿಟರ್ನ್ ನೀಡಿದೆ. ಎಲೈಟ್‌ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್ ತಂಬಾಕು ಉತ್ಪನ್ನಗಳನ್ನು ವ್ಯವಹರಿಸುತ್ತದೆ. ಕೇವಲ ಒಂದು ವರ್ಷದೊಳಗೆ ಹಣದ ಮಳೆಯನ್ನು ಹೂಡಿಕೆದಾರರ ಮೇಲೆ ಸುರಿಸಿದೆ.
ಕಳೆದ ವಾರದ ಅಂತ್ಯಕ್ಕೆ ಅಂದ್ರೆ ಶುಕ್ರವಾರ ಎಲೈಟ್‌ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್ ಷೇರುಗಳ ಮೌಲ್ಯ ಶೇ.5ರಷ್ಟು ಏರಿಕೆ ಕಂಡಿತ್ತು. 52 ವಾರಗಳ ಗರಿಷ್ಠ ಬೆಲೆಯೊಂದಿಗೆ 571.05 ರೂ.ಗಳಲ್ಲಿ ಮುಕ್ತಾಯಗೊಂಡಿತ್ತು. ಒಂದು ವರ್ಷದಲ್ಲಿ ಹೂಡಿಕೆದಾರರಿಗೆ ಶೇ.5000 ರಷ್ಟು ಪ್ರಚಂಡ ಲಾಭವನ್ನು ನೀಡಿದೆ. ಕಳೆದ ವಾರ, ಈ ಷೇರು ಸುಮಾರು 27% ರಷ್ಟು ಏರಿಕೆಯಾದರೆ, ಒಂದು ತಿಂಗಳಲ್ಲಿ ಸುಮಾರು 57% ರಷ್ಟು ಏರಿಕೆಯಾಗಿದೆ.
ಆರು ತಿಂಗಳ ಹಿಂದೆ ಯಾರಾದರೂ ಎಲೈಟ್‌ಕಾನ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಷೇರುಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಇಂದು ಅದರ ಮೌಲ್ಯ ಸುಮಾರು 7.5 ಲಕ್ಷ ರೂಪಾಯಿಗಳಾಗುತ್ತಿತ್ತು, ಅಂದರೆ 1 ಲಕ್ಷ ರೂಪಾಯಿ ಹೂಡಿಕೆಯಿಂದ 6.5 ಲಕ್ಷ ರೂಪಾಯಿಗಳ ಲಾಭ ಬಂದಿರುತ್ತಿತ್ತು. ಅಂದರೆ ಆರು ತಿಂಗಳಲ್ಲಿ ಅದು ಶೇಕಡಾ 655 ರಷ್ಟು ಅದ್ಭುತ ಲಾಭವನ್ನು ನೀಡಿದೆ.
ಈ ಕಂಪನಿಯ ಷೇರುಗಳಲ್ಲಿ ಯಾರಾದರೂ ಒಂದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರೆ, ಒಂದು ವರ್ಷದಲ್ಲಿ ಶೇಕಡಾ 5000 ಕ್ಕಿಂತ ಹೆಚ್ಚು ಲಾಭ ಪಡೆಯುತ್ತಿದ್ದರು. ಈಗ ಈ ಷೇರುಗಳ ಮೌಲ್ಯ 50 ಲಕ್ಷ ರೂಪಾಯಿಗಳಾಗುತ್ತಿತ್ತು. ಒಂದು ವರ್ಷದ ಹಿಂದೆ ಈ ಷೇರಿನ ಬೆಲೆ 11 ರೂಪಾಯಿಗಳಷ್ಟಿತ್ತು, ಈಗ ಅದು 571 ರೂಪಾಯಿಗಳಿಗಿಂತ ಹೆಚ್ಚಾಗಿದೆ
Disclaimer:ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

