ಮಾರುಕಟ್ಟೆ ಏರಿಳಿತದಲ್ಲಿ ನಿಮ್ಮ SIP ಹೂಡಿಕೆ ಮುಂದುವರಿಸಬೇಕೆ?ತಜ್ಞರ ಸೂಚನೆ ಏನು?
SIP ಮ್ಯೂಚುಯಲ್ ಫಂಡ್‌ಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವ ಒಂದು ವಿಧಾನ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಆದ ಕುಸಿತ, ನಷ್ಟ ಹಲವರನ್ನು ಭಯಭೀತ ಗೊಳಿಸಿದೆ. ಈ ಪರಿಸ್ಥಿತಿಯಲ್ಲಿ ಎಸ್ಐಪಿ ಹೂಡಿಕೆ ಮುಂದುವರಿಸಬೇಕಾ?

SIP ಎಂದರೇನು?
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಒಂದು ವಿಧಾನವೇ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ಅಥವಾ SIP. ಮ್ಯೂಚುವಲ್ ಫಂಡ್‌ನಲ್ಲಿ ಒಟ್ಟಿಗೆ ಹೂಡಿಕೆ ಮಾಡದೆ, ಕಂತುಗಳಲ್ಲಿ ಹೂಡಿಕೆ ಮಾಡುವುದು SIP ವಿಧಾನದ ಮೂಲ ತತ್ವ.
SIP ಮೂಲಕ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಕನಿಷ್ಠ 100 ರೂಪಾಯಿಯಿಂದ ಕಂತು ರೂಪದಲ್ಲಿ ಹೂಡಿಕೆ ಮಾಡಬಹುದು. ಇದು ನಿರಂತರ ಠೇವಣಿಯಂತೆ.
SIP ಹೂಡಿಕೆ ಹೇಗೆ ಕೆಲಸ ಮಾಡುತ್ತದೆ?
SIP ಒಂದು ಸುಲಭವಾದ ಹೂಡಿಕೆ ಯೋಜನೆ. ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಿ, ನಿರ್ದಿಷ್ಟ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೂಡಿಕೆ ಪ್ರಾರಂಭಿಸಿದ ದಿನದ ಮಾರುಕಟ್ಟೆ ಬೆಲೆಯನ್ನು ಆಧರಿಸಿ ನಿಮಗೆ ಕೆಲವು ಯುನಿಟ್‌ಗಳನ್ನು ನೀಡಲಾಗುತ್ತದೆ.
ಪ್ರತಿ ಕಂತನ್ನು ಹೂಡಿಕೆ ಮಾಡಿದಾಗ, ಅದಕ್ಕೆ ಅನುಗುಣವಾಗಿ ಇನ್ನೂ ಕೆಲವು ಯುನಿಟ್‌ಗಳನ್ನು ಖರೀದಿಸಿ ನಿಮ್ಮ ಖಾತೆಗೆ ಸೇರಿಸಲಾಗುತ್ತದೆ. ಈ ಯುನಿಟ್‌ಗಳನ್ನು ಬೇರೆ ಬೇರೆ ಬೆಲೆಗಳಲ್ಲಿ ಖರೀದಿಸುವುದರಿಂದ ಹೂಡಿಕೆದಾರರು ರೂಪಾಯಿ ಮೌಲ್ಯ ಸೇರಿದಂತೆ ಹಲವು ಅಂಶಗಳಿಂದ ಲಾಭ ಪಡೆಯಬಹುದು.
SIP ಹೂಡಿ ಮಾರುಕಟ್ಟೆ ಸರಿ ಹೋಗೋಕೆ ಕಾಯಬೇಕು, ಆಮೇಲೆ ಶುರು ಮಾಡಬೇಕು ಅಂತ ಕೆಲವರು ಅಂದುಕೊಂಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಆದ ಕುಸಿತು ಈ ಆತಂಕ ಹೆಚ್ಚಿಸಿದೆ
ಕರಡಿ ಮಾರುಕಟ್ಟೆಯಲ್ಲಿ SIP ಹೂಡಿಕೆ ಮುಂದುವರಿಸೋದ್ರಿಂದ ಏನೆಲ್ಲಾ ಲಾಭಗಳಿವೆ
ಚಕ್ರಬಡ್ಡಿ
ಮಾರುಕಟ್ಟೆ ಚೇತರಿಕೆ ಮತ್ತು ಹೆಚ್ಚಿನ ಆದಾಯ
ಮಾರುಕಟ್ಟೆ ಟೈಮಿಂಗ್ ರಿಸ್ಕ್ ತಪ್ಪಿಸಿ
ಭಾವನೆಗಳ ನಿಯಂತ್ರಣ
ಮಾರುಕಟ್ಟೆ ಸರಿಯಿಲ್ಲದ ಕಾರಣ, ಹೆಚ್ಚಿನ ಹೂಡಿಕೆದಾರರು ಹೂಡಿಕೆ ಮಾಡಲು ಸೂಕ್ತ ಸಮಯದ ಬಗ್ಗೆ ಯೋಚಿಸುತ್ತಿರುತ್ತಾರೆ. ಮಾರುಕಟ್ಟೆಯಲ್ಲಿ ಅನುಕೂಲಕರ ವಾತಾವರಣ ಬಂದಾಗ ಹೂಡಿಕೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ SIP ನಿಮಗೆ ಅದರಿಂದ ಹೊರಬರಲು ಸಹಾಯ ಮಾಡುತ್ತದೆ.
ನೀವು ನಿಯಮಿತವಾಗಿ ಹೂಡಿಕೆ ಮಾಡುತ್ತಿದ್ದರೆ, ನಿಮ್ಮ ಹಣವು ಬೆಲೆ ಕಡಿಮೆಯಿರುವಾಗ ಹೆಚ್ಚು ಯುನಿಟ್‌ಗಳನ್ನು ಮತ್ತು ಬೆಲೆ ಹೆಚ್ಚಿರುವಾಗ ಕಡಿಮೆ ಯುನಿಟ್‌ಗಳನ್ನು ಪಡೆಯುತ್ತದೆ. ಇದರಿಂದ ನಿಮಗೆ ಅನುಕೂಲವಾಗುತ್ತದೆ.
SIP ಹೂಡಿಕೆಯಲ್ಲಿ ಚಕ್ರಬಡ್ಡಿಯ ಸರಳ ನಿಯಮವಿದೆ. ನೀವು ಎಷ್ಟು ಬೇಗ ಹೂಡಿಕೆ ಪ್ರಾರಂಭಿಸುತ್ತೀರೋ ಅಷ್ಟು ಹೆಚ್ಚು ನಿಮ್ಮ ಹಣ ಬೆಳೆಯುತ್ತದೆ.
10,000 ರೂಪಾಯಿ ಹೂಡಿಕೆ ಮಾಡಿದರೆ 1.22 ಕೋಟಿ ಸಿಗುತ್ತೆ!
ಉದಾಹರಣೆಗೆ, 20 ವರ್ಷ ವಯಸ್ಸಿನಿಂದ ತಿಂಗಳಿಗೆ 10,000 ರೂಪಾಯಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, 20 ವರ್ಷಗಳಲ್ಲಿ ಅಂದರೆ 40 ವರ್ಷ ವಯಸ್ಸಿನಲ್ಲಿ ನೀವು 24 ಲಕ್ಷ ರೂಪಾಯಿ ಹೂಡಿಕೆ ಮಾಡಿರುತ್ತೀರಿ. ಈ ಹೂಡಿಕೆಯು ವರ್ಷಕ್ಕೆ ಸರಾಸರಿ 7% ರಷ್ಟು ಬೆಳೆದರೆ, 60 ವರ್ಷ ವಯಸ್ಸನ್ನು ತಲುಪುವಾಗ ಅದು 52.4 ಲಕ್ಷ ರೂಪಾಯಿ ಆಗಿರುತ್ತದೆ.
ನೀವು 10 ವರ್ಷಗಳ ಮೊದಲೇ ಪ್ರತಿ ತಿಂಗಳು 10,000 ರೂಪಾಯಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದರೆ, 30 ವರ್ಷಗಳಲ್ಲಿ ನೀವು 36 ಲಕ್ಷ ರೂಪಾಯಿ ಹೂಡಿಕೆ ಮಾಡಿರುತ್ತೀರಿ. ಅದೇ ರೀತಿ 7% ವಾರ್ಷಿಕ ಬೆಳವಣಿಗೆಯಿದ್ದರೆ 60 ವರ್ಷ ವಯಸ್ಸಿನಲ್ಲಿ 1.22 ಕೋಟಿ ರೂಪಾಯಿ ಸಿಗುತ್ತದೆ.
ನೆನಪಿಡಬೇಕಾದ ವಿಷಯಗಳು:
ಯಶಸ್ವಿ ಹೂಡಿಕೆಗೆ ಶಿಸ್ತು ಮುಖ್ಯ. SIP ಹೂಡಿಕೆಯಲ್ಲಿ ಹಣ ಹಾಕುವಾಗ, ಪ್ರತಿ ಹೂಡಿಕೆಯು ನಿಮ್ಮ ಹಣಕಾಸಿನ ಗುರಿಗಳ ಕಡೆಗೆ ಸಾಗಬೇಕು. ದೂರದೃಷ್ಟಿಯೊಂದಿಗೆ ದೀರ್ಘಕಾಲೀನ ಆಧಾರದ ಮೇಲೆ SIP ವಿಧಾನದಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಆದರೆ, ಹೀಗೆಯೇ ಹೂಡಿಕೆ ಮಾಡಬೇಕು ಎಂದು ಏನೂ ಇಲ್ಲ.
ಹೂಡಿಕೆದಾರರು ಯಾವುದೇ ಸಮಯದಲ್ಲಿ ಈ ಯೋಜನೆಯಿಂದ ಹೊರಬರಬಹುದು. ಅಥವಾ ಹೂಡಿಕೆ ಮಾಡುವ ಮೊತ್ತವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
SIP ಎಂದರೆ ಯಾವುದೇ ತೊಂದರೆ ಇಲ್ಲದ ಸರಳ ಹೂಡಿಕೆ ವಿಧಾನ. ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಹೂಡಿಕೆ ಮೊತ್ತ ಕಡಿತಗೊಳ್ಳುತ್ತದೆ. ಆದ್ದರಿಂದ SIP ವಿಧಾನದಲ್ಲಿ ಹೂಡಿಕೆ ಮಾಡುವುದು ಸಣ್ಣ ಹೂಡಿಕೆದಾರರಿಗೆ ತುಂಬಾ ಉಪಯುಕ್ತವಾಗಿರುತ್ತದೆ.